Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ನಗರಸಭೆ: ಮಳಿಗೆಗಳ ಬಹಿರಂಗ ಹರಾಜು

---Advertisement---

ಚಿತ್ರದುರ್ಗ. ಮೇ.20: ಚಿತ್ರದುರ್ಗ ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ನಗರಸಭೆ ವ್ಯಾಪ್ತಿಯಲ್ಲಿನ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಿತು.

ಕಳೆದ ಏಪ್ರಿಲ್ 28ರ ಮಳಿಗೆಗಳ ಬಹಿರಂಗ ಹರಾಜು ಪ್ರಕಟಣೆಯಂತೆ ನಗರಸಭಾ ವ್ಯಾಪ್ತಿಯಲ್ಲಿರುವ ಟೂರಿಸ್ಟ್ ಹೋಟೆಲ್ ಪಕ್ಕದಲ್ಲಿರುವ ಮಳಿಗೆಗಳು, ಸಂತೆ ಹೊಂಡದ ಹತ್ತಿರವಿರುವ ಪೇಪರ್ ಮಳಿಗೆಗಳು, ಎನ್‍ಆರ್‍ವೈ ಮಳಿಗೆಗಳು, ಆರ್‍ಎಂಸಿ ಮಳಿಗೆಗಳು, ಸಿ.ಕೆ.ಪುರ ಯೂಟಿನಿ ಕಾಂಪ್ಲೆಕ್ಸ್ ಆಟೋ ಗ್ಯಾರೇಜ್ ಮಳಿಗೆಗಳು ಸೇರಿ ಒಟ್ಟು 37 ಮಳಿಗೆಗಳಿಗೆ ಬಹಿರಂಗ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು.

ಉಚ್ಛ ನ್ಯಾಯಾಲಯದಲ್ಲಿ ಎರಡು ಮಳಿಗೆಗಳಿಗೆ ಹಾಗೂ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಒಂದು ಮಳಿಗೆಗೆ ತಡೆಯಾಜ್ಞೆ ಕಾರಣದಿಂದ ಮೂರು ಮಳಿಗೆಗಳನ್ನು ಹೊರತುಪಡಿಸಿ, ಉಳಿದ 34 ಅಂಗಡಿಗಳ ಹರಾಜು ಕರೆಲಾಯಿತು. ಅವುಗಳಲ್ಲಿ ಟೂರಿಸ್ಟ್ ಹೋಟೆಲ್ ರೂ.3,26,000/ಗಳಿಗೆ ಅತಿ ಹೆಚ್ಚಿನ ಬೆಲೆಗೆ ಬಾಡಿಗೆಗೆ ಬಹಿರಂಗ ಹರಾಜಿನಲ್ಲಿ ಅಂತಿಮ ಬಿಡ್ ಆಗಿರುತ್ತದೆ ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...