Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಧರ್ಮಸ್ಥಳ ಅಪ್ಡೇಟ್ : 13 ಬಿಟ್ಟು 14ನೇ ಪಾಯಿಂಟ್ ನತ್ತ SIT : ಗುರುತಿಸದ ಸ್ಥಳದಲ್ಲಿ ಅಂಥದ್ದೇನಿದೆ..?

---Advertisement---

ಸುದ್ದಿಒನ್, ಮಂಗಳೂರು, ಆಗಸ್ಟ್. 06 : ಧರ್ಮಸ್ಥಳದ ಅಸ್ಥಿಪಂಜರದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ತನಿಖೆ ನಡೆಯುತ್ತಿದೆ. ಈಗಾಗಲೇ 12 ಪಾಯಿಂಟ್ ಗಳನ್ನು ಅಗೆಯಲಾಗಿದೆ. ಆರನೇ ಪಾಯಿಂಟ್ ನಲ್ಲಿ ಒಂದಷ್ಟು ಮೂಳೆಗಳು ಸಿಕ್ಕಿವೆ. ದೂರುದಾರ ಈ ಮೊದಲು 13 ಪಾಯಿಂಡ್ ಗಳನ್ನ ಮಾತ್ರ ಗುರುತು ಮಾಡಿದ್ದರು. ಇಂದು ಆ 13ನೇ ಪಾಯಿಂಟ್ ಅನ್ನು ಅಗೆದಿದ್ದರೆ ಎಲ್ಲವೂ ಮುಗಿಯುತ್ತಿತ್ತು. ಆದರೆ ಈಗ 14ನೇ ಪಾಯಿಂಟ್ ಕಡೆಗೆ ಎಸ್ಐಟಿ ತಂಡ ಹೊರಟಿದೆ. ಹಾಗಾದ್ರೆ ಆ 14ನೇ ಪಾಯಿಂಟ್ ಯಾವುದು ಅನ್ನೋದನ್ನ ನೋಡೋದಾದ್ರೆ ಅದರ ಮಾಹಿತಿ ಇಲ್ಲಿದೆ.

ಬಂಗ್ಲ ಗುಡ್ಡದ ಮೇಲೆ ಒಂದು ಪಾಯಿಂಟ್ ಮಾಡಲಾಗಿತ್ತು. ಮಧ್ಯಭಾಗದಲ್ಲಿ ಮಾರ್ಕ್ ಮಾಡಿರುವಂಥದ್ದೇ 14ನೇ ಪಾಯಿಂಟ್ ಆಗಿದೆ. ಮೇಲ್ಭಾಗಕ್ಕೆ ಹೋದಾಗ ಭೂಮಿಯ ಮೇಲ್ಭಾಗದಲ್ಲಿಯೇ ಒಂದು ಅಸ್ಥಿಪಂಜರ ಸಿಕ್ಕಿತ್ತು. ಹೀಗಾಗಿ ಅಲ್ಲಿನ ಮತ್ತೊಂದು ಸ್ಥಳವನ್ನ ಮಾರ್ಕ್ ಮಾಡಲಾಗಿತ್ತು. ಅಲ್ಲಿ ಸಿಕ್ಕ ಕಳೆ ಬರಹ ಕಂಪ್ಲೀಟ್ ಆತ್ಮಹತ್ಯೆ ಮಾಡಿಕೊಂಡ ರೀತಿಯಾಗಿ ಕಾಣಿಸ್ತಾ ಇತ್ತು. ಅಲ್ಲಿಯೇ ಸೀರೆ, ಹಗ್ಗ ಎಲ್ಲವೂ ಸಿಕ್ಕಿತ್ತು. ಹೀಗಾಗಿ ಆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಮತ್ತೊಂದು ಬೆಳವಣಿಗೆ ಎಂದರೆ ಎರಡನೇ ದೂರುದಾರ ಜಯಂತ್ ಎಂಬಾತನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆತನ ಹೇಳಿಕೆ ಪಡೆದು ತನಿಖೆ ನಡೆಸುವಂತೆ ಎಸ್ಐಟಿ ತಂಡಕ್ಕೆ ಸೂಚನೆ ನೀಡಿದೆ. ಹೀಗಾಗಿ ಇಂದು ಎರಡನೇ ದೂರುದಾರ ಜಯಂತ್ ನ ಮಾಹಿತಿ ಕೂಡ ಬಹಳ ಮುಖ್ಯವಾಗುತ್ತದೆ. 14ನೇ ಪಾಯಿಂಟ್ ನಲ್ಲಿ ಸಾಕಷ್ಟು ಹೆಣಗಳನ್ನ ಹೂತು ಹಾಕಲಾಗಿದೆ ಎಂಬ ಮಾತು ಇದೆ. ಹೀಗಾಗಿ ತನಿಖೆಯ ಬಳಿಕ ಏನಾಗಲಿದೆ ಎಂಬುದನ್ನ ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...