Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚನ್ನಪಟ್ಟಣ ಗೆಲುವಿನ ಶುಭ ಸೂಚನೆ ನೀಡಿದಳಾ ಹಾಸನಾಂಬೆ ತಾಯಿ : ಕುಮಾರಸ್ವಾಮಿ ದೇವರ ಮುಂದೆ ನಿಂತಾಗ ಆಗಿದ್ದೇನು..?

---Advertisement---

ಹಾಸನ: ಈಗಾಗಲೇ ಹಾಸನಾಂಬೆಯ ದರ್ಶನ ಆರಂಭವಾಗಿದೆ. ಹತ್ತು ದಿನಗಳು ಮಾತ್ರ ತಾಯಿ ದರ್ಶನ ಭಾಗ್ಯಾ ಕೊಡುತ್ತಾಳೆ. ಈ ಹತ್ತು ದಿನಗಳ ಕಾಲ ರಾಜಕಾರಣಿಗಳು, ಸಾರ್ವಜನಿಕರು ಎಲ್ಲರೂ ದರ್ಶನ ಪಡೆಯಲು ಕ್ಯೂ ನಿಂತಿರುತ್ತಾರೆ. ಇಂದು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಕುಟುಂಬಸ್ಥರು ಕೂಡ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಈ ವೇಳೆ ತಾಯಿಯ ಆಶೀರ್ವಾದ ಸಿಕ್ಕಿದೆ ಎನ್ನಲಾಗಿದೆ. ಸಿದ್ದೇಶ್ವರ ಸ್ವಾಮಿಗಳು ಹೂ ನೀಡುವ ಮೂಲಕ ಶುಭ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿ, ಪತ್ನಿ, ಸೊಸೆ,‌ ಮೊಮ್ಮಗನ ಜೊತೆಗೆ ಹಾಸನಾಂಬೆಯ ದರ್ಶನ ಮಾಡಿ ಬಳಿಕ ಸಿದ್ದೇಶ್ವರ ಸ್ವಾಮಿಗಳ ದರ್ಶನಕ್ಕೆ ಬಂದಿದ್ದರು. ಈ ವೇಳೆ ಪೂಜಾರಿಗಳು ಪೂಜೆ ಸಲ್ಲಿಸುವಾಗ ದೇವರು ಮೂರು ಹೂ ನೀಡಿದ್ದಾನೆ. ಇದನ್ನು ಕಂಡ ಅನಿತಾ ಕುಮಾರಸ್ವಾಮಿ ತುಂಬಾನೇ ಖುಷಿ ಪಟ್ಟಿದ್ದಾರೆ. ದೇವರ ಮೇಲಿಂದ ಅದರಲ್ಲೂ ಬಲಗಡೆ ಭಾಗದಿಂದ ಹೂ ಬಿದ್ದಿದೆ. ಇದನ್ಮು ಅನಿತಾ ಅವರು ನೋಡಿದ್ದು, ಕುಮಾರಸ್ವಾಮಿ ಅವರಿಗೂ ತೋರಿಸಿದ್ದಾರೆ. ಮಗನ ಗೆಲುವಿಗಾಗಿ ಬೇಡಿಕೊಳ್ಳುತ್ತಿದ್ದ ಕುಟುಂಬಕ್ಕೆ ದೇವರು ವರಕೊಟ್ಟಂತೆ ಆಗಿದೆ.

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗಟ್ಟಿ ನಿರ್ಧಾರ ಮಾಡಿ, ಬಿಜೆಪಿ ನಾಯಕರ ಜೊತೆಗೂ ಚರ್ಚಿಸಿ ನಿಖಿಲ್ ಕುಮಾರಸ್ವಾಮಿ ಅವರನ್ನು ಅಖಾಡಕ್ಕೆ ಇಳಿಸಿದ್ದಾರೆ. ಸಿಪಿ ಯೋಗೀಶ್ವರ್ ಎದುರು ನಿಖಿಲ್ ಹೋರಾಡಲೇಬೇಕಿದೆ. ಎರಡು ಬಾರಿ ಸೋತಿರುವ ನಿಖಿಲ್ ಮೂರನೆ ಬಾರಿಗೆ ಗೆಲ್ಲುವ ಎಲ್ಲಾ‌ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರ ಕುಟುಂಬ ಇಂದು ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment