Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಧ್ಯ ಕರ್ನಾಟಕ ಜನರ ಬಹುದಿನಗಳ ಕನಸು ನನಸು : ಬೆಂಗಳೂರು-ದಾವಣಗೆರೆ ರೈಲು ಪ್ರಯಾಣ ಇನ್ಮುಂದೆ ಕೇವಲ ಎರಡೂವರೆ ಗಂಟೆ

---Advertisement---

 

ದಾವಣಗೆರೆ: ಮಧ್ಯ ಕರ್ನಾಟಕದ ಬಹುದೊಡ್ಡ ಕನಸಾಗಿರುವ ದಾವಣಗೆರೆ-ತುಮಕೂರು ನೇರ ರೈಲ್ವೆ ಯೋಜನೆಯು ಅಂತಿಮ ಹಂತಕ್ಕೆ ತಲುಪಿದ್ದು, ಈ ಮಾರ್ಗದ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಹೆಬ್ಬಾಳು ಮತ್ತು ತೋಳಹುಣಸೆ ನಿಲ್ದಾಣಗಳ ನಡುವೆ ನೂತನ ಹಳಿಯ ಮೇಲೆ ನಡೆಸಲಾದ ಸ್ಪೀಡ್ ಟ್ರಯಲ್ನಲ್ಲಿ ರೈಲು ಗಂಟೆಗೆ 125 ರಿಂದ 130 ಕ್ಕೂ ಹೆಚ್ಚು ಕಿಲೋಮೀಟರ್ ವೇಗದಲ್ಲಿ ಸಾಗುವ ಮೂಲಕ ಎಲ್ಲ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಯಾವುದೇ ತಾಂತ್ರಿಕ ಅಡೆತಡೆಗಳಿಲ್ಲದೆ ಪರೀಕ್ಷೆ ಮುಗಿದಿರುವುದರಿಂದ ಶೀಘ್ರದಲ್ಲೇ ಈ ಮಾರ್ಗಕ್ಕೆ ಗ್ರೀನ್ ಸಿಗ್ನಲ್ ದೊರೆಯುವ ನಿರೀಕ್ಷೆಯಿದೆ. ಈ ಯೋಜನೆ ಸಂಪೂರ್ಣ ಕಾರ್ಯಾರಂಭ ಮಾಡಿದರೆ ದಾವಣಗೆರೆಯಿಂದ ಬೆಂಗಳೂರಿಗೆ ಕೇವಲ ಎರಡೂವರೆ ತಾಸಿನಲ್ಲಿ ತಲುಪಬಹುದಾಗಿದೆ.

ಈ ಹೊಸ ಮಾರ್ಗದಲ್ಲಿ ದೊಡ್ಡ ಸೇತುವೆಗಳು, ಸುರಂಗಗಳು, ನದಿಗಳು ಅಥವಾ ಕಡಿದಾದ ತಿರುವುಗಳು ಇಲ್ಲದಿರುವುದು ರೈಲುಗಳು ಪೂರ್ಣ ವೇಗದಲ್ಲಿ ಚಲಿಸಲು ಪೂರಕವಾಗಿದೆ. ನಿಯಮಿತ ಸಂಚಾರಕ್ಕೆ ಗಂಟೆಗೆ 110 ರಿಂದ 120 ಕಿಮೀ ವೇಗದ ಮಿತಿಗೆ ಅನುಮೋದನೆ ದೊರೆಯುವ ಸಾಧ್ಯತೆಯಿದೆ.
ಸದ್ಯ ಬೆಂಗಳೂರು ತಲುಪಲು ಅರಸೀಕೆರೆ, ತಿಪಟೂರು ಸುತ್ತು ಬಳಸಿ ಹೋಗಬೇಕಾಗಿದ್ದು, ಐದರಿಂದ ಆರು ಗಂಟೆ ಹಿಡಿಯುತ್ತಿದೆ. ನೇರ ಮಾರ್ಗ ಆರಂಭವಾದರೆ ವಂದೇ ಭಾರತ್ ರೈಲು 2.30 ಗಂಟೆಗಳಲ್ಲಿ ಹಾಗೂ ಸಾಮಾನ್ಯ ಎಕ್ಸ್ಪ್ರೆಸ್ ರೈಲುಗಳು ಸುಮಾರು 3.30 ಗಂಟೆಗಳಲ್ಲಿ ರಾಜಧಾನಿಯನ್ನು ತಲುಪಲಿವೆ. ಇದರಿಂದ ಪ್ರಯಾಣಿಕರಿಗೆ ಕನಿಷ್ಠ ಎರಡೂವರೆಯಿಂದ ಮೂರು ಗಂಟೆಗಳ ಅಮೂಲ್ಯ ಸಮಯ ಉಳಿತಾಯವಾಗಲಿದೆ ಎನ್ನಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now