Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

CWC 2023 India vs Australia: ಭಾರತಕ್ಕೆ ಬಿಗ್ ಶಾಕ್ : ಕೇವಲ 2 ರನ್ ಗೆ 3 ಡಕ್ ಔಟ್

---Advertisement---

 

ಸುದ್ದಿಒನ್ :  ICC ಕ್ರಿಕೆಟ್ ವಿಶ್ವಕಪ್ 2023- ಭಾರತ vs ಆಸ್ಟ್ರೇಲಿಯಾ, 5 ನೇ ಪಂದ್ಯದ live updates

200 ರನ್ ಗಳ ಅಲ್ಪ ಗುರಿಯೊಂದಿಗೆ ಕಣಕ್ಕೆ ಇಳಿದ ಭಾರತಕ್ಕೆ ಆರಂಭದಲ್ಲೇ ತೀವ್ರ ಆಘಾತ ಎದುರಾಗಿದೆ. ಇಶಾನ್ ಕಿಶನ್, ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಸತತ ಕ್ರಮಾಂಕದಲ್ಲಿ ಪೆವಿಲಿಯನ್ ಸೇರಿದರು. ಈ ಮೂವರೂ ಕೂಡ  ಡಕೌಟ್ ಆಗಿರುವುದು ಗಮನಾರ್ಹ. ಕಿಶನ್ ಅವರನ್ನು ಸ್ಟಾರ್ಕ್ ಔಟ್ ಮಾಡಿದರೆ, ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಹ್ಯಾಜಲ್ ವುಡ್ ಬೌಲಿಂಗ್ ನಲ್ಲಿ ಔಟಾದರು. ಪ್ರಸ್ತುತ 7 ಓವರ್‌ಗಳು ಮುಕ್ತಾಯವಾಗಿದ್ದು 20 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಆಟವಾಡುತ್ತಿದ್ದಾರೆ.

ಭಾರತದ ಮೊತ್ತ 2 ರನ್ ಗಳಿರುವಾಗ ಮೂರು ವಿಕೆಟ್ ಕಳೆದುಕೊಂಡಿದ್ದು ತೀವ್ರ ಆಘಾತವಾಗಿದೆ. ಗಳಿಸಿದ ಎರಡೂ ರನ್ ಗಳು ವೈಡ್ ನಿಂದ ಬಂದ ಎಕ್ಟ್ರಾ ರನ್ ಗಳಾಗಿವೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಭಾರತದ ಬೌಲರ್‌ಗಳ ದಾಳಿಗೆ 199 ರನ್‌ಗಳಿಗೆ ಆಲೌಟ್ ಆದರು. ಭಾರತದ ಬೌಲರ್‌ಗಳಲ್ಲಿ ರವೀಂದ್ರ ಜಡೇಜಾ ಮೂರು ವಿಕೆಟ್ ಪಡೆದರು.ಬುಮ್ರಾ ಮತ್ತು ಕುಲ್ದೀಪ್ ತಲಾ ಎರಡು ವಿಕೆಟ್ ಪಡೆದರು. ಇವರಿಬ್ಬರ ಜೊತೆಗೆ ಸಿರಾಜ್, ಅಶ್ವಿನ್ ಮತ್ತು ಹಾರ್ದಿಕ್ ತಲಾ ಒಂದು ವಿಕೆಟ್ ಪಡೆದರು. ಸ್ಟೀವ್ ಸ್ಮಿತ್ (46) ಆಸೀಸ್ ಬ್ಯಾಟ್ಸ್‌ಮನ್‌ಗಳಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment