ಚಿತ್ರದುರ್ಗ | ಮೊಬೈಲ್ ಟವರ್ ಅಳವಡಿಕೆಗೆ ಸ್ಥಳೀಯ ನಿವಾಸಿಗಳ ವಿರೋಧ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.02  : ಜೋಗಿಮಟ್ಟಿ ರಸ್ತೆ ಮೂರನೆ ಕ್ರಾಸ್ ಶೃಂಗೇರಿ ಮಠದ ಹಿಂಭಾಗ ಮನೆಯ ಮುಂದಿನ ಸೈಟ್‍ನಲ್ಲಿ ಅವಿನಾಶ್ ಎಂಬುವವರು ಏರ್‌ಟೆಲ್ ಟವರ್ ಅಳವಡಿಸಲು ಹೊರಟಿರುವುದನ್ನು ಅಲ್ಲಿನ ಬಹುತೇಕ ನಿವಾಸಿಗಳು ವಿರೋಧಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ.

ಜನಸಾಮಾನ್ಯರು ವಾಸಿಸುವ ಪ್ರದೇಶಗಳಲ್ಲಿ ಯಾವುದೇ ರೀತಿಯ ಟವರ್‌ ಗಳನ್ನು ಅಳವಡಿಸಬಾರದೆಂಬ ನಿಯಮವಿದ್ದರೂ ಹತ್ತು ಅಡಿ ಉದ್ದ ಹಾಗೂ ಅಗಲ ಗುಂಡಿ ತೋಡಿ ಟವರ್ ಅಳವಡಿಸುವುದರಿಂದ ಯಾವ ಸಮಯದಲ್ಲಿ ಅಪಾಯ ಸಂಭವಿಸುತ್ತದೋ ಎನ್ನುವುದನ್ನು ಹೇಳುವಂತಿಲ್ಲ. ವೃದ್ದರು, ಅಂಗವಿಕಲರು, ಗರ್ಭಿಣಿಯರು, ಬಾಣಂತಿಯರು, ಕ್ಯಾನ್ಸರ್ ರೋಗ ಪೀಡಿತರು, ಅಸ್ತಮಾದವರು ಇದ್ದಾರೆ.

ಟವರ್ ಅಳವಡಿಸುವ ಜಾಗದ ಎದುರಿನಲ್ಲಿಯೇ ಮಹಿಳಾ ಹಾಸ್ಟೆಲ್ ಕೂಡ ಇದೆ. ಕಬೀರಾನಂದ ಮಠದ ಶಾಲೆ ಇಲ್ಲಿಯೇ ಇರುವುದರಿಂದ ಪ್ರತಿನಿತ್ಯ ನೂರಾರು ಮಕ್ಕಳು ಓಡಾಡುತ್ತಿರುತ್ತಾರೆ. ಹಾಗಾಗಿ ಇಲ್ಲಿ ಟವರ್ ನಿಲ್ಲಿಸಲು ಅವಿನಾಶ್‍ಗೆ ಅನುಮತಿ ನೀಡದೆ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸುವಂತೆ ಹೆಚ್.ರಾಮಮೂರ್ತಿ, ವೆಂಕಟೇಶ್, ಕಮಲಮ್ಮ, ಗಂಗಮ್ಮ, ಕೋಮಲ, ಗಿರಿಜ, ಹರೀಶ, ಸವಿತ, ಇಂದ್ರಮ್ಮ, ದೀಪು, ಅಶೋಕ, ಸರೋಜ ಇನ್ನು ಮುಂತಾದವರು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *