Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಳ್ಳಾರಿ ಜೈಲಿನಲ್ಲಿ ದರ್ಶನ್ ಲಾಕ್ : ಕುಟುಂಬಸ್ಥರು ಬಿಟ್ರೆ ಸ್ನೇಹಿತರು, ಸೆಲೆಬ್ರೆಟಿಗಳಿಗೆ ಭೇಟಿಗಿಲ್ಲ ಅವಕಾಶ..!

---Advertisement---

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲು ಸೇರಿದ್ದಾರೆ. ಬಳ್ಳಾರಿಗೆ ಹೋದ ಮೇಲೆ ಕೈದಿ ಸಂಖ್ಯೆ ಕೂಡ ಬದಲಾಗಿದೆ. 511 ಕೈದಿಯಾಗಿದ್ದಾರೆ. ಬಳ್ಳಾರಿಗೆ ದರ್ಶನ್ ಬರುತ್ತಿದ್ದಾರೆಂದು ತಿಳಿದಾಗಲೇ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜೈಲು ಬಳಿ ಸೇರಿದ್ದರು. ಬೆಂಗಳೂರಿನಲ್ಲಿಯೇ ಇದ್ದಾಗ ದರ್ಶನ್ ಅವರನ್ನು ನೋಡುವುದಕ್ಕೆ ಸ್ನೇಹಿತರು ಕೂಡ ಬರುತ್ತಿದ್ದರು. ಆದರೆ ಈಗ ಬಳ್ಳಾರಿ ಜೈಲಿನಲ್ಲಿ ಹೊಸ ರೂಲ್ಸ್ ಮಾಡಿದ್ದು, ದರ್ಶನ್ ಅವರನ್ನು ನೋಡಲು ಕೇವಲ ಅವರ ಕುಟುಂಬಸ್ಥರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಈ ಬಗ್ಗೆ ಡಿಐಜಿ ಟಿಪಿ ಶೇಷಾರವರು ಮಾಹಿತಿ ನೀಡಿದ್ದು, ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ದರ್ಶನ್ ಅವರನ್ನು ನೋಡಲು ಅವರ ಮೊದಲ ರಕ್ತಸಂಬಂಧಿಗಳಿಗೆ ಬಿಟ್ಟರೆ ಬೇರೆ ಯಾರಿಗೂ ಅವಕಾಶವಿಲ್ಲ. ಅದನ್ನು ಬಿಟ್ಟರೆ ವಕೀಲರಿಗೆ ಮಾತ್ರ ಅವಕಾಶವಿದೆ. ಸ್ನೇಹಿತರು, ಸೆಲೆಬ್ರೆಟಿಗಳಿಗೆ ಅವಕಾಶವಿರುವುದಿಲ್ಲ. ಅವರ್ಯಾರೆ ಬಂದರು ಭೇಟಿಗೆ ಅವಕಾಶ ನೀಡುವುದಿಲ್ಲ. ದರ್ಶನ್ ಅವರನ್ನು ಹೈ ಸೆಕ್ಯುರಿಟಿ ಸೆಲ್ ನ್ಳಿ ಇರಿಸಲಾಗಿದೆ. 15 ಸೆಲ್ ಗಳ ಪೈಕಿ ಬೇರೆ ಬೇರೆ ಸ್ಥಳದಲ್ಲಿ ನಾಲ್ಕು ಜನ ಕೈದಿಗಳಿದ್ದಾರೆ. ದರ್ಶನ್ ಅಕ್ಕ ಪಕ್ಕ ಯಾರೂ ಇಲ್ಲ.

ದರ್ಶನ್ ಸೆಲ್ ಮುಂದೆ ಮೂರು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಬಾಡಿವೂರ್ನ್ ಕ್ಯಾಮೆರಾ ಮೂಲಕ ನಿಗಾ ವಹಿಸಲಾಗಿದೆ. ದರ್ಶನ್ ಮೇಲೆ ಜಾಸ್ತಿ ನಿಗಾ ಇಡಲಾಗಿದೆ. ದರ್ಶನ್ ಗೆ ಬೆನ್ನು ನೋವಿದೆ. ಮೋಷನ್ ಸಮಸ್ಯೆಯಿಂದ ಊಟ ಬೇಡ ಎನ್ನುತ್ತಿದ್ದಾರೆ. ಜೈಲು ಊಟವನ್ನು ಸರಿಯಾಗಿ ನೀಡಲಾಗುತ್ತಿದೆ. ಮೆಡಿಕಲ್ ರಿಪೋರ್ಟ್ ಪರಿಶೀಲನೆ ಮಾಡ್ತೀವಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment