ಸುದ್ದಿಒನ್, ಏಪ್ರಿಲ್. 11 : ನಗರದ ರುಡ್‌ಸೆಟ್ ಸಂಸ್ಥೆಯಲ್ಲಿ ನಿರುದ್ಯೋಗಿ ಗ್ರಾಮೀಣ ಭಾಗದ ಯುವತಿಯರಿಗಾಗಿ ಸ್ವ ಉದ್ಯೋಗ ಮಾಡಲು ಈ ಕೆಳಗಿನ ತರಬೇತಿಗಳನ್ನು ಏಪ್ರಿಲ್ 13 ರಂದು ಸಂದರ್ಶನ ಆಯೋಜಿಸಲಾಗಿದೆ. ಆದ್ದರಿಂದ ಆಸಕ್ತರು ನೇರವಾಗಿ ಸಂದರ್ಶನ ದಲ್ಲಿ ಭಾಗವಹಿಸಲು ಸಂಸ್ಥೆ ತಿಳಿಸಿದೆ.
• ಮಹಿಳೆಯರ ಎಂಬ್ರಾಯಿಡರಿ ವರ್ಕ್ (ಆರಿ ವರ್ಕ್) ತರಬೇತಿ – 30 ದಿನಗಳು
• ಮಹಿಳೆಯರ ಬ್ಯೂಟಿ ಪಾರ್ಲರ್ ತರಬೇತಿ – 35 ದಿನಗಳು
ಸಂದರ್ಶನದ ದಿನಾಂಕ :- 13.04.2026
ಅಭ್ಯರ್ಥಿಗಳ ಅರ್ಹತೆ :
19 ರಿಂದ 50 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
ಕನ್ನಡ ಓದಲು ಬರೆಯಲು ಬಲ್ಲವರಾಗಿರಬೇಕು.
ತರಬೇತಿಗೆ ಸಂಬಂಧಿಸಿದಂತೆ ಪ್ರಾಥಮಿಕ ಜ್ಞಾನ ಹೊಂದಿರಬೇಕು.
ಉದ್ಯೋಗವನ್ನು ಮಾಡಬೇಕೆಂಬ ಆಸಕ್ತಿ ಹೊಂದಿರಬೇಕು.
ಈ ತರಬೇತಿಗೆ ಸಂಬಂದಪಟ್ಟ ಕೌಶಲ್ಯ ಕುರಿತು ಪ್ರಾರ್ಥಮಿಕ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ತರಬೇತಿಯು ಊಟ ಮತ್ತು ವಸತಿ ಸಹಿತವಾಗಿ ಸಂಪೂರ್ಣ ಉಚಿತವಾಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಮೊಬೈಲ್ ನಂಬರ್‌ವುಳ್ಳ ಸ್ವವಿಳಾಸದ ಅರ್ಜಿಯೊಂದಿಗೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ , ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿಗಳೊಂದಿಗೆ ದಿನಾಂಕ 13.04.2026 ರಂದು ರುಡ್‌ಸೆಟ್ ಸಂಸ್ಥೆಯಲ್ಲಿ ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8618282445, 8660627785, 9019244300
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









