Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಧರ್ಮಸ್ಥಳ ಕೇಸ್ : ಬಿಜೆಪಿ ಆರೋಪಕ್ಕೆ ಸಚಿವರು ತಿರುಗೇಟು..!

---Advertisement---

ದಕ್ಷಿಣ ಕನ್ನಡ: ಧರ್ಮಸ್ಥಳದ ಶವ ಹೂತು ಹಾಕಿದ್ದ ಕೇಸ್ ಗೆ ಸಂಬಂಧಿಸಿದಂತೆ ಅಂದುಕೊಂಡ ಮಟ್ಟಕ್ಕೆ ಅಥವಾ ದೂರುದಾರ ಹೇಳಿದ ಮಟ್ಟಕ್ಕೆ ಯಾವುದೇ ರೀತಿಯ ಮೂಳೆಗಳು ಸಿಕ್ಕಿಲ್ಲ. ಈ ಸಂಬಂಧ ವಿರೋಧ ಪಕ್ಷದ ನಾಯಕರ ಸರ್ಕಾರವನ್ನು ಟೀಕೆ ಮಾಡುತ್ತಿದ್ದಾರೆ. ಎಸ್ಐಟಿಯನ್ನ ಯಾಕೆ ರಚನೆ ಮಾಡಬೇಕಿತ್ತು ಎಂಬ ಪ್ರಶ್ನೆಗಳನ್ನ ಕೇಳ್ತಾ ಇದ್ದಾರೆ.

ಈ ಸಂಬಂಧ ಕಾಂಗ್ರೆಸ್ ಸಚಿವರು ಮಾತನಾಡಿದ್ದಾರೆ. ಸಚಿವ ಸಂತೋಷ್ ಲಾಡ್ ಮಾತನಾಡಿ, ಎಲ್ಲದಕ್ಕೂ ಕಾಂಗ್ರೆಸ್ ಅಂದ್ರೆ ಹೇಗೆ. ಎಸ್ಐಟಿ ಮಾಡುವುದಕ್ಕೆ ಕಾರಣವೇನು. ಸ್ವ ಇಚ್ಛೆಯಿಂದ ಬಂದ ವ್ಯಕ್ತಿ ಕೋರ್ಟ್ ಬಳಿ ಹೋದ್ರು. ಇದು ಕೋರ್ಟ್ ಮುಖಾಂತರ ಆಗಿದ್ದು. ಎಸ್ಐಟಿ ಆಗಿದೆ. ಸಮರ್ಪಕವಾಗಿ ಎಸ್ಐಟಿ ಉತ್ತರ ಕೊಡುತ್ತೆ. ಸಾವಿರಾರು ಬಾಡಿ ಅಂತ ಹೇಳ್ತಾನೆ. ಯಾವ ಟೈಮ್ ನಲ್ಲಿ ಏನು ಆಗಿದೆ ಗೊತ್ತಿಲ್ಲ. ಹಾಗಾಗಿ ಎಸ್ಐಟಿ ವರದಿ ಬಂದ ಬಳಿಕ ಸರ್ಕಾರ ಉತ್ತರ ಕೊಡುತ್ತೆ. ಏನೇ ಮಾಡುದ್ರು ಅದಕ್ಕೆ ಕಾಂಗ್ರೆಸ್ ಪಿತೂರಿ ಅನ್ನೋದ್ಯಾಕೆ. ಹಾಗಾದ್ರೆ ಕಾಂಗ್ರೆಸ್ ಏನು ಮಾಡ್ಬೇಕು ಎಂದು ಕೇಳಿದ್ದಾರೆ.

ಇನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಮಂಜುನಾಥನ ಭಕ್ತರು ಬಿಜೆಪಿಗಿಂತ ಕಾಂಗ್ರೆಸ್ ನಲ್ಲಿಯೇ ಜಾಸ್ತಿ ಇದ್ದಾರೆ. ಅವರು ಈ ವಿಚಾರದಲ್ಲಿ ರಾಜಕಾರಣ ಮಾಡುವುದಕ್ಕೆ ಹೋಗಬಾರದು. ನಾವೂ ರಾಜಕೀಯ ಮಾಡಿಲ್ಲ. ಎಸ್ಐಟಿ ತನಿಖೆ ನಡೀತಾ ಇದೆ ಎಂದಾಗ ನಾನು ಮಾತನಾಡದೆ ಸುಮ್ಮನೆ ಆದೆ. ಏನು ಸಿಕ್ಕಿಲ್ಲ ಅಂದ್ರೆ ಆತನ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ..

ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಪಾರದರ್ಶಕವಾಗಿ ಎಸ್ಐಟಿ ಅವರು ಕೆಲಸ ಮಾಡ್ತಾ ಇದ್ದಾರೆ. ಸೋಮವಾರ ಗೃಹ ಸಚಿವರು ಸದನದಲ್ಲಿ ಉತ್ತರ ಕೊಡ್ತಾರೆ. ನಮ್ಮ ಉದ್ದೇಶ ಸತ್ಯಾಂಶ ಹೊರಗೆ ಬರಬೇಕು ಅಷ್ಟೇ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment