Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜ್ವಾಲಾಮುಖಿಯಿಂದ ರೂಪುಗೊಂಡ ಅದ್ಭುತ ದ್ವೀಪ ಮಾರಿಷಸ್‌; ಏಳು ಬಣ್ಣದ ಮಣ್ಣಿನ ವಿಶೇಷತೆ ಏನು?: ಇಲ್ಲಿದೆ ವಿಸ್ಮಯಕಾರಿ ಭೂವೈಜ್ಞಾನಿಕ ರಹಸ್ಯ!

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 27 : ಹಿಂದೂ ಮಹಾಸಾಗರದಲ್ಲಿರುವ ಸುಂದರ ದ್ವೀಪ ರಾಷ್ಟ್ರವಾದ ಮಾರಿಷಸ್‌ ( Maruritius) ಹೇಗೆ ರೂಪುಗೊಂಡಿತು, ಅದರ ತಾಂತ್ರಿಕ ಹಾಗೂ ಭೂವೈಜ್ಞಾನಿಕ ಹಿನ್ನೆಲೆ ಮತ್ತು ಅಲ್ಲಿನ ಮಣ್ಣಿನ ವಿನ್ಯಾಸ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿ ಏನೆಂದರೆ ಮಾರಿಷಸ್‌ ಯಾವುದೇ ಖಂಡದ ಭಾಗವಲ್ಲ, ಇದು ಸಂಪೂರ್ಣವಾಗಿ ಜ್ವಾಲಾಮುಖಿ ಸ್ಫೋಟಗಳಿಂದ ರೂಪುಗೊಂಡ ದ್ವೀಪವಾಗಿದೆ. ಸುಮಾರು 8 ರಿಂದ 9 ದಶಲಕ್ಷಗಳ ಹಿಂದೆ ಸಮುದ್ರದ ಆಳದಲ್ಲಿ ಸರಣಿ ಜ್ವಾಲಾಮುಖಿ ಸ್ಫೋಟಗಳು ಸಂಭವಿಸಿದಾಗ, ಲಾಲಾರಸವು ಹೊರಬಂದು ತಣ್ಣಗಾಗಿ, ಒಂದರ ಮೇಲೊಂದರಂತೆ ಪದರಗಳು ಸೃಷ್ಟಿಯಾಗಿ ಈ ದ್ವೀಪವು ಸಮುದ್ರದ ಮಟ್ಟದಿಂದ ಮೇಲಕ್ಕೆ ಬಂದಿತು.

ಮಾರಿಷಸ್‌ನ ಭೂವೈಜ್ಞಾನಿಕ ಇತಿಹಾಸವನ್ನು ಪ್ರಮುಖವಾಗಿ ಮೂರು ಜ್ವಾಲಾಮುಖಿ ಹಂತರಳಾಗಿ ವಿಂಗಡಿಸಲಾಗಿದೆ. ಇದು ಸುಮಾರು 10 ರಿಂದ 5 ದಶಲಕ್ಷ ವರ್ಷಗಳ ಹಿಂದೆ ಸಂಭವಿಸಿತು. ಇದರ ಪರಿಣಾಮವಾಗಿ ಮಾರಿಷಸ್‌ನ ಇಂದಿನ ಪರ್ವತ ಶ್ರೇಣಿಗಳು ಮತ್ತು ಕಡಿದಾದ ಬಂಡೆಗಳು ನಿರ್ಮಾಣಗೊಂಡವು.

ಸುಮಾರು 35 ದಶಲಕ್ಷ ವರ್ಷಗಳ ಹಿಂದೆ ಸೂಚಿಸಿದ ಈ ಜ್ವಾಲಾಮುಖಿ ಕ್ರಿಯೆಯು ದ್ವೀಪದ ಮಧ್ಯ ಭಾಗದಲ್ಲಿ ಪ್ರಸ್ಥಭೂಮಿಗಳನ್ನು ನಿರ್ಮಿಸಿತು. ಸುಮಾರು 7,00,000 ದಿಂದ 20,000 ವರ್ಷಗಳ ಹಿಂದೆ ನಡೆದ ಕೊನೆಯ ಹಂತದ ಜ್ವಾಲಾಮುಖಿ ಕ್ರಿಯೆ ಇದಾಗಿದೆ. ಇದರಿಂದ ಹರಿದ ಲಾಲಾರಸವು ಇಡೀ ದ್ವೀಪದಾದ್ಯಂತ ಹರಡಿತು.
ಮಾರಿಷಸ್‌ನ ತಾಂತ್ರಿಕ ಭೂವೈಜ್ಞಾನಿಕ ತಳಹದಿಯು ಸಂಪೂರ್ಣವಾಗಿ ಬೆಸಾಲ್ಟ್‌ ಎಂಬ ಅಗ್ನಿಶಿಲೆಯಿಂದ ಕೂಡಿದೆ. ಇಲ್ಲಿನ ಖನಿಜಗಳು ಮತ್ತು ಬಂಡೆಗಳು ಜ್ವಾಲಾಮುಖಿಯ ಮೂಲವನ್ನು ಸ್ಪಷ್ಟಪಡಿಸುತ್ತವೆ.

ಮಾರಿಷಸ್‌ನ ಅತ್ಯಂತ ಪ್ರಸಿದ್ಧ ಮತ್ತು ವೈಶಿಷ್ಟ್ಯ ಭೌಗೋಳಿಕ ಅದ್ಭುತವೆಂದರೆ ಚಾಮರೆಲ್‌ ಎಂಬಲ್ಲಿರುವ ಏಳು ಬಣ್ಣಗಳ ಮಣ್ಣು, ಇಲ್ಲಿನ ಮಣ್ಣಿನ ದಿಬ್ಬಗಳ ಕೆಂಪು, ಕಂದು, ನೇರಳೆ, ಹಸಿರು, ನೀಲಿ ನೇರಳೆ ಮತ್ತು ಹಳದಿ ಎಂಬ 7 ವಿಭಿನ್ನ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಜ್ವಾಲಾಮುಖಿಯ ಬೆಸಾಲ್ಟಿಕ್‌ ಲಾವಾ ಹವಾಮಾನ ವೈಪರೀತ್ಯಕ್ಕೆ ಒಳಗಾದಗ ಈ ಮಣ್ಣು ಸೃಷ್ಟಿಯಾಯಿತು. ಲಾಲಾದಲ್ಲಿದ್ದ ಕಬ್ಬಿಣ ಮತ್ತು ಅಲ್ಯೂಮಿನಿಯಂ ಧಾತುಗಳು ಮಣ್ಣಾಗಿ ಮಾರ್ಪಟ್ಟಾಗ ಪ್ರತ್ಯೇಕಗೊಂಡು, ಕಬ್ಬಿಣದ ಆಕ್ಸೈಡ್‌ಗಳು ಕೆಂಪು-ಅಮೃತ ಶಿಲೆಯ ಬಣ್ಣಗಳು ಮತ್ತು ಅಲ್ಯುಮಿನಿಯಂ ನೀಲಿ ನೇರಳೆ ಬಣ್ಣಗಳನ್ನು ನೀಡಿದವು. ಈ ಮಣ್ಣಿನ ಬಣ್ಣಗಳು ಎಂದಿಗೂ ಒಂದಕ್ಕೊಂದು ಬೆರೆಯುವುದಿಲ್ಲ, ನೀವು ವಿಭಿನ್ನ ಬಣ್ಣದ ಮಣ್ಣನ್ನು ಒಟ್ಟಿಗೆ ಬೆರೆಸಿಟ್ಟರೂ, ಸ್ವಲ್ಪ ಸಮಯದ ನಂತರ ಅವು ಮತ್ತೆ ತಮ್ಮದೇ ಬಣ್ಣದ ಪದರಗಳಾಗಿ ಪ್ರತ್ಯೇಕಗೊಳ್ಳುತ್ತವೆ. ಅಲ್ಲದೆ ಮಳೆ ಬಂದರೂ ಈ ಮಣ್ಣಿನ ದಿಬ್ಬಗಳು ಸವೆಯುವುದಿಲ್ಲ.
ಜಗತ್ತಿನಾದ್ಯಂತ ಪ್ರಸಿದ್ಧವಾದ, ಈಗ ಸಂಪೂರ್ಣವಾಗಿ ಅಳಿದು ಹೋಗಿರುವ “ಡೋಡೋ ಪಕ್ಷಿ” ಬದುಕಿದ್ದು ಕೇವಲ ಮಾರಿಷಸ್‌ ದ್ವೀಪದಲ್ಲಿ ಮಾತ್ರ ನೋಡಬಹುದು. ಮಾರಿಷಸ್‌ನಲ್ಲಿ “ಗಂಗಾ ತಲಾವ್‌” ಎಂಬ ಪವಿತ್ರ ಜ್ವಾಲಾಮುಖಿ ಸರೋವರದಲ್ಲಿದ್ದು, ಇಲ್ಲಿ ದೊಡ್ಡ ಶಿವನ ಮೂರ್ತಿ ಇದೆ. ಮತ್ತು ಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now