Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದರ್ಶನ್ ಸಿಗರೇಟ್ ಸೇದಿದ್ದಕ್ಕೆ ಸುಪ್ರೀಂ ಹೋಗ್ತೀರಾ,ಈಗ ಇವರಿಗೆ ಏನ್ ಮಾಡ್ತಾರೆ : ಆರ್ ಅಶೋಕ್ ಪ್ರಶ್ನೆ

---Advertisement---

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಉಗ್ರಗಾಮಿಗೆ, ಅತ್ಯಾಚಾರಿಗೆ ರಾಜಾತಿಥ್ಯ ನೀಡ್ತಾ ಇರೋದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟು ಗಲೀಜಾಗಿದೆ. ಇಷ್ಟೊಂದು ಹಣ ಖರ್ಚು ಮಾಡಿ, ಕೇಳಿದ್ರೆ ಮುಖ್ಯಮಂತ್ರಿ ಹೇಳ್ತಾರೆ, ಗೃಹ ಸಚಿವರತ್ರ ವರದಿ‌ ತರಿಸಿಕೊಳ್ತೀನಿ ಅಂತ. ಎರಡೂವರೆ ವರ್ಷದಿಂದ ಕತ್ತೆ ಕಾಯ್ತಾ ಇದ್ರಾ ಎಂದು ಪ್ರಶ್ನೆ ಮಾಡಿದ್ದಾರೆ.

ನಿಮ್ಮ ಇಂಟೆಲಿಜೆನ್ಸ್ ಹೇಳಿರಲಿಲ್ವಾ..? ಆಗ ವರದಿ ಬಂದಿರಲಿಲ್ವಾ..? ನಿಮ್ಮ ಜೈಲಧಿಕಾರಿಗಳು ಏನ್ ಮಾಡ್ತಾ ಇದ್ರು. ಮಾಡ್ಸೋದು ನೀವೆ, ಅಲ್ಲಿಂದ ಫೋಟೋ ತೆಗೆದು ಆಚೆ ಬರೋದು ನಿಮ್ದೆ. ಒಳ್ಳೆ ಯೋಜ‌ನೆ ಇದು. ಜೈಲಲ್ಲೇ ಎರಡು ಗ್ಯಾಂಗ್ ಇದೆ ಅಲ್ಲಿ. ಒಂದು ಸಪ್ಲೈ ಮಾಡುವ ಪಾರ್ಟಿಯಾದರೆ ಇನ್ನೊಂದು ಫೋಟೋ ತೆಗೆಯುವ ಪಾರ್ಟಿಯಾಗಿದೆ.

ದರ್ಶನ್ ಸಿಗರೇಟ್ ಸೇದಿದ್ದಕ್ಕೆ ಸುಪ್ರೀಂ ಕೋರ್ಟ್ ತನಕ ಹೋದ್ರಲ್ಲೆಪ್ಪ ನೀವೂ. ಕಾಂಗ್ರೆಸ್ ಪಾರ್ಟಿಯವರು ಸುಪ್ರೀಂ ಕೋರ್ಟ್ ತನಕ. ನಾನು ಬೆಂಬಲ ಮಾಡ್ತಾ ಇಲ್ಲ ಯಾರಿಗೂ. ಯಾರೇ ಮಾಡಿದ್ರು, ಅದು ತಪ್ಪೆ. ದರ್ಶನ್ ಸುಪ್ರೀಂ ಕೋರ್ಟ್ ತನಕ ಹೋಗಿ ಬೇಲ್ ಕ್ಯಾನ್ಸಲ್ ಮಾಡಿದ್ರಲ್ಲ, ಈಗ ಏನ್ ಮಾಡ್ತೀರಾ..? ಇವರಿಗೇನ್ ಮಾಡ್ತೀರಾ ಹೇಳ್ರಿ. ಹೋಗ್ತೀರಾ ಸುಪ್ರೀಂ ಕೋರ್ಟ್ ಗೆ. ಧೈರ್ಯ ಇದ್ರೆ ಈಗ ಹೋಗಿ ಸುಪ್ರೀಂ ಕೋರ್ಟ್ ಗೆ ಇಷ್ಟೊಂದು ಅನಾಹುತ ಆಗಿದೆಯಲ್ಲ. ಇದು ಕಾಂಗ್ರೆಸ್ ಪ್ರಾಯೋಜಿತವಾದಂತದ್ದು. ಹಾಸನದಲ್ಲಿ, ಹುಬ್ಬಳ್ಳಿಯಲ್ಲಿ, ಶಿವಾಜಿನಗರದಲ್ಲಿ ಕೆಜಿಹಳ್ಳಿ, ಡಿಜಿಹಳ್ಳಿಯಲ್ಲಿ ಆಯ್ತಲ್ಲ. ಇದೆಲ್ಲ ಬಿಟ್ಟು ಈಗ ಸಪ್ಲೈ ಗ್ಯಾಂಗ್ ಆಗಿದೆ ಎಂದು ಸರ್ಕಾರದ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now