ಬೆಂಗಳೂರು; ಆ ಕಡೆ ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ ನಡೆದಿದೆ. ಇತ್ತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಜೀವ ಬೆದರಿಕೆ ಬಂದಿದೆ. ಅದರಲ್ಲೂ ಕೊಲೆ ಮಾಡಿ ಫ್ರಿಡ್ಜ್ ನಲ್ಲಿ ತುಂಬ್ತೇನೆ ಎಂದು ಹೆದರಿಸಿದ್ದಾರೆ. ಸಿಂದಾರ್ ರಜಪೂತ್ ಎಂಬ ಹೆಸರಿನಿಂದ ಬೆದರಿಕೆಯ ಮೇಲ್ ಬಂದಿದೆ. ಇಬ್ಬರನ್ನು ಕೊಲೆ ಮಾಡಿ ಫ್ರಿಡ್ಜ್ ಹಾಗೂ ಟ್ರ್ಯಾಲಿ ಬ್ಯಾಗ್ ನಲ್ಲಿ ತುಂಬುತ್ತೇನೆ ಎಂದು ಮೇಲ್ ನಲ್ಲಿ ಬೆದರಿಕೆ ಹಾಕಿದ್ದಾರೆ.
ರಾಮಪುರ ಪ್ರಭಾಕರ್ ಗೆ ಒಂದು ಕೋಟಿ ರೂಪಾಯಿ ಸಾಲ ನೀಡಿದ್ದೇನೆ. ಆತ ಇದುವರೆಗೂ ಸಾಲವನ್ನು ವಾಪಸ್ ನೀಡಿಲ್ಲ. ಆತನಿಗೆ ಸಾಲ ವಾಪಸ್ ಕೊಡುವುದಕ್ಕೆ ಹೇಳಿ. ಆ ಒ್ರಭಾಕರ್ ತನ್ನ ಹಣವನ್ನ ತಮ್ಮ ನಾದಿನಿ ಹಾಗೂ ಸಂಬಂಧಿಕರ ಮನೆಯಲ್ಲಿ ಇಟ್ಟಿದ್ದಾನೆ. ಪ್ರಭಾಕರ್ ಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬನಿಗೆ ಈಚೆಗೆ ಮದುವೆ ಮಾಡಿದ್ದಾರೆ. ಸಾಲದ ಹಣವನ್ನು ವಾಪಾಸ್ ನೀಡಲು ಆತನಿಗೆ ಹಣದ ಮೂಲ ಇಲ್ಲ. ಹೀಗಾಗಿ ಪ್ರಭಾಕರ್ ನ ಕೊಲೆ ಮಾಡುತ್ತೇನೆ.
ನೀವೂ ಕೊಡಿಸಲಿಲ್ಲ ಎಂದರೆ ನಿಮ್ಮನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಈ ಮೇಲ್ ಅನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ದೂರನ್ನು ದಾಖಲಿಸಿಕೊಂಡು ಇದೀಗ ಆ ಸಿಂದಾರ್ ರಜಪೂತ ಯಾರು..? ಎಂಬು ಹುಡುಕಾಟದಲ್ಲಿದ್ದಾರೆ. ಸಿಎಂ ಹಾಗೂ ಡಿಸಿಎಂಗೆನೆ ಕೊಲೆ ಮಾಡಿ ಫ್ರಿಡ್ಜ್ ನಲ್ಲಿ ತುಂಬುವ ಬೆದರಿಕೆ ಹಾಕಿದ್ದಾನೆ. ಪೊಲೀಸರು ಮೇಲ್ ಐಡಿ ಆಧರಿಸಿ ಹುಡುಕಾಡುತ್ತಿದ್ದಾರೆ.











