Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡೈಲಿ ವಿಷ ಕುಡಿಯುತ್ತಿದ್ದೀನಿ : ಮೈತ್ರಿ ಬಗ್ಗೆ ಇಬ್ರಾಹಿಂ ಮತ್ತೆ ಬೇಸರ..!

---Advertisement---

 

 

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ‌ ಮಾಡಿಕೊಂಡಿರುವುದಕ್ಕೆ ಸಿ ಎಂ ಇಬ್ರಾಹಿಂ ಮತ್ತೆ ಬೇಸರ ಹೊರ ಹಾಕಿದ್ದಾರೆ. ಈ ಮೈತ್ರಿ ಬಗ್ಗೆ ನನಗ್ಯಾರು ಹೇಳಿಲ್ಲ. ಡೈಲಿ ವಿಷ ಕುಡಿದು ಬದುಕುತ್ತಿದ್ದೀನಿ ಎಂದು ಬೇಸರ ಹೊರ ಹಾಕಿದ್ದಾರೆ.

ಮೈತ್ರಿ ಜೆಡಿಎಸ್ ಗೆ ಬೇಕಿತ್ತಾ..? ಬಿಜೆಪಿಗೆ ಬೇಕಿತ್ತಾ..? ಯಾರ ಸಿದ್ಧಾಂತವನ್ನು ಯಾರೂ ಒಪ್ಪಿದ್ದಾರೆ..? ಇದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಮೈತ್ರಿಯಿಂದಾಗಿ ಹಲವು ಶಾಸಕರಿಗೆ ಅಸಮಾಧಾನವಾಗಿದೆ. ಇದರಿಂದ ಮತ್ತೊಮ್ಮೆ ಸಭೆ ಕರೆದು ಮೊದಲು ಚರ್ಚೆ ಮಾಡಿ. ಇದರಿಂದ ನಾನು ಡೈಲಿ ವಿಷ ಕುಡಿದಂತೆ ಆಗುತ್ತಿದೆ‌ ಎಂದಿದ್ದಾರೆ.

ಇನ್ನು ಮೈತ್ರಿಯಿಂದಾಗಿ ಜೆಡಿಎಸ್ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹನೂರ್ ಮಂಜುನಾಥ್ ಜೆಡಿಎಸ್ ತೊರೆಯುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎನ್ನಲಾಗುತ್ತಿದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಹನೂರು ಮಂಜುನಾಥ್ ಭೇಟಿ ಮಾಡಿರುವುದೇ ಈ ಚರ್ಚೆಯ ವಿಚಾರಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವುದು ಹಲವರಿಗೆ ಸಮಾಧಾನವಾಗಿಲ್ಲ. ಹೀಗಾಗಿ ನೇರವಾಗಿಯೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಈ ಮೈತ್ರಿಯನ್ನು ಒಪ್ಪಬೇಕೋ ಬೇಡವೋ ಎಂಬ ಗೊಂದಲವೇ ಹಲವರಲ್ಲಿದೆ. ಅಷ್ಟೇ ಅಲ್ಲ ಈ ಮೈತ್ರಿಗೆ ಜೆಡಿಎಸ್ ರಾಜ್ಯಾಧ್ಯಕ್ಷೃಎ ಒಪ್ಪಿಗೆ ಸೂಚಿಸದೆ ಇರುವುದು ಎಲ್ಲರ ಗಮನ ಸೆಳೆದಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...