ಹೌದು ನಮಗೆ ಅದೆಷ್ಟೋ ಅಡುಗೆ ಪದಾರ್ಥಗಳ ಮಹತ್ವದ ಬಗ್ಗೆ ಸಾಮಾನ್ಯವಾಗಿ ಗೊತ್ತಿರೋದೆ ಇಲ್ಲ. ಅಡುಗೆಯ ಮಸಾಲೆಗೆ ಅಂತ ಬಳಸುವ ಪದಾರ್ಥಗಳಿಂದ ನಮ್ಮ ದೇಹದಲ್ಲಿ ಎಷ್ಟು ರೀಗ ನಿರೋಧಕ ಶಕ್ತಿ ಹೆಚ್ಚಳ ಮಾಡುತ್ತೆ, ಅದರಿಂದ ಎಷ್ಟೋ ಕಾಯಿಲೆಗೆ ಸಿಗುವ ಪರಿಹಾರದ ಬಗ್ಗೆ ನಾಲೆಡ್ಜ್ ಇರೋದಿಲ್ಲ. ಆದರೆ ಒಂದೇ ಒಂದು ಲವಂಗಾದಿಂದ ದೇಹದಲ್ಲಿರುವ ಅದೆಷ್ಟೋ ಕಾಯಿಲೆಗಳಿಗೆ ಪರಿಹಾರ ಸಿಕ್ಕಂತೆ ಅನ್ನೋದು ಗೊತ್ತಾ. ಯಾಕಂದ್ರೆ ಈ ಲವಂಗಾದಲ್ಲಿ ಯೂಜಿನಾಲ್ (Eugenol) ಎಂಬ ಅಂಶವಿದೆ. ಇದರಲ್ಲಿ ಆಂಟಿ ಇನ್ಫೋಮೇಟರಿ, ಆಂಟಿ ವೈರಲ್, ಆಂಟಿ ಬ್ಯಾಕ್ಟೀರಿಯಾ ಇದೆ. ಪ್ರತಿದಿನ ಒಂದು ಲವಂಗವನ್ನ ನೇರವಾಗಿ ತಿನ್ನಿ. ಅದು ಆಗಲ್ಲ ಅಂದ್ರೆ ಮೂರು ಲವಂಗವನ್ನು ನೀರಿನಲ್ಲಿ ಕುದಿಸಿ, ರಾತ್ರಿ ಮಲಗುವುದಕ್ಕೂ ಮೂರು ಗಂಟೆ ಮೊದಲು ಕುಡಿಯಿರಿ. ಇದರಿಂದ ನಿಮ್ಮ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗಲಿದೆ.
ಹೀಗಾಗಿ ಇದರಿಂದ ನಿಮ್ಮ ದೇಹದಲ್ಲಿ ಯಾವುದೇ ಒಂದು ಭಾಗ ಊದಿಕೊಂಡಿದ್ದರು ಅದಕ್ಕೆ ಪರಿಹಾರ ಒದಗಿಸುತ್ತದೆ. ಹೀಗಾಗಿ ಪ್ರತಿದಿನ ಒಂದೊಂದು ಲವಂಗ ತಿನ್ನೋದನ್ನ ಅಭ್ಯಾಸ ಮಾಡಿಕೊಳ್ಳಿ.

ಅಷ್ಟೇ ಅಲ್ಲ ಲಿವರ್ ಅನ್ನ ಕ್ಲೀನ್ ಮಾಡುತ್ತೆ. ಅದರ ಜೊತೆಗೆ ಡೈಜೆಷನ್, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಇದ್ದರೆ, ಉಸಿರಾಟದ ಸಮಸ್ಯೆ ಇದ್ದರೆ, ಅಸ್ತಮಾ ಇದ್ದರೆ, ಕೆಮ್ಮಿಗೆ, ಹೃದಯಕ್ಕೂ ಒಳ್ಳೆಯದು.
ಒಂದು ವೇಳೆ ನಿದ್ದೆ ಬರ್ತಿಲ್ಲ ಎಂದು ಗೋಳಿಡುವವರು ದಿನ ಒಂದೊಂದು ಲವಂಗ ತಿಂದರೆ ಸಾಕು ಒಳ್ಳೆಯ ನಿದ್ದೆ ನಿಮ್ಮದಾಗುತ್ತದೆ. ಅಲ್ಸರ್ ಸಮಸ್ಯೆ ಇದ್ದರು ಕೂಡ ಇದರಿಂದ ಪರಿಹಾರ ಸಿಗಲಿದೆ.


















