Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಾಸ್ಯ ನಟ ಉಮೇಶ್ ಅವರ ಆರೋಗ್ಯ ಸ್ಥಿತಿ ಗಂಭೀರ..!

---Advertisement---

ಬೆಂಗಳೂರು: ತಮ್ಮ ವಿಭಿನ್ನ ಹಾಸ್ಯದಿಂದಾನೇ ಹೆಸರಾಗಿರುವ ಹಿರಿಯ ನಟ ಉಮೇಶ್ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ದೇಹಕ್ಕೆ ಪೆಟ್ಟಾದ ಕಾರಣ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅವರಿಗೆ ವಯಸ್ಸಾಗಿದ್ದರು ಕೂಡ, ಜೋರು ಓಡಾಡುವುದಕ್ಕೆ ಹೆಚ್ಚು ಸಾಧ್ಯವಾಗದೆ ಇದ್ದರು ಕೂಡ ಕನ್ನಡ ಇಂಡಸ್ಟ್ರಿಯ ವಿಚಾರದಲ್ಲಿ ಆಕ್ಟೀವ್ ಆಗಿ ಓಡಾಡುತ್ತಾರೆ. ಅವರ ಸಿನಿಮಾಗಳ ಪ್ರಚಾರಕ್ಕೆ ಮುಂದೆ ಇರುತ್ತಾರೆ. ಆದರೆ ವಯೋಸಹಜ ಸಮಸ್ಯೆಯಿಂದ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಲು ಜಾರಿ ಬಿದ್ದಿದ್ದರಿಂದ ಗಾಯಗಳಾಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಮುದ್ದಿನ ಪಾಳ್ಯದ ಶಾಂತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವರನಟ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರ ಜೊತೆಗೆ ನಟಿಸಿದ್ದಾರೆ. ಉಮೇಶ್ ಅವರ ಹಾಸ್ಯ ಎಲ್ಲರಿಗೂ ಇಷ್ಟ. ಈಗಲೂ ಅಪಾರ್ಥ ಮಾಡ್ಕೊಬೇಡಿ ಎಂಬ ಡೈಲಾಗ್ ಅಂಬಾಸಿಡರ್ ಅವ್ರು. ವೈದ್ಯರು ಸದ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಚಿಕಿತ್ಸೆಗೂ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಹಿರಿಯ ಜೀವಗಳು ಇಂಡಸ್ಟ್ರಿಗೆ ಅಗತ್ಯವಿದೆ‌. ಅವರ ಇರುವಿಕೆ, ಅವರ ಮುದ್ದಾದ ಮಾತುಗಳು, ಅನುಭವವೇ ಅದೇನೋ ಒಂದು ರೀತಿಯ ಪಾಸಿಟಿವ್ ವೈಬ್ ಇದ್ದಂತೆ. ಹೀಗಾಗಿ ಹಿರಿ ಜೀವಗಳು ಸದಾ ಆರೋಗ್ಯದಿಂದ ಇರಬೇಕಾಗುತ್ತದೆ. ಆದಷ್ಟು ಬೇಗ ಉಮೇಶ್ ಅವರು ಚೇತರಿಸಿಕೊಳ್ಳಲಿ ಅಂತಾನೇ ಅವರ ಅಭಿಮಾನಿಗಳು, ಆರಾಧಕರು ಬಯಸುತ್ತಿದ್ದಾರೆ. ಈಗಲು ಉಮೇಶ್ ಅವರು ಸಿನಿಮಾಗಳಲ್ಲು ತಮ್ಮನ್ನು ತಾವು ತೊಡಗಿಸಿಕೊಳ್ಳುವ ರೀತಿಯೇ ಎಲ್ಲರಿಗೂ ಸ್ಪೂರ್ತಿಯಾಗಿ ಕಾಣಿಸುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now