Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿಕೆಶಿ ಬೆಂಗಳೂರಿಗೆ ಕೊಟ್ಟಿರುವ ನೀರು.. ಕೋಲಾರ-ಚಿಕ್ಕಬಳ್ಳಾಪುರದ ಕೊಳಚೆ ನೀರಿನ ಬಗ್ಗೆ ಸದನದಲ್ಲಿ ಚರ್ಚೆ..!

---Advertisement---

ಬೆಂಗಳೂರು: ಇಂದು ಸದನದಲ್ಲಿ ಜೆಡಿಎಸ್ ಶಾಸಕ ನೊಇರಿನ ಬಗ್ಗೆ ಒಂದಷ್ಟು ಚರ್ಚೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಎಷ್ಟು ಪ್ಯೂರ್ ನೀರು ಸಿಕ್ತಿದೆ ಹಾಗೇ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎಂಥಾ ನೀರನ್ನ ಕೊಡ್ತಾ ಇದ್ದಾರೆ ಎಂಬ ಬಗ್ಗರ ಧ್ವನಿ ಎತ್ತಿದ್ದಾರೆ. ಎರಡು ಬಾಟೆಲ್ ನಲ್ಲಿ ನೀರು ತಂದು ಸದನದಲ್ಲಿ ಅದನ್ನ ಪ್ರದರ್ಶನ ಮಾಡಿದ್ದಾರೆ. ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಮಾತ್ರ ಸಂಸ್ಕರಿಸಿ ಬಿಡಲಾಗುತ್ತಿದೆ. ಅದರಲ್ಲಿ ರಾಸಾಯನಿಕ ಮಿಶ್ರಿತ ನೊರೆ ಕಂಡು ಬರುತ್ತಿದೆ ಎಂದಿದ್ದಾರೆ.

ಈ ನೀರನ್ನ ಕೆರೆಗೆ ತುಂಬಿಸ್ತಾ ಇರುವುದರಿಂದ ಜಲಚರಗಳಿಗೆ ಹಾನಿ ಉಂಟಾಗುತ್ತಿದರ. ಕೃಷಿ ಚಟುವಟಿಕೆಗೂ ಈ ನೀರನ್ನೇ ಉಪಯೋಗಿಸುತ್ತಿರುವ ಕಾರಣ ಬೆಳೆಗಳು ರೋಗಕ್ಕೆ ತುತ್ತಾಗುತ್ತಿವೆ. ಈ ಬೇಳೆಗಳ ಸೇವನೆಯಿಂದ ಜನರು ಕೂಡ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ ಎಂದು ಸಮೃದ್ಧಿ ಮಂಜುನಾಥ್ ಆರೋಪ ಮಾಡಿದರು.

ಇದಕ್ಕೆ ಸದನದಲ್ಲಿಯೇ ಸಚಿವ ಕೃಷಗಣ ಭೈರೇಗೌಡ ಅವರು ಕೂಡ ಉತ್ತರಿಸಿದ್ದಾರೆ. ಹದಗೆಟ್ಟ ಪರಿಸ್ಥಿತಿಯಲ್ಲಿ ನೀರು ಪೂರೈಕೆ ಮಾಡಿದ್ದೇವೆ. ಏನಾದರೂ ಸಮಸ್ಯೆ ಇದ್ದರೆ ಬಗೆಹರಿಸುತ್ತೇವೆ. ಆದರೆ ಈ ಹಿಂದೆ ಭದ್ರಾ ಮೂಲಕ ನೀರು ಪೂರೈಕೆ ಮಾಡುತ್ತೇವೆ ಎಂದು ಹೇಳಿದ್ದವರು ಪೂರೈಕೆ ಮಾಡಿಲ್ಲ. ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುವುದರಿಂದ ಅನುಕೂಲ ಇಲ್ಲ. ಯಾವ ರೈತರಿಗೂ ಯೊಂದರೆ ಆಗದಂತೆ ನೋಡುತ್ತೇವೆ. ವೈಜ್ಞಾನಿಕ ಆಧಾರದಲ್ಲಿ ಸಾಬೀತಾದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದರು. ವೈಜ್ಞಾನಿಕ ವರದಿ ಇಲ್ಲದೆ ಆರೋಪ ಮಾಡುವುದಿ ಸರಿಯಲ್ಲ. ವಿದೇಶದ ತಂಡ ಹಾಗೂ ಕೇಂದ್ರದ ತಂಡ ಕೂಡ ಬಂದು ಕೆರೆಯನ್ನು ನೋಡಿ ಹೊಗಳಿ ಹೋಗಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...