Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದಲ್ಲಿ ಏರಿಕೆಯತ್ತ ಕೊರೊನಾ ಸೋಂಕು : ಇಂದು ಎಷ್ಟಿದೆ ಗೊತ್ತಾ..?

---Advertisement---

 

ಕೊರೊನಾ ಅಂದ್ರೆನೆ ಜನ ಗಾಬರಿಯಾಗ್ತಾರೆ. ಅಂತ ಪರಿಸ್ಥಿತಿಯನ್ನ ನಿರ್ಮಾಣ ಮಾಡಿ ಜನರಿಗೆ ಆತಂಕ ಹುಟ್ಟಿಸಿದೆ. ಈಗ ಮತ್ತೆ ವೈರಸ್ ಕಾಟ ಶುರುವಾಗಿದ್ದು, ದಿನೇ ದಿನೇ ಏರಿಜೆಯಾಗುತ್ತಲೇ ಇದೆ. ಇಂದು ಕೊರೊನಾ ಸಂಖ್ಯೆ ರಾಜ್ಯದಲ್ಲಿ 200ರ ಗಡಿ ದಾಟಿ ಆಗಿದೆ. ಇದು ಸಾಮಾನ್ಯರಲ್ಲಿ ಆತಂಕವನ್ನ ಸೃಷ್ಟಿ ಮಾಡಿದೆ. ಈಗಾಗಲೇ ಸಾಕಷ್ಟು ಜನ ಮಾಸ್ಕ್ ಬಳಕೆ ಮಾಡುವುದು, ಸ್ಯಾನಿಟೈಸರ್ ಬಳಕೆ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.

ಮಳೆ ಬೇರೆ ಅವಧಿಗೂ ಮುನ್ನವೇ ಆರಂಭವಾಗಿದೆ. ಚಳಿ ಕೂಡ ಇದೆ. ಇದರ ನಡುವೆ ಕೊರೊನಾ ಹಾವಳಿ ಇಡ್ತಾ ಇದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಜಾಸ್ತಿ ಆಗ್ತಾನೆ ಇದೆ. ನಿನ್ನೆ ಒಂದೇ ದಿನ ಅಂದ್ರೆ ಕಳೆದ 24 ಗಂಟೆಯಲ್ಲಿ ಸುಮಾರು 114 ಕೇಸ್ ಗಳು ದಾಖಲಾಗಿವೆ. ಈ ಮೂಲಕ ಪಾಸಿಟಿವಿಟಿ ರೇಟ್ 24.7 ಪರ್ಸೆಂಟ್ ಜಾಸ್ತಿಯಾಗಿದೆ. ಹಾಗೇ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದ್ದು, 3ಕ್ಕೆ ಏರಿಕೆಯಾಗಿದೆ.

ಎರಡನೇ ಅವಧಿಯ ಕೊರೊನಾ ಬಂದಾಗ ಅತಿ ಹೆಚ್ಚು ಜನ ಸಾವನ್ನಪ್ಪಿದ್ದು ಹಾವೇರಿ ಜಿಲ್ಲೆಯಲ್ಲಿಯೆ. ಹೀಗಾಗಿ ಈ ಬಾರಿ ಯಾವುದೇ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ, ಸಿಲಿಕಾನ್ ಸಿಟಿಯಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಸಂಖ್ಯೆಯನ್ನು ನೋಡಿಯೇ ಗಾಬರಿಯಾಗಿರುವ ಹಾವೇರಿ ಜಿಲ್ಲಾಸ್ಪತ್ರೆ ಐಸೋಲೇಷನ್ ಅನ್ನೇ ಸಿದ್ದ ಮಾಡುತ್ತಿದೆಯಂತೆ. 16 ಬೆಡ್ ಗಳುಳ್ಳ ವಿಶೇಷ ಐಸೋಲೇಷನ್ ಅನ್ನು ನಿರ್ಮಾಣ ಮಾಡಿದೆ. ಜೊತೆಗೆ ಎರಡು ಶಿಫ್ಟ್ ಗಳಲ್ಲಿ ಕೆಲಸ ಮಾಡುವುದಕ್ಕೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆಯಂತೆ. ಹೀಗೆ ಕೊರೊನಾ ತಡೆಗೆ ಹಾವೇ ಜಿಲ್ಲಾಸ್ಪತ್ರೆ ಪಣ ತೊಟ್ಟಿದೆ ಎನ್ನಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment