Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಜಮೀನು ವಿವಾದ ಕೊಲೆಯಲ್ಲಿ ಅಂತ್ಯ : ಮಕ್ಕಳ ಕಣ್ಮುಂದೆಯೇ ತಂದೆಯ ಭೀಕರ ಹತ್ಯೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 24 : ಜಮೀನಿನಲ್ಲಿ ಭೀಕರವಾಗಿ ಹತ್ಯೆಯಾಗಿರೋ ವ್ಯಕ್ತಿ. ಮತ್ತೊಂದು ಕಡೆ ಕೊಲೆ ನಂತ್ರ ಮಚ್ಚು ಹಿಡಿದು ಅವಾಜ್ ಹಾಕ್ತಿರೋ ಆರೋಪಿ, ಇನ್ನೊಂದೆಡೆ ಈ ಭೀಕರ ಹತ್ಯೆ ಕಂಡು ಬೆಚ್ಚಿ ಬಿದ್ದಿರೋ ಸಾರ್ವಜನಿಕರು. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ತಾಲ್ಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ.

ಕಡ್ಲೆ ಗುದ್ದು ಗ್ರಾಮದ 55 ವರ್ಷದ ವೀರಭದ್ರಪ್ಪನನ್ನ ಭೀಕರವಾಗಿ ಕೊಲೆ ಮಾಡಲಾಗಿದೆ. ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮೃತ ವೀರಭದ್ರಪ್ಪ ಮಕ್ಕಳ ಜೊತೆ ಎತ್ತಿನಬಂಡಿಯಲ್ಲಿ ಜಮೀನಿಗೆ ಹೊರಟಿದ್ದ. ಇದೇ ಸಮಯವನ್ನೆ ಸ್ಕೆಚ್ ಹಾಕಿ ಕಾದಿದ್ದ ಆರೋಪಿ ನಂದನ್ ಟ್ರಾಕ್ಟರ್ ನಲ್ಲಿ ಬೆನ್ನತ್ತಿ ಹೊರಟಿದ್ದ. ತೋಟದ ಹಾದಿಯಲ್ಲಿ ಹೋಗುತ್ತಿದ್ದ ವೀರಭದ್ರಪ್ಪ ಎತ್ತಿನಗಾಡಿಗೆ ಏಕಾಏಕಿ ಟ್ರಾಕ್ಟರ್ ಗುದ್ದಿಸಿ ಅಟ್ಯಾಕ್ ಮಾಡಿದ್ದ. ಇತ್ತ ಎತ್ತಿನಗಾಡಿಯಿಂದ ವೀರಭದ್ರಪ್ಪ ಬೀಳುತ್ತಿದ್ದಂತೆ ರಾಕ್ಷಸನಂತೆ ಮುಗಿಬಿದ್ದಿದ್ದ. ಇನ್ನೂ ಆರೋಪಿ ನಂದನ್ ಕೈನಲ್ಲಿ ಮಚ್ಚು ನೋಡ್ತಿದ್ದಂತೆ ವೀರಭದ್ರಪ್ಪನ ಇಬ್ಬರು ಪುತ್ರರೂ ಎತ್ತಿನ ಗಾಡಿ ಎಗರಿ ತಪ್ಪಿಸಿಕೊಳ್ಳಲು ಯತ್ನಿಸಿದ್ರು. ಇತ್ತ ಆರೋಪಿ ನಂದನ್ ಮಾತ್ರ ವೀರಭದ್ರಪ್ಪ ಬೆನ್ನತ್ತಿ ಹೋಗಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ
ಮಾಡಿದ್ದಾನೆ. ಇನ್ನೂ ಕೊಲೆ ಬಳಿಕ ಮಚ್ಚು ಹಿಡಿದು ಮೃತನ ಪುತ್ರರಿಗೂ ಅವಾಜ್ ಹಾಕಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ಕೊಲೆಗೆ ಜಮೀನು ಜಗಳವೇ ಮುಖ್ಯ ಕಾರಣ ಎಂದು ತಿಳಿದು ಬಂದಿದೆ. ಒಂದು ವರ್ಷದಿಂದ ಮೃತ ವೀರಭದ್ರಪ್ಪ ಹಾಗೂ ಇದೇ ಗ್ರಾಮದ ಕಾಂತರಾಜು ಕುಟುಂಬಗಳ ನಡುವೆ ಜಮೀನು ಜಾಗಕ್ಕೆ ಜಗಳ ನಡೆಯುತ್ತಲೇ ಇತ್ತು. ಇದೇ ದ್ವೇಷಕ್ಕೆ ಕಾಂತರಾಜನ ಪತ್ರ ನಂದನ್ ವೀರಭದ್ರಪ್ಪನಿಗೆ ಕೊಲ್ಲುವುದಾಗಿ ಕೊಲೆ ಬೆದರಿಕೆಯೂ ಸಹ ಹಾಕಿದಂತೆ .ಅಷ್ಟೇ ಅಲ್ಲದೆ ತನ್ನ ಬೈಕಿನಲ್ಲಿ ಮಚ್ಚು ಹಿಡಿದು ಓಡಾಡ್ತಿದನಂತೆ .ಈ ವಿಷಯವನ್ನ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರಂತೆ. ಆದರೆ ಪೊಲೀಸರ ನಿರ್ಲಕ್ಷಕ್ಕೆ ಇಂದು ವೀರಭದ್ರಪ್ಪ ಹತ್ತ ಆಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ .
ಇತ್ತ ಕೊಲೆ ವಿಷಯ ತಿಳಿಯುತ್ತಿದ್ದಂತೆ ಘಟನೆ ಸ್ಥಳಕ್ಕೆ ಜಿಲ್ಲಾ ಎಸ್ ಪಿ ರಂಜಿತ್ ಕುಮಾರು ಬಂಡಾರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಭರಮಸಾಗರ ಪೊಲೀಸರು ಆರೋಪಿ ನಂದನ್ ಹಾಗೂ ಕೊಲೆಗೆ ಕುಮ್ಮಕ್ಕು ನೀಡಿದ ಕಾಂತರಾಜ್ ಇಬ್ಬರನ್ನ ವಶಕ್ಕೆ ಪಡೆದು ಕೇಸ್ ಸಹ ದಾಖಲಿಸಿ ವಿಚಾರಣೆಯನ್ನು ಆರಂಭಿಸಿದ್ದಾರೆ.

ಒಟ್ಟಾರೆ 2 ಕುಟುಂಬಗಳ ಜಮೀನು ಜಗಳಕ್ಕೆ ನೆತ್ತರು ಹರಿದಿದ್ದು ಇತ್ತ ಕೊಲೆ ಮಾಡಿದ ಆರೋಪಿಗಳು ಇದೀಗ ಪೊಲೀಸ್ ಅತಿಥಿಯಾಗಿದ್ದು ಕೊಲೆಗಡುಕರಿಗೆ ಕಠಣ ಶಿಕ್ಷೆ ಆಗಬೇಕು ಅನ್ನೋದು ಮೃತರ ಸಂಬಂಧಿಕರ ಒತ್ತಾಯವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...