ಕಾಂಗ್ರೆಸ್ ಸರ್ಕಾರದಲ್ಲಿ ಬಜೆಟ್ ಮುಗಿದ ಮೇಲೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಖಾತೆ ಬದಲಾವಣೆಗೆ ಸಚಿವರೊಬ್ಬರು ಪಟ್ಟು ಹಿಡಿದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅದರಲ್ಲೂ ಸಾರಿಗೆಯಂಥ ಸ್ಟ್ರಾಂಗೆಸ್ಟ್ ಖಾತೆಯನ್ನೇ ಬಿಟ್ಟು ಬೇರೊಂದು ಖಾತೆಗೆ ಡಿಮ್ಯಾಂಡ್ ಇಟ್ಟಿದ್ದಾರೆ. ಅವರು ಬೇರೆ ಯಾರೂ ಅಲ್ಲ ಸಚುವ ರಾಮಲಿಂಗಾ ರೆಡ್ಡಿ ಅವರು.
ಹೌದು ಸದ್ಯಕ್ಕೆ ರಾಮಲಿಂಗಾ ರೆಡ್ಡಿ ಅವರು ಸಾರಿಗೆ ಸಚಿವರಾಗಿದ್ದಾರೆ. ಆದರೆ ಈಗ ಖಾತೆ ಬದಲಾವಣೆಗೆ ಬಯಸಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಬಳಿ ಈ ಸಂಬಂಧ ಈಗಾಗಲೇ ಚರ್ಚೆಯೂ ನಡೆದಿದೆ. ಸಾರಿಗೆ ಖಾತೆ ಬದಲಿಗೆ ಬೇರೆ ಖಾತೆ ಕೊಡಿ ಎಂದು ಕೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸದ್ಯ ಕಾಂಗ್ರೆಸ್ ಆಡಳಿತ ಮಂಡಳಿಯಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.
ಬಜೆಟ್ ಮಂಡನೆ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿತ್ತು. ಹೀಗಾಗಿ ಸಚಿವ ಸಂಪುಟ ಸೇರಲು ಹಲವರು ಆಕಾಂಕ್ಷಿಗಳಿದ್ದರು. ಇದೀಗ ರಾಮಲಿಂಗಾ ರೆಡ್ಡಿ ಅವರು ಖಾತೆ ಬದಲಾವಣೆಗೆ ಒಟ್ಟು ಹಿಡಿದಿರುವುದಕ್ಕೂ ಕಾರಣವಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಶಕ್ತಿ ಯೋಜನೆ ಅಂತಾನೂ ಹೇಳಲಾಗಿದ್ದು, ಈ ಬಾರಿಯ ಬಜೆಟ್ ನಲ್ಲೂ ಸಾರಿಗೆ ಇಲಾಖೆಗೆ ಏನು ನೀಡಿಲ್ಲ. ಹೀಗಾಗಿ ನಿಭಾಯಿಸುವುದು ಕಷ್ಟ ಎಂದೇ ಭಾವಿಸಿದ್ದು, ಸಾರಿಗೆ ಖಾತೆ ಬಿಟ್ಟು ಬೇರೆ ಖಾತೆಯನ್ನು ನಿಭಾಯಿಸಲು ಇಚ್ಛಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಾರುಗೆ ಇಲಾಖೆಯ ನಷ್ಟದ ಬಗ್ಗೆ ಕಳೆದ ಎರಡು ದಿನಗಳ ಹಿಂದೆಮಾತನಾಡಿದ್ದ ರಾಮಲಿಂಗಾ ರೆಡ್ಡಿ ಅವರು, ಐದು ವರ್ಷಗಳಲ್ಲಿ ಸಂಸ್ಥೆಯ ನಾಲ್ಕು ಸಾರಿಗೆ ನಿಗಮಗಳಿಗೆ 5,200 ಕೋಟಿ ನಷ್ಟವಾಗಿದೆ ಎಂದು ಹೇಳಿದ್ದರು.









