ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ ಮೇ. 02 : ದಲಿತರು ಹಾಗೂ ವಿಶೇಷವಾಗಿ ಬಲಗೈ ಸಂಬಂಧಿತ ಚಲವಾದಿ ಸಮುದಾಯಗಳು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳಾಗಿದ್ದು ಪ್ರಾರಂಭದಿಂದಲೂ ಈವರೆಗೆ ನಿರಂತರವಾಗಿ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಆಸ್ತಿಯಾಗಿ, ಕೊಡುಗೆಯನ್ನು ಕೊಡುವುದರ ಮುಖಾಂತರ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿದ್ದೇವೆ ಈ ಹಿನ್ನಲೆಯಲ್ಲಿ ಸಿ.ಎಂ. ಬದಲಾವಣೆಯಾದರೆ ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಲಿತ ಸಿಎಂ ಮಾಡದಿದ್ದರೆ ಕರ್ನಾಟಕದಲ್ಲಿ ದಲಿತರ ಶಾಪಕ್ಕೆ ಕಾಂಗ್ರೆಸ್ ಪಕ್ಷ ಒಳಗಾಗ ಬೇಕಾಗುತ್ತದೆ ಎಂದು ದಲಿತ ಛಲವಾದಿ ಮಹಾಸಭಾ ಕರ್ನಾಟಕದ ರಾಜ್ಯಾಧ್ಯಕ್ಷರಾದ ಹೆಚ್ ಕೆ ಬಸವರಾಜ್ ಪಕ್ಷದ ವರಿಷ್ಠರನ್ನು ಎಚ್ಚರಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಶನಿವಾರ ಮಾತನಾಡಿದ ಅವರು. ಬಲಗೈ ಸಂಬಂಧಿತ ಛಲವಾದಿ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ನಾಯಕರನ್ನು ಹಾಗೂ ರಾಜ್ಯ ನಾಯಕರನ್ನು ಕೊಟ್ಟಿರುತ್ತದೆ. ಮತ್ತು ಪಕ್ಷದಲ್ಲಿ ಪ್ರತಿಷ್ಠಿತ ಸ್ಥಾನಮಾನಗಳನ್ನು ಕೊಟ್ಟಿರಬಹುದು ಆದರೆ ಸಂವಿಧಾನಾತ್ಮಕವಾಗಿ ನಿರ್ಣಯಕ ಸ್ಥಾನಮಾನಗಳನ್ನು ಈವರೆಗೂ ಕೊಟ್ಟಿರುವುದಿಲ್ಲ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದಲ್ಲಿ ಶಿಸ್ತಿರ ಸಿಪಾಯಿಯಾಗಿ 60 ವರ್ಷಗಳ ಕಾಲ ನಿಷ್ಠೆಯಿಂದ ಪಕ್ಷಕ್ಕೆ ಪ್ರಾಮಾಣಿಕವಾಗಿ ರಾಜಕೀಯ ಭೀಷ್ಮರಾಗಿ ದುಡಿದಿದ್ದಾರೆ, ಅವರು ಈಗಾಗಲೇ ಮುಖ್ಯಮಂತ್ರಿಯಾಗಿ ಇರಬೇಕಿತ್ತು ಆದರೆ ಪಕ್ಷ ಇದುವರೆವಿಗೂ ಅವರನ್ನು ಪರಿಗಣಿಸಿಲ್ಲ, ಅವರಿಗೆ ಸಂವಿಧಾನಾತ್ಮಕವಾಗಿ ನಿರ್ಣಯಕ ಸ್ಥಾನಮಾನಗಳನ್ನು ಬಿಟ್ಟು ಬೇರೆ ಹುದ್ದೆಗಳನ್ನು ನೀಡಲಾಗಿದೆ ಇದನ್ನು ಬಿಟ್ಟು ಅವರಿಗೆ ಮುಂದಿನ ದಿನದಲ್ಲಿ ಸಂವಿಧಾನಾತ್ಮಕವಾಗಿ ನಿರ್ಣಯಕ ಸ್ಥಾನಮಾನಗಳನ್ನು ನೀಡಲು ಆಗ್ರಹಿಸಲಾಯಿತು.
ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಜ್ಯದ ಮುಖ್ಯಮಂತ್ರಿಯಾಗಲು ಈಗ ಸದಾವಕಾಶ ಒದಗಿ ಬಂದಿದೆ. ಯಾವುದೇ ಕಾರಣಕ್ಕೂ ಈ ಅವಕಾಶದಿಂದ ವಂಚಿತರಾಗಬಾರದು. ಒಂದು ಪಕ್ಷದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡದಿದ್ದರೆ ದಲಿತರ ಕೋಪಕ್ಕೆ ಗುರಿಯಾಗುತ್ತದೆ.ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧದ ನಿರ್ಣಯಗಳನ್ನು ತೆಗೆದುಕೊಳ್ಳು ವಂತಹ ಅವಕಾಶವಿರುತ್ತದೆ.ಈ 75 ವರ್ಷಗಳ ಕಾಲ ದಲಿತ ಸಮುದಾಯದವರು ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿದ್ದಾರೆ.ಇವರಿಗೆ ಪೂರಕವಾಗಿ ಪಕ್ಷದ ಹೈಕಮಾಂಡ್ ಸಹ ನಿಲ್ಲಬೇಕಿದೆ ಇದಲ್ಲದೆ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗಲು ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರುಗಳು ಸಮ್ಮತಿಸಿದ್ದಾರೆ.ಇದರೊಂದಿಗೆ ದಲಿತಪರ ಸಂಘಟನೆಗಳು ಸಹ ಒಪ್ಪಿಗೆ ಸೂಚಿಸಿವೆ.. ಇದರೊಂದಿಗೆ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯಾಗುವುದಾದರೆ ನನ್ನದೇನು ಅಭ್ಯಂತರವಿಲ್ಲ ಎಂದು ಹಾಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಸಹ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಯಾಗುವುದನ್ನು ತಪ್ಪಿಸಿಕೊಳ್ಳಬಾರದು.. ಒಂದು ಪಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ದೊರೆಯದಿದ್ದರೆ ಮುಂದಿನ ಹೋರಾಟದ ರೂಪರೇಷೆಗಳನ್ನು ರೂಪಿಸಲಾಗುವುದು ಎಂಧು ಎಚ್ಚರಿಸಿದ್ದಾರೆ.
ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಗಾಳಿ ಬೀಸುತ್ತಿದೆ.. ಇದರ ಸದುಪಯೋಗವನ್ನು ಮಾಡಿಕೊಂಡು ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಗಳಾಗಬೇಕಿದೆಈಗ ಅವಕಾಶ ತಪ್ಪಿದರೆ ಮುಂದೆ ಯಾವಾಗಲೂ ಮುಖ್ಯಮಂತ್ರಿಯಾಗುವಂತಹ ಅವಕಾಶ ಇರುವುದಿಲ್ಲ.ಈ ಹಿನ್ನಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಧೈರ್ಯ ಮಾಡಿ ಮುಂದಿನ ಹೆಜ್ಜೆಯನ್ನು ಇಡಬೇಕಿದೆ. ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ನಂತರದಲ್ಲಿ ಡಾ. ಜಿ. ಪರಮೇಶ್ವರ್, ಮಹಾದೇವಪ್ಪ, ಮುನಿಯಪ್ಪ ಮತ್ತು ಸತೀಶ್ ಜಾರಕಿಹೊಳಿ ಇವರಲ್ಲಿ ಯಾರನ್ನಾದರೂ ಸಹ ಮುಖ್ಯಮಂತ್ರಿಯನ್ನಾಗಿ ಮಾಡಬಹುದು ಎಂದು ತಿಳಿಸಿ ಅತಿ ಶೀಘ್ರದಲ್ಲಿ ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ 5 ಲಕ್ಷಕ್ಕಿಂತ ಹೆಚ್ಚು ದಲಿತ ಸಮುದಾಯವನ್ನು ಸೇರಿಸಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಡದಿದ್ದಲ್ಲಿ, ದಲಿತ ಸಮುದಾಯವೂ ಕಾಂಗ್ರೆಸ್ ಪಕ್ಷ ನಿಷ್ಠೆಯನ್ನು ತೊರೆಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಯಿತು.
ಗೋಷ್ಟಿಯಲ್ಲಿ ದಲಿತ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ನಿರಂಜನ ಮೂರ್ತಿ, ರಾಜ್ಯ ಕಾರ್ಯದರ್ಶಿ ರವಿಕುಮಾರ್, ರಾಜ್ಯ ನಿರ್ದೆಶಕರಾದ ಅಣ್ಣಪ್ಪ, ಕಾರ್ಯಾಧ್ಯಕ್ಷರಾದ ದಯಾನಂದ, ಶಿವಪ್ರಸಾದ್, ಜಯರಾಮ್, ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಪ್ಪ, ಪ್ರದೀಪ್ ಭಾಗವಹಿಸಿದ್ದರು.




















