ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 17 : ನಗರದ ಐಯುಡಿಪಿ ಬಡಾವಣೆ, 5 ನೇ ಕ್ರಾಸ್ ನಿವಾಸಿ ಪ್ರೇಮಾ ( 68 ವರ್ಷ) ಇಂದು (ಅ.17, ಶನಿವಾರ) ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾದರು. ಮೃತರು ಪತಿ ಲಕ್ಷ್ಮಣ ರೆಡ್ಡಿ ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ನಾಳೆ (ಅ.18, ಭಾನುವಾರ) ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಬೆಳಿಗ್ಗೆ ಸುಮಾರು 11 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.










