ದಾವಣಗೆರೆ ಆಗಸ್ಟ್.6 : ಮಹಾನಗರ ಪಾಲಿಕೆ ಹಾಗೂ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಕಡೆ ಅನಧಿಕೃತ ಕಟ್ಟಡ ಹಾಗೂ ಅನಧಿಕೃತ ಬಡಾವಣೆ ನಿರ್ಮಾಣವಾಗುತತಿದ್ದು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಆನ್ಲೈನ್ ತಂತ್ರಾಂಶದಲ್ಲಿ ಕಟ್ಟಡ ಪರವಾನಿಗೆ ಅರ್ಜಿಗಳನ್ನು ಸ್ವೀಕರಿಸಿ ನಿಯಮಾನುಸಾರವಾಗಿ ಕಟ್ಟಡ ಪರವಾನಿಗೆ ಪಡೆಯಬೇಕು.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ಕಲಂ 17 ಹಾಗೂ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987 ಕಲಂ 32ರಂತೆ ಅದರನ್ವಯ ಬಡಾವಣೆ ನಕ್ಷೆ ನೀಡಲಾಗುತ್ತಿದೆ. ಕಟ್ಟಡ ಕಟ್ಟುವ ಮುನ್ನ ಪಾಲಿಕೆಯ ಕಚೆರಿಯಿಂದ ಕಡ್ಡಾಯವಾಗಿ ಕಟ್ಟಡ ಪರವಾನಿಗೆ ಪಡೆದು ನಿಯಮ ಉಲ್ಲಂಘನೆಯಾಗದಂತೆ ಕಟ್ಟಡ ಹಾಗೂ ಬಡಾವಣೆ ನಿರ್ಮಿಸಬೇಕು.

ಒಂದು ವೇಳೆ ಅನಧಿಕೃತ, ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಅಕ್ರಮ ಬಡಾವಣೆ ಕಾಮಗಾರಿ ಕಂಡುಬಂದಲ್ಲಿ ಈ ಕಚೇರಿಯ ಟಾಸ್ಕ್ ಪೋರ್ಸ್ ತಂಡದಿಂದ ಕಟ್ಟಡ ನಿರ್ಮಾಣದ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಕೆ.ಎಂ.ಸಿ ಕಾಯ್ದೆ 1976ರಂತೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆರನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು ಹೆಚ್ಚಿನ ಮಾಹಿತಿಗಾಗಿ ಕಛೇರಿ ಅವಧಿಯಲ್ಲಿ ಪಾಲಿಕೆಯ ನಗರ ಯೋಜನಾ ಶಾಖೆ ಹಾಗೂ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯನ್ನು ಸಂಪರ್ಕಿಸಬೇಕೆಂದು ಆಯುಕ್ತರು ತಿಳಿಸಿದ್ದಾರೆ.











