ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 07 : ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7 ಲಾರಿ ಲೋಡ್ ಗಳಲ್ಲಿದ್ದ ಅಂದಾಜು 7 ಕೋಟಿ ಮೌಲ್ಯದ 210 ಟನ್ ಅಡಕೆಯನ್ನು ಶನಿವಾರ ಕೇಂದ್ರ ಜಿ.ಎಸ್. ಟಿ. ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಅಕ್ರಮ ಅಡಿಕೆ ಯನ್ನು ಶಿವಮೊಗ್ಗದಿಂದ ಹೊಸಪೇಟೆಗೆ ಸಾಗಿಸುತ್ತಿದ್ದ ವೇಳೆ ಖಚಿತವಾದ ಮಾಹಿತಿ ಮೇರೆಗೆ ಕೇಂದ್ರ ಜಿಎಸ್ ಟಿ ಅಧಿಕಾರಿ ಹಮೀದ್ ಸಿದ್ದಕಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಚಿತ್ರದುರ್ಗ ಡಿಎಆರ್ ಮೈದಾನಕ್ಕೆ ಲಾರಿ ತಂದು, ತನಿಖೆ ಕಾರ್ಯ ಕೈಗೊಂಡಿದ್ದಾರೆ.