Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ ಬೈ ಎಲೆಕ್ಷನ್ ವಿಚಾರ : ಜಮೀರ್ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು..?

---Advertisement---

ಬೆಂಗಳೂರು: ದಾವಣಗೆರೆ ಬೈ ಎಲೆಕ್ಷನ್ ಆದ್ಮೇಲೆ ಒಬ್ಬೊಬ್ಬರದ್ದೆ ತಲೆದಂಡವಾಗ್ತಾ ಇದೆ. ಅತ್ತ ನಜೀರ್ ಅವರನ್ನ ಸಿಎಂ ಅವರೇ ವಜಾಗೊಳಿಸಿದ್ದಾರೆ. ಈ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನನಗೂ ಬೆಳಗ್ಗೆ ಗೊತ್ತಾಗಿದ್ದು. ನ್ಯೂಸ್ ನಲ್ಲಿ ನೋಡಿದೆ. ನಮಗೂ ಕೆಲವೊಂದು ವರದಿಗಳು ಬಂದಿತ್ತು. ಮಾಹಿತಿ ಇತ್ತು. ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ ಎಂಬ ಮಾತನ್ನ ಹೇಳಿದ್ದಾರೆ.

ಕೆಲವೊಬ್ಬರಿಗೆ ಆ ಜವಾಬ್ದಾರಿ ಕೊಟ್ಟಿರ್ತೀವಿ ನಾವೂ. ಏನಾಗಿದೆ ಎಂಬ ವರದಿ ಇನ್ನು ಬರ್ಬೇಕಿದೆ. ಅದಕ್ಕೆ ನಾವೂ ಕಾಯ್ತಾ ಇದ್ದೀವಿ ಎಂದಿದ್ದಾರೆ. ಜಮೀರ್ ವಿಚಾರಕ್ಕೆ ನನಗೇನು ಮಾಹಿತಿ ಇಲ್ಲ ಎಂದಿದ್ದಾರೆ. ಇವತ್ತು ರಾತ್ರಿ ಮೇ ಬಿ ನಾನು ಚೆನ್ನೈಗೆ ಹೋಗ್ತಾ ಇದ್ದೀನಿ. ಬಿಕಾಸ್ ನಾಳೆ ಪ್ರೋಗ್ರಾಂ ಇದೆ ಚೆನ್ನೈನಲ್ಲಿ. ಸ್ವಲ್ಪ ಕ್ಯಾಂಪೇನ್ ಇದೆ ಐದಾರು ಕ್ಷೇತ್ರದಲ್ಲಿ. ಅಲ್ಲೆಲ್ಲ ವರ್ಕೌಟ್ ಮಾಡೋದಕ್ಕೆ ಹೇಳಿದ್ದೀನಿ ಎಂದಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಸಕರು ಒಬ್ಬೊಬ್ಬರನ್ನೇ ಕರೆದು ಮಾತನ್ನಾಡ್ತಾ ಇದ್ದಾರೆ ಅನ್ನೋ ಮಾತಿಗೆ, ರಾಜಕಾರಣ ಅಂದ್ರೆ ನಮ್ಮ ಎಂಎಲ್ಎಗಳಿಗೆ ಮುಂದಿನ ಭವಿಷ್ಯಕ್ಕೆ ಏನೇನು ರೂಪಿಸಬೇಕು, ಅದನ್ನೆಲ್ಲಾ ತೀರ್ಮಾನ ಮಾಡಬೇಕು ಅಲ್ವಾ. ಹೀಗಾಗಿ ಯಾರ್ಯಾರಿಗೆ ಏನೇನು ಹೇಳಬೇಕು, ತಿಳಿಸಬೇಕು ಎಂಬುದೆಲ್ಲವನ್ನು ಮಾರ್ಗದರ್ಶನ ಮಾಡಬೇಕು ಅಲ್ವಾ. ಎಲ್ಲರಿಗೂ ಕರೆದು ಎಲ್ಲಾ ಸಿದ್ಧತೆಗಳು ಆಗಬೇಕು. ಕಾರ್ಪೋರೇಷನ್ ಎಲೆಕ್ಷನ್, ಲೋಕಲ್ ಬಾಡಿ ಎಲೆಕ್ಷನ್, ಇವೆಲ್ಲ ಇರುತ್ತದೆ. ಪಾರ್ಟಿ ಪ್ರೆಸಿಡೆಂಟ್ ಆಗಿ ನಾನಲ್ಲದೆ ಇನ್ನ್ಯಾರು ಮಾತನಾಡ್ತಾರೆ‌. ನಮ್ಮ ಗ್ಯಾರಂಟಿಗಳೆಲ್ಲಾ ಹೇಗೆ ತಲುಪ್ತಾ ಇದೆ, ಏನೆಲ್ಲಾ ನಡೀತಾ ಇದೆ ಎಂಬ ಮಾಹಿತಿಯನ್ನ ಕೊಡ್ತಾ ಇದ್ದಾರೆ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now