Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗೂಗಲ್ ನಲ್ಲಿ ಈ ವಿಷಯಗಳನ್ನು ಸರ್ಚ್ ಮಾಡಿದರೆ ಜೈಲು ಪಾಲಾಗೋದು ಗ್ಯಾರಂಟಿ!

---Advertisement---

ಬೆಂಗಳೂರು.ಜುಲೈ.14: ಇಂದು ನಮಗೆ ಯಾವುದೇ ಸಣ್ಣ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗುವುದೇ ಗೂಗಲ್ (Google). ಅಡುಗೆ ಮನೆಯ ಸಣ್ಣ ಅನುಮಾನದಿಂದ ಹಿಡಿದು ದೊಡ್ಡ ಸಂಶೋಧನೆಯವರೆಗೆ ಎಲ್ಲದಕ್ಕೂ ಕೆಲವೇ ಸೆಕೆಂಡುಗಳಲ್ಲಿ ಗೂಗಲ್ ಉತ್ತರ ನೀಡುತ್ತದೆ. ಆದರೆ, ಇಂಟರ್ನೆಟ್ನಲ್ಲಿ ಸಿಗುವ ಪ್ರತಿಯೊಂದು ಮಾಹಿತಿಯೂ ಸುರಕ್ಷಿತ ಎಂದು ಭಾವಿಸಿದರೆ ನೀವು ಸಂಕಷ್ಟಕ್ಕೆ ಸಿಲುಕುವುದು ಖಂಡಿತ.

ಹೌದು, ಗೂಗಲ್ ನಲ್ಲಿ ಕೆಲವು ನಿರ್ದಿಷ್ಟ ವಿಷಯಗಳನ್ನು ಹುಡುಕುವುದು ನಿಮ್ಮನ್ನು ಕಾನೂನುಬಾಹಿರ ಚಟುವಟಿಕೆಗಳ ಸುಳಿಗೆ ಸಿಲುಕಿಸಬಹುದು. ಇದು ಕೇವಲ ನಿಮ್ಮ ಸೈಬರ್ ಸುರಕ್ಷತೆಗೆ ಮಾತ್ರವಲ್ಲ, ನಿಮ್ಮನ್ನು ಜೈಲಿಗೂ ಕಳುಹಿಸಬಹುದು ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.

ಸರ್ಚ್ ಮಾಡುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ:

ಬಾಂಬ್ ಮತ್ತು ಸ್ಫೋಟಕಗಳ ತಯಾರಿ: ಬಾಂಬ್ ಮಾಡುವುದು ಹೇಗೆ? ಅಥವಾ ಸ್ಫೋಟಕ ವಸ್ತುಗಳನ್ನು ಎಲ್ಲಿ ಖರೀದಿಸಬೇಕು ಎಂಬಂತಹ ವಿಷಯಗಳನ್ನು ಕುತೂಹಲಕ್ಕೂ ಸಹ ಗೂಗಲ್ ನಲ್ಲಿ ಹುಡುಕಬೇಡಿ.

ಕಾನೂನುಬಾಹಿರ ಆಯುಧಗಳು: ಅಕ್ರಮ ಶಸ್ತ್ರಾಸ್ತ್ರಗಳ ತಯಾರಿಕೆ ಅಥವಾ ಅವುಗಳ ಮಾರಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸರ್ಚ್ ಮಾಡುವುದು ಅತಿ ದೊಡ್ಡ ಅಪರಾಧ.

ಮಾದಕ ದ್ರವ್ಯಗಳು (Drugs): ನಿಷೇಧಿತ ಡ್ರಗ್ಸ್ ಅಥವಾ ಗಾಂಜಾದಂತಹ ಮಾದಕ ಪದಾರ್ಥಗಳ ಪೂರೈಕೆ ಮತ್ತು ಖರೀದಿಯ ಬಗ್ಗೆ ಇಂಟರ್ನೆಟ್ನಲ್ಲಿ ಜಾಲಾಡುವುದು ಅಪಾಯಕಾರಿ.

ನೆನಪಿರಲಿ: ಇಂತಹ ವಿಷಯಗಳನ್ನು ನೀವು ಗೂಗಲ್ನಲ್ಲಿ ಹುಡುಕಿದ ತಕ್ಷಣ, ದೇಶದ ಭದ್ರತಾ ಏಜೆನ್ಸಿಗಳು ಮತ್ತು ಸೈಬರ್ ಪೊಲೀಸರ ಕಣ್ಣು ನಿಮ್ಮ ಐಪಿ (IP) ಅಡ್ರೆಸ್ ಮೇಲೆ ಬೀಳುತ್ತದೆ. ದೇಶದ ಭದ್ರತೆಗೆ ಧಕ್ಕೆ ತರುವ ಇಂತಹ ಸರ್ಚ್ಗಳನ್ನು ಗಂಭೀರವಾಗಿ ಪರಿಗಣಿಸುವ ಪೊಲೀಸರು, ನಿಮ್ಮನ್ನು ತಕ್ಷಣವೇ ಬಂಧಿಸಿ ಜೈಲಿಗೆ ಕಳುಹಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಇಂಟರ್ನೆಟ್ ಬಳಸುವಾಗ ಜವಾಬ್ದಾರಿಯುತವಾಗಿರಿ ಮತ್ತು ಸುರಕ್ಷಿತವಾಗಿರಿ!

Join WhatsApp

Join Now

Join Telegram

Join Now