Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ : ಲಾರ್ವಾ ಸಮೀಕ್ಷೆ ಕಾರ್ಯ: ನಗರ ಸ್ವಯಂ ಸೇವಕರ ಆಯ್ಕೆ

---Advertisement---

ಚಿತ್ರದುರ್ಗ. ಮೇ.12: 2025-26ನೇ ಸಾಲಿಗೆ ಜಿಲ್ಲೆಯ ವಿವಿಧ ನಗರ ಪ್ರದೇಶಗಳ ಸಮಸ್ಯಾತ್ಮಕ ವಾರ್ಡ್‍ಗಳಲ್ಲಿ ಈಡೀಸ್ ಲಾರ್ವಾ ಸಮೀಕ್ಷೆ ಕಾರ್ಯವನ್ನು ನಡೆಸಲು ಅನುಷ್ಟಾನ ಮಾರ್ಗಸೂಚಿ ಪ್ರಕಾರ ಕೇವಲ 100 ದಿನಗಳ ಅವಧಿಗೆ ಮಾತ್ರ ತಾತ್ಕಾಲಿಕವಾಗಿ ನಗರ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗುವುದು. ಈ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ.

 

ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ನಗರ-09, ಚಳ್ಳಕೆರೆ ನಗರ-2, ಹಿರಿಯೂರು ನಗರ-2, ಹೊಸದುರ್ಗ ನಗರ-2 ರಂತೆ ನಗರ ಸ್ವಯಂ ಸೇವಕರು ನಗರ ಪ್ರದೇಶಗಳಲ್ಲಿ ಈಡೀಸ್ ಲಾರ್ವಾ  ಸಮೀಕ್ಷೆಯನ್ನು ನಡೆಸಲು, ಪ್ರತಿದಿನ ಕಡ್ಡಾಯವಾಗಿ 100 ಮನೆಗಳಿಗೆ ಭೇಟಿ ನೀಡಿ, ಒಳಾಂಗಣ ಮತ್ತು ಹೊರಾಂಗಣದ ಕೃತಕ ನೀರಿನ ಸಂಗ್ರಹಗಳಲ್ಲಿ ಈಡೀಸ್ ಲಾರ್ವಾ ಸಮೀಕ್ಷೆಗೆ ನಡೆಸಲು ದಿನ ಒಂದಕ್ಕೆ ರೂ.200/-ಗಳಂತೆ ಆಯ್ಕೆಗೊಂಡ ಸೇವಕರ ಬ್ಯಾಂಕ್ ಖಾತೆಗಳಿಗೆ ಪಾವತಿ ಮಾಡಲಾಗುವುದು.

ಈ ಸಮೀಕ್ಷೆಗೆ ಸೇರ ಬಯಸುವವರು ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಆಗಿರಬೇಕು. ತಮ್ಮ ಸ್ವ-ವಿವರಗಳೊಂದಿಗೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಬ್ಯಾಂಕ್ ಪಾಸ್ ಪುಸ್ತಕದ ಮೊದಲನೇ ಪುಟ ಮತ್ತು ಆಧಾರ್ ಕಾರ್ಡ್‍ನ ನಕಲು ಪ್ರತಿಗಳೊಂದಿಗೆ ಇದೇ ಮೇ.14ರಂದು ಬೆಳಿಗ್ಗೆ 10.30 ರಿಂದ ಸಂಜೆ 4.30 ರವರೆಗೆ ಚಿತ್ರದುರ್ಗ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾಗಳ ಕಚೇರಿ ಆವರಣದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ದಾಖಲಾತಿ ಪರಿಶೀಲನೆಗೆ ಖುದ್ದು ಹಾಜರಾಗಬೇಕು. ಹಾಜರಾದ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ ನೀಡುವುದಿಲ್ಲ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ರೋಗವಾಹಕಗಳ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...