ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದಕ್ಕೆ ಸಿ ಎಂ ಇಬ್ರಾಹಿಂ ಮತ್ತೆ ಬೇಸರ ಹೊರ ಹಾಕಿದ್ದಾರೆ. ಈ ಮೈತ್ರಿ ಬಗ್ಗೆ ನನಗ್ಯಾರು ಹೇಳಿಲ್ಲ. ಡೈಲಿ ವಿಷ ಕುಡಿದು ಬದುಕುತ್ತಿದ್ದೀನಿ ಎಂದು ಬೇಸರ ಹೊರ ಹಾಕಿದ್ದಾರೆ.
ಮೈತ್ರಿ ಜೆಡಿಎಸ್ ಗೆ ಬೇಕಿತ್ತಾ..? ಬಿಜೆಪಿಗೆ ಬೇಕಿತ್ತಾ..? ಯಾರ ಸಿದ್ಧಾಂತವನ್ನು ಯಾರೂ ಒಪ್ಪಿದ್ದಾರೆ..? ಇದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಮೈತ್ರಿಯಿಂದಾಗಿ ಹಲವು ಶಾಸಕರಿಗೆ ಅಸಮಾಧಾನವಾಗಿದೆ. ಇದರಿಂದ ಮತ್ತೊಮ್ಮೆ ಸಭೆ ಕರೆದು ಮೊದಲು ಚರ್ಚೆ ಮಾಡಿ. ಇದರಿಂದ ನಾನು ಡೈಲಿ ವಿಷ ಕುಡಿದಂತೆ ಆಗುತ್ತಿದೆ ಎಂದಿದ್ದಾರೆ.
ಇನ್ನು ಮೈತ್ರಿಯಿಂದಾಗಿ ಜೆಡಿಎಸ್ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹನೂರ್ ಮಂಜುನಾಥ್ ಜೆಡಿಎಸ್ ತೊರೆಯುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎನ್ನಲಾಗುತ್ತಿದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಹನೂರು ಮಂಜುನಾಥ್ ಭೇಟಿ ಮಾಡಿರುವುದೇ ಈ ಚರ್ಚೆಯ ವಿಚಾರಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವುದು ಹಲವರಿಗೆ ಸಮಾಧಾನವಾಗಿಲ್ಲ. ಹೀಗಾಗಿ ನೇರವಾಗಿಯೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಈ ಮೈತ್ರಿಯನ್ನು ಒಪ್ಪಬೇಕೋ ಬೇಡವೋ ಎಂಬ ಗೊಂದಲವೇ ಹಲವರಲ್ಲಿದೆ. ಅಷ್ಟೇ ಅಲ್ಲ ಈ ಮೈತ್ರಿಗೆ ಜೆಡಿಎಸ್ ರಾಜ್ಯಾಧ್ಯಕ್ಷೃಎ ಒಪ್ಪಿಗೆ ಸೂಚಿಸದೆ ಇರುವುದು ಎಲ್ಲರ ಗಮನ ಸೆಳೆದಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















