Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಚಿವ ಸುಧಾಕರ್ – ಸಂಸದ ಗೋವಿಂದ ಕಾರಜೋಳ ನಡುವೆ ಮಾತಿನ ಚಕಮಕಿ..!

---Advertisement---

ಸುದ್ದಿಒನ್, ಚಿತ್ರದುರ್ಗ, ಜನವರಿ. 26 : ಭದ್ರಾ ಮೇಲ್ದಂಡೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಸುಧಾಕರ್ ಹಾಗೂ ಬಿಜೆಪಿ ಸಂಸದ ಗೋವಿಂದ ಕಾರಜೋಳ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಇಂದು 76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಪಕ್ಕದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಇಬ್ಬರ ನಡುವೆ ಮಾತಿನ ಜಟಾಪಟಿ ನಡೆದಿರುವ ಘಟನೆ ನಡೆಯಿತು.

ಈ ವೇಳೆ ಗೋವಿಂದ ಕಾರಜೋಳ ಅವರು ಮಾಧ್ಯಮದವರನ್ನ ಕರೀರಿ ಅವರ ಮುಂದೆಯೇ ಸತ್ಯ ಹೇಳ್ತೀನಿ ಎಂದಿದ್ದಾರೆ. ನಾನು ನೀರಾವರಿ ಮಂತ್ರಿ ಆಗಿದ್ದಾಗ 5700 ಕೋಟಿ ನೀರಾವರಿಗೆ ಕೊಟ್ಟಿದ್ದೀನಿ. ಎರಡನೇ ವರ್ಷದಲ್ಲಿ 5700 ಕೋಟಿ ಕೊಟ್ಟಿದ್ದೀವಿ. ಮೊದಲನೇ ವರ್ಷ 3,300 ಕೋಟಿ, ಎರಡನೇ ವರ್ಷ 2,400 ಕೋಟಿ ಕೊಟ್ಟಿದೀವಿ. ಸಿದ್ದರಾಮಯ್ಯ ಸರ್ಕಾರ ಬಂದ್ಮೇಲೆ ಏನು ಕೊಟ್ಟಿಲ್ಲ ಎಂದಿದ್ದಾರೆ.

ಸುಧಾಕರ್ ಕೂಡ ಈ ವಿಚಾರವಾಗಿ ಮಾತನಾಡಿದ್ದು, ಮೊದಲು ನೀವು 5300 ಕೋಟಿ ಕೇಂದ್ರದಿಂದ ತನ್ನಿ. ಕೇಂದ್ರ ಬಜೆಟ್ ನಲ್ಲಿ ಕೊಟ್ಟ ಮಾತಿನಂತೆ ಮೊದಲು ನಡೆದುಕೊಳ್ಳಿ ಎಂದರು. ಆಗ ಕಾರಜೋಳ ಅವರು, 2007-8 ರಲ್ಲಿ ಭದ್ರಾ ಪ್ರಾಜೆಕ್ಟ್ ಶುರುವಾಗಿದೆ ಎಂದರು. ತಕ್ಷಣ ಸಚಿವ ಸುಧಾಕರ್, ನಾವೇ ಶುರು ಮಾಡಿದ್ದು ನಾನೇ ಇದ್ನಲ್ಲ ಎಂದರು.

ನೀನು ನನ್ನ ಜೊತೇಲೆ ಇದ್ದೆ ಅದಕ್ಕೆ ಹೇಳ್ತಿದೀನಿ ಕೇಳಿಲ್ಲಿ ಎಂದ ಕಾರಜೋಳರಿಗೆ 5300 ಕೋಟಿ ತರೋವರೆಗೂ ಬೇರೆ ಮಾತುಗಳು ಅಪ್ರಸ್ತುತ ಎಂದ ಸಚಿವ ಸುಧಾಕರ್.

ನಾನು 5700 ಕೋಟಿ ಕೊಟ್ಟಿದೀನಿ ನೀನು 5000 ಕೋಟಿ ತಗೊಂಡ್ ಬಾ ಎಂದ ಕಾರಜೋಳ ಅವರಿಗೆ ನೀವೆ ದುಡ್ಡೇ ಇಟ್ಟಿಲ್ಲ ಸರ್ ಎಂದರು ಸುಧಾಕರ್. ಆಗ ಏ ನಿನ್ನ ಮರ್ಯಾದೆ ತೆಗಿತೀನಿ ನಾನು ಗೊತ್ತಿರಲಿ ಎಂದೇಳಿ ಕಾರಜೋಳ ಅವರು ತೆರಳಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment