ಬೆಂಗಳೂರು: ಧರ್ಮಸ್ಥಳದ ಬುರುಡೆ ಕೇಸ್ ಬಗ್ಗೆ ವಿಚಾರ ಹೊರಗೆ ಬಂದ ಮೇಲೆ ಸಾಕಷ್ಟು ವಿಚಾರಗಳು ಸದ್ದು ಆಗುವುದಕ್ಕೆ ಶುರುವಾಯ್ತು. ಅದರಲ್ಲಿ ಅನನ್ಯಾ ಭಟ್ ಕೇಸ್ ಕೂಡ ಒಂದು. ನನ್ನ ಮಗಳು ಅನನ್ಯಾ ಭಟ್ ಕಾಣೆಯಾಗಿದ್ದಾಳೆ ಹುಡುಕಿಕೊಡಿ ಎಂದು ಸುಜಾತ ಭಟ್ ಬಂದರು. ಈಗ ಆ ಕೇಸ್ ಸುಳ್ಳು ಅಂತ ತಿಳಿದ ಮೇಲೆ ಕೇಸ್ ಕ್ಲೋಸ್ ಆಗಿದೆ. ಈ ಬೆನ್ನಲ್ಲೇ ಧರ್ಮಸ್ಥಳ ಬುರುಡೆ ಕೇಸ್ ಅನ್ನು ಎಸ್ಐಟಿ ತನಿಖೆ ನಡೆಸುವ ವಿಚಾರಕ್ಕೂ ಕೋರ್ಟ್ ತಡೆ ನೀಡಿದೆ. ಇಷ್ಟು ದಿನ ಎಸ್ಐಟಿ ಇದರ ತನಿಖೆಯನ್ನು ನಡೆಸುತ್ತಿತ್ತು.
ಈ ಸಂಬಂಧ ಗೃಹ ಸಚಿವ ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹೈಕೋರ್ಟ್ ಆದೇಶ ಸಂಪೂರ್ಣವಾಗಿ ನಾನು ನೋಡಿಲ್ಲ. ಕಾನೂನು ಇಲಾಖೆ ಮತ್ತು ಎಜೆ ಜೊತೆಗೆ ಚರ್ಚೆ ಮಾಡಿ ಮುಂದಿನ ಕ್ರಮವನ್ನು ತೆಗೆದುಕೊಳ್ತೀವಿ. ಅಪೀಲ್ ಹಾಕಬೇಕಾ..? ಬೇಡವಾ..? ಅಥವಾ ಸುಪ್ರಿಂ ಕೋರ್ಟ್ ಗೆ ಹೋಗಬೇಕಾ ಎಂಬುದೆಲ್ಲವನ್ನು ಚರ್ಎ ಮಾಡಿ ಆಮೇಲೆ ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಧರ್ಮಸ್ಥಳದ ಕೇಸ್ ಗೆ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಒಳಮೀಸಲಾತಿ ಅನುಷ್ಠಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಒಳಮೀಸಲಾತಿ ಜಾರಿಯಲ್ಲಿ ಯಾವುದೇ ಗೊಂದಲ ಇಲ್ಲ. ಒಳ ಮೀಸಲಾತಿ ಸಂಬಂಧ ಸುಗ್ರೀವಾಜ್ಞೆ ಹೊರಡಿಸಬೇಕು ಅಂತ ತೀರ್ಮಾನ ಆಗಿತ್ತು. ಎ.ಬಿ.ಸಿ ಅಂತ ಕ್ಯಾಟಗರಿ ಮಾಡಿದ್ವಿ, ಅದಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು. ಆ ಬಳಿಕ ಕಾಯ್ದೆ ಮಾಡಬೇಕು ಅಂತ ಹೇಳಲಾಗಿತ್ತು. ಮೊನ್ನೆಯ ಸಿಎಂ ನೇತೃತ್ವದ ಸಭೆಯಲ್ಲಿ ಸುಗ್ರೀವಾಜ್ಞೆ ಬದಲಿಗೆ, ನೇರವಾಗಿ ಬಿಲ್ ತರಲು ನಿರ್ಧಾರ ಮಾಡಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಬಿಲ್ ತನ್ನಿ ಅಂತ ಕಾನೂನು ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ. ಬಿಲ್ ಬರುತ್ತೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















