ಮತ್ತೆ ಸದ್ದು ಮಾಡ್ತಿದೆ ಧರ್ಮಸ್ಥಳ ಕೇಸ್ : ಬಂಗ್ಲೆಗುಡ್ಡದಲ್ಲಿ ರಾಶಿ ರಾಶಿ ಮೂಳೆ

suddionenews
1 Min Read

ಧರ್ಮಸ್ಥಳ: ಹೆಣಗಳನ್ನ ಹೂತು ಹಾಕಿದ್ದೀನಿ ಅಂತ ಬಂದಿದ್ದ ಚಿನ್ನಯ್ಯ ಅವರು ಸದ್ಯ ಎಸ್ಐಟಿ ವಶದಲ್ಲಿದ್ದಾರೆ. ಚಿನ್ನಯ್ಯ ತೋರಿಸಿದ ಸಾಕಷ್ಟು ಜಾಗದಲ್ಲಿ ಮೂಳೆಗಳಾಗಲಿ, ಶವವಾಗಲಿ ಸಿಗಲಿಲ್ಲ. ಹೀಗಾಗಿ ಆತನ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಇಂದು ಬಂಗ್ಲೆಗುಡ್ಡದಲ್ಲಿ ಮತ್ತೆ ಕಾರ್ಯಾಚರಣೆ ಶುರು ಮಾಡಿದ್ದು, ಶಾಕಿಂಗ್ ವಿಚಾರಗಳು ಕಣ್ಣಿಗೆ ಬಿದ್ದಿದೆ.

ಧರ್ಮಸ್ಥಳದಲ್ಲಿ ಶವಗಳನ್ನ ನೋಡಿದ ವಿಚಾರಕ್ಕೆ ಚಿನ್ನಯ್ಯ ಆದ್ಮೇಲೆ ವಿಠಲ್ ಗೌಡ ಬಂದಿದ್ದಾರೆ. ಬಂಗ್ಲೆ ಗುಡ್ಡದಲ್ಲಿ ಎಸ್ಐಟಿ ಅಗೆಯುವಾಗ ಮೂಳೆಗಳು ಸಿಕ್ಕಿದ್ದವು. ಬಳಿಕ ಅಲ್ಲಿಯೂ ಶೋಧಕಾರ್ಯವನ್ನ ಕೈಬಿಡಲಾಗಿತ್ತು. ಆದರೆ ವಿಠಲ್ ಗೌಡ ಎಂಬಾತ ಬಂಗ್ಲೆ ಗುಡ್ಡದಲ್ಲಿಯೇ ಅನೇಕ ಅಸ್ಥಿಪಂಜರಗಳನ್ನ ನೋಡಿದ್ದೀನಿ ಎಂದು ಹೇಳಿಕೆ ನೀಡಿದ್ದರು. ಆದ ಕಾರಣ ರಸ್ಐಟಿ ಅಧಿಕಾರಿಗಳು ಮತ್ತೆ ಬಂಗ್ಲೆ ಗುಡ್ಡದಲ್ಲಿ ಅಗೆಯುವುದಕ್ಕೆ ಶುರು ಮಾಡಿತ್ತು. ನಿನ್ನೆಯೇ ಐದು ತಲೆಬುರುಡೆ ಹಾಗೂ ಹಲವು ಅಸ್ಥಿ ಪಂಜರಗಳು ಸಿಕ್ಕಿದ್ದವು.

ಇಂದು ಮೂರಿ ಗಂಟೆಗಳ ಕಾಲ ಸತತವಾಗಿ ಶೋಧ ಕಾರ್ಯ ನಡೆಸಿತ್ತು. ಮತ್ತೆರಡು ತಲೆಬುರುಡೆ, ವಾಕಿಂಗ್ ಸ್ಟಿಕ್ ಸಿಕ್ಕಿದೆ. ಜೊತೆಗೆ ಅಸ್ಥಿಪಂಜರಗಳು ಸಿಕ್ಕಿವೆ. ಇಂದು ಏಳು ಅಸ್ಥಿಪಂಜರ, ಏಳು ತಲೆ ಬುರುಡೆಗಳು ದೊರೆತಿದ್ದು, ಸಿಕ್ಕಂತ ಎಲ್ಲಾ ಅಸ್ಥಿಪಂಜರಗಳನ್ನು ಎಸ್ಐಟಿ ಅಧಿಕಾರಿಗಳು ಪ್ಲಾಸ್ಟಿಕ್ ಡಬ್ಬದಲ್ಲಿ ಸೇಫ್ ಆಗಿ ತುಂಬಿಸಿಕೊಂಡು ಹೋಗಿದ್ದಾರೆ. ಬಳಿಕ ಅದನ್ನೆಲ್ಲಾ ಎಫ್ಎಸ್ಎಲ್ ಗೆ ಕಳುಹಿಸಿ, ವರದಿ ಪಡೆಯಲಿದ್ದಾರೆ. ಚಿನ್ನಯ್ಯ ಬಂಧನದ ಬಳಿಕ ತಣ್ಣಗಾಗಿದ್ದ ಅಸ್ಥಿಪಂಜರಗಳ ಹುಡುಕಾಟ, ಈಗ ಮತ್ತೆ ವೇಗ ಪಡೆದುಕೊಂಡಿದೆ. ಮುಂದೆ ಯಾವೆಲ್ಲಾ ಜಾಗಗಳನ್ನ ಅಗೆಯುತ್ತಾರೆ, ಏನೆಲ್ಲಾ ಸಿಗಬಹುದು ಎಂಬುದನ್ನ ಕಾದು ನೋಡಬೇಕಿದೆ.

Share This Article
Enable Notifications OK No thanks