ಬೆಂಗಳೂರು: ಎಐ ತಂತ್ರಜ್ಞಾನದ ಆವಿಷ್ಕಾರ ಆದಾಗಿನಿಂದ ಅದೆಷ್ಟೋ ಜನರ ಕೆಲಸಗಳು ಕಣ್ಮರೆಯಾಗಿವೆ. ಇನ್ಮುಂದೆ ಕೂಡ ಸಾಕಷ್ಟು ಜನ ಕೆಲಸ ಕಳೆದುಕೊಳ್ಳಲಿದ್ದಾರೆ. ಅದರಲ್ಲೂ ಶೇಕಡ 60ರಷ್ಟು ಜನ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಈಗಾಗಲೇ ತಜ್ಞರು ತಿಳಿಸಿದ್ದಾರೆ. ಎಐನಿಂದ ಭವಿಷ್ಯ ಏನಾಗಬಹುದು ಎಂಬುದನ್ನ ಐಎಂಎಫ್ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಕ್ರಿಸ್ಟಾಲಿನಾ ಜಾರ್ಜಿಯೆವಾ ತಿಳಿಸಿದ್ದಾರೆ.
ನಾವೂ ಕೆಲ ಸಂಶೋಧನೆ ಮೂಲಕ ಉತ್ತರ ಕಂಡುಕೊಂಡಿದ್ದೇವೆ. ನಮಗೆ ಗೊತ್ತಾದಂತೆ, ಎಐನಿಂದ ಜಾಗತಿಕ ಬೆಳವಣಿಗೆಯಲ್ಲಿ ಒಂದು ಪ್ರತಿಶತ ಅಂಕ ಹೆಚ್ಚಬಹುದು. ಶೇಕಡ 0.8ರಷ್ಟು ಪ್ರಗತಿ ಹೆಚ್ಚಬಹುದು. ಕೋವಿಡ್ ಗೆ ಮುಂಚಿನದ್ದಕ್ಕಿಂತ ಹೆಚ್ಚು ವೇಗವಾಗಿ ಜಗತ್ತು ಬೆಳೆಯಬಹುದು. ಎಐನಿಂದಾಗಿ ಭಾರತವೂ ಹೆಚ್ಚು ವೇಗದಲ್ಲಿ ಬೆಳವಣಿಗೆ ದಾಖಲಿಸಲು ಅವಕಾಶ ಇರುತ್ತದರ. ಭಾರತದ ವಿಕಸಿತ ಭಾರತದ ಗುರಿ ಈಡೇರಿಕೆ ಅಸಾಧ್ಯವೇನೂ ಆಗುವುದಿಲ್ಲ ಎಂದು ಕ್ರಿಸ್ಟಾಲಿನಾ ಜಾರ್ಜಿಯೆವಾ ತಿಳಿಸಿದ್ದಾರೆ.

ಭಾರತವೂ 2047ರ ಒಳಗೆ ವಿಕಸಿತ ದೇಶವಾಗುವ ಮತ್ತು 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯನ್ನ ಹೊಂದಲಾಗಿದೆ. ಎಐ ಕ್ರಾಂತಿ ನಡೆಯುತ್ತಿರುವಾಗ ಕೋಡಿಂಗ್ ರಚಿಸುವುದು ಗುರಿಯಾಗಿರಬಾರದು. ಕೋಡಿಂಗ್ ಬದಲು, ಎಐ ಸಿಸ್ಟಂಗಳನ್ನು ನಿರ್ವಹಿಸುವ ಕೆಲಸಗಳಿಗೆ ವರ್ಗಾವಣೆ ಆಗಬೇಕು ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಮೊನ್ನೆಮೊನ್ನೆ (ಫೆ. 17) ಹೇಳಿದ್ದಾರೆ. ಅವರ ಪ್ರಕಾರ ಎಐ ತಂತ್ರಜ್ಞಾನವು ಜಾಗತಿಕವಾಗಿ 17 ಕೋಟಿ ಹೊಸ ಪ್ರಬಲ ಉದ್ಯೋಗಗಳನ್ನು ಸೃಷ್ಟಿಸಬಲ್ಲದು ಎಂದು ತಿಳಿಸಿದ್ದಾರೆ. ಐಟಿ ಬಿಟಿಗಳಲ್ಲಿ ಚೆನ್ನಾಗಿ ದುಡಿದು, ವೈಭವಯುತವಾದ ಜೀವನ ಸಾಗಿಸಬೇಕು ಅಂತ ಕನಸುಕಂಡಿದ್ದ ಅದೆಷ್ಟೋ ಸಾವಿರಾರು ಜನ ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳನ್ನು ನೆನೆದರೇನೆ ಭಯವಾಗುತ್ತೆ.
















