Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಖರ್ಗೆ ಸಿಎಂ ಆಗೋದನ್ನ ದೇವೇಗೌಡ್ರೆ ತಪ್ಪಿಸಿದ್ರು : ಕೆ.ಎನ್.ರಾಜಣ್ಣ ಆಕ್ರೋಶ

---Advertisement---

ತುಮಕೂರು: ಕಾಂಗ್ರೆಸ್ ನಲ್ಲಿ ದಲಿತ ಸಮಾವೇಶ, ದಲಿತ ಸಿಎಂ ಚರ್ಚೆಗಳು ಜೋರಾಗಿವೆ. ಈ ಬಗ್ಗೆ ಇಂದು ಕೆ.ಎನ್.ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ದಲಿತ ಸಿಎಂ ಪರವಾಗಿ ಅಲ್ಲ, ನಮಗೆ ಏನು ಸಂವಿಧಾನಾತ್ಮಕವಾಗಿ ಹಕ್ಕುಗಳು ದೊರೆಯಬೇಕಿದೆ, ಆ ಹಕ್ಕುಗಳನ್ನು ದೊರಕಿಸಿಕೊಳ್ಳಲು ನಾವೂ ಆ ಸಮಾವೇಶ ಮಾಡ್ತಾ ಇದ್ದೀವಿ. ಇನ್ನು ಮೂರು ತಿಂಗಳು ಇದೆ ಆ ಸಮಾವೇಶಕ್ಕೆ. ಅಷ್ಟೊತ್ತಿಗೆ ಯಾರ್ಯಾರ ಏನೇನು ಹೇಳ್ತಾರೆ ನೋಡಿಕೊಂಡು ನಿರ್ಧಾರ ಮಾಡೋಣಾ.

ದಲಿತ ಸಿಎಂ ಚರ್ಚೆ ಈಗಿನದ್ದಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲವು ದಲಿತ ಸಿಎಂ ಚರ್ಚೆ ಮುನ್ನೆಲೆಗೆ ಬರುತ್ತದೆ. ಇದೀಗ ಮತ್ತೊಮ್ಮೆ ಆ ಚರ್ಚೆ ಉದ್ಭವವಾಗಿದ್ದು, ಆ ಬಗ್ಗೆ ಮಾತನಾಡಿದ್ದ ಕೆ.ಎನ್. ರಾಜಣ್ಣ, ಖರ್ಗೆಯವರು ಮುಖ್ಯಮಂತ್ರಿ ಆಗ್ಬೇಕು ಅನ್ನೋ ಮಾತಿತ್ತು. ಆಗ ಎಸ್.ಎಂ ಕೃಷ್ಣ ಅವರು ಆರು ತಿಂಗಳು ಮುಂಚೆ ಬಂದು ಅಧ್ಯಕ್ಷರಾಗಿದ್ರು. 99 ನಲ್ಲಿ ಅವರು ಅಧ್ಯಕ್ಷ ಆದ್ರೂ ಇವರಿಗೆ ತಡವಾಯಿತು. ಅದಾದ ಮೇಲೆ 2004ರಲ್ಲಿ ಮತ್ತೆ ಸಿಎಂ ಆಗುವ ಅವಕಾಶವಿತ್ತು. ಆಗ ಸನ್ಮಾನ್ಯ ದೇವೇಗೌಡ್ರು ಖರ್ಗೆ ಅವರನ್ನು ಬಿಟ್ಟು ಧರಮ್ ಸಿಂಗ್ ಅವರಿಗೆ ಪ್ರಿಫರ್ ಮಾಡಿದ್ರು.ಸಿದ್ದರಾಮಯ್ಯ ಅವರನ್ನು ತಪ್ಪಿಸಿದರು. ಸಿದ್ದರಾಮಯ್ಯ ಅವರ ಹೆಸರನ್ನ ಹೇಳಿದ್ರೆ ಕಾಂಗ್ರೆಸ್ ನವರು ಒಪ್ಪುತ್ತಾ ಇದ್ದರು ಆಗ. ಬೇಡ ಬೇಡ ಮುಖ್ಯಮಂತ್ರಿ ನೀವೆ ಮಾಡ್ಕೊಳಿ ಅಂದ್ರು. ಆಗ ಧರಮ್ ಸಿಂಗ್ ಹೆಸರನ್ನ ಸೂಚಿಸಿದ್ರು.

ಯಾಕಂದ್ರೆ ದೇವೇಗೌಡ್ರಿಗೆ ಆಗ ಮುಂದಾಲೋಚನೆ ಇತ್ತು. ಅವರೇ ಧರಮ್ ಸಿಂಗ್ ನ ತೆಗೆದು ಬಿಟ್ರೆ. ಆದ್ರೆ ಆಗ ಖರ್ಗೆ ಅವರಿದ್ದಿದ್ದರೆ ತೆಗೆಯೋದಕ್ಕೆ ಆಗ್ತಾ ಇತ್ತು. ಒಂದು ವೇಳೆ ಖರ್ಗೆ ಅವರು ಇದ್ದು ತೆಗೆದಿದ್ದರೆ ಎಲ್ಲಾ ಊರಲ್ಲೂ ಇವರ ಫೋಟೋ ಹಾಕಿ, ಹಾರ ಹಾಕಿ ಸುಟ್ಟಾಕಿ ಬಿಡೋರು. ಧರಮ್ ಸಿಂಗ್ ಪಾಪದ್ದು ಯಾರೂ ಕೇಳ್ತಾರೆ ಎಂದು ದಲಿತ ಸಿಎಂ ಹಿಸ್ಟರಿ ಬಗ್ಗೆ ಮಾತನಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...