ಮನುಷ್ಯದ ದೇಹದಲ್ಲಿ ಕೊಲೆಸ್ಟ್ರಾಲ್ ಆಗಾಗ ಹೆಚ್ಚಾಗ್ತಾ ಇರುತ್ತೆ. ಅದನ್ನ ಕಡಿಮೆ ಮಾಡಿಕೊಂಡಾಗ ಮಾತ್ರ ಆರೋಗ್ಯದಿಂದ ಇರುವುದಕ್ಕೆ ಸಾಧ್ಯವಾಗುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳುವುದಕ್ಕೆ ನಾನಾ ಕಸರತ್ತು ಮಾಡುವ ಅಗತ್ಯವಿಲ್ಲ. ಅಡುವೆ ಮನೆಯಲ್ಲಿ ಒಗ್ಗರಣೆಗೆ ಅಂತ ಇಟ್ಟಿರುವ ಕರಿಬೇವು ಸಾಕು ನೋಡಿ. ಹಾಗಾದ್ರೆ ಅದನ್ನ ಉಪಯೋಗಿಸುವುದು ಹೇಗೆ..? ಎಷ್ಟೆಲ್ಲಾ ಲಾಭ ಇದೆ ಅನ್ನೋದು ಇಲ್ಲಿದೆ ಮಾಹಿತಿ.
ಈ ಕರಿಬೇವು ಬಳಕೆ ಮಾಡುವುದರಿಂದ ದೇಹದಲ್ಲಕನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಶಕ್ತಿಯನ್ನ ಹೊಂದಿದೆ. ಬರೀ ಕೊಲೆಸ್ಟ್ರಾಲ್ ಮಾತ್ರವಲ್ಲ ಮಾನಸಿಕ ಒತ್ತಡದಿಂದ ಬಳಲುತ್ತಿರುವವರಿಗೂ ಕರಿಬೇವಿನಿಂದ ಸಾಕಷ್ಟು ಉಪಯೋಗವಿದೆ. ದೇಹದಲ್ಲಿ ಆಗಾಗ ಬೇಡದ ವಿಶಕಾರಿ ಅಂಶಗಳು ಸೇರಿಕೊಂಡು ಬಿಡುತ್ತವೆ. ಅದನ್ನೆಲ್ಲ ಹೊರಗೆ ಹಾಕುವುದಕ್ಕೆ ಇದೊಂದು ಬೆಸ್ಟ್ ಡಿಟಾಕ್ಸ್ ಡ್ರಿಂಕ್ ಎಂದರೆ ತಪ್ಪಾಗುವುದಿಲ್ಲ.
ಹಾಗಾದ್ರೆ ಈ ಟಾಕ್ಸ್ ರೆಡಿ ಮಾಡಿಕೊಳ್ಳೋದು ಹೇಗೆ ಅಂತ ನೋಡೋದಾದ್ರೆ, ಮೊದಲು ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನ ಚೆನ್ನಾಗಿ ಕುದಿಸಿ. ಬಳಿಕ ಸ್ಟೌವ್ ಆಫ್ ಮಾಡಿ, ಆ ನೀರಿಗೆ ಏಳೆಂಟು ಕರಿಬೇವಿನ ಎಲೆಗಳನ್ನು ಹಾಕಿ, ಮುಚ್ಚಿಡಿ. ಹತ್ತು ನಿಮಿಷ ಆದ್ಮೇಲೆ ಆ ನೀರನ್ನ ಸೋಸಿಕೊಂಡು ಕುಡಿಯಿರಿ. ಅದರೊಳಗೆ ಕರಿಬೇವಿನ ಸತ್ವ ಎಲ್ಲಾ ಬಿಟ್ಟುಕೊಂಡಿರುತ್ತದೆ.
ಕರಿಬೇವು ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿದಾವೆ ಅನ್ನೋದು ಗೊತ್ತಾಯ್ತಲ್ಲ. ಕೂದಲಿನ ಆರೋಗ್ಯಕ್ಕೂ ಬೆಸ್ಟ್ ಮನೆ ಮದ್ದು ಈ ಕರಿಬೇವು. ಸುಮಾರು ಜನ ಅಡುಗೆಯಲ್ಲಿ ಕರಿಬೇವು ಸಿಕ್ಕಿದ್ರು, ಅದನ್ನ ಸೈಡಿಗೆ ಬಿಸಾಡ್ತಾರೆ. ಇನ್ಮೇಲಾದ್ರೂ ಆ ತಪ್ಪನ್ನ ಮಾಡದೆ ಕರಿಬೇವನ್ನ ಚೆನ್ನಾಗಿ ತಿನ್ನಿ. ಆರೋಗ್ಯದ ಲಾಭಗಳನ್ನ ಪಡೆದುಕೊಳ್ಳಿ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






