ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 : ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿಯ ಹೆಮ್ಮೆಯ ಪುತ್ರ, ಹೆಸರಾಂತ ಉದ್ಯಮಿ ಹಾಗೂ ಜನಪ್ರಿಯ ಸಮಾಜ ಸೇವಕ ಜಿ. ಎಂ. ಲವಕುಮಾರ್ ಅವರಿಗೆ ಪ್ರತಿಷ್ಠಿತ ‘ಗೌರವ ಡಾಕ್ಟರೇಟ್’ ಗರಿ ಲಭಿಸಿದೆ.
ಸಮಾಜಮುಖಿ ಚಿಂತನೆಗಳೊಂದಿಗೆ ಸದಾ ಜನಪರ ಹಾಗೂ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಸಮಾಜ ಸೇವೆಯನ್ನು ಗುರುತಿಸಿ ಇದೇ ಸೆಪ್ಟೆಂಬರ್ 19 ರಂದು ‘ದಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಂಡ್ ರಿಸರ್ಚ್ ಯೂನಿವರ್ಸಿಟಿ’ಯು ಈ ಗೌರವವನ್ನು ನೀಡಿ ಪುರಸ್ಕರಿಸಿದೆ. ಪಾಂಡಿಚೇರಿಯ ಹೋಟೆಲ್ ಅಣ್ಣಾಮಲೈ ಇಂಟರ್ನ್ಯಾಷನಲ್ನಲ್ಲಿ ಅತ್ಯಂತ ಅದ್ಧೂರಿಯಾಗಿ ಆಯೋಜಿಸಲಾಗಿದ್ದ ವಾರ್ಷಿಕ ‘ಗೋಲ್ಡನ್ ಐಕಾನಿಕ್ ಅವಾರ್ಡ್ಸ್’ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಗೌರವ ಡಾಕ್ಟರೇಟ್ ಪುರಸ್ಕೃತ ಜಿ. ಎಂ. ಲವಕುಮಾರ್ ಅವರನ್ನು ಚಿತ್ರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರು ಹಾಗೂ ಹೊಳಲ್ಕೆರೆ ತಾಲ್ಲೂಕು ಶಿಕ್ಷಣ ಇಲಾಖೆಯ ವತಿಯಿಂದ ಅತ್ಯಂತ ಪ್ರೀತಿ-ಗೌರವಗಳಿಂದ ಅದ್ಧೂರಿಯಾಗಿ ಸನ್ಮಾನಿಸಲಾಯಿತು.
ಈ ಅಭಿನಂದನಾ ಸಮಾರಂಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಕಾಮಾಕ್ಷಿ, ಸಹ ಶಿಕ್ಷಕರಾದ ಹಾಲೇಶಪ್ಪ, ಗೀತಾ ಆನಂದ, ಗೀತಾ, ಲತಾ, ವೀಣಾ, ಜ್ಯೋತಿ, ಹೊಳಲ್ಕೆರೆ ಎಂಇಎಸ್ ಶಾಲೆಯ ಮುಖ್ಯೋಪಾಧ್ಯಾಯರಾದ ಗಾಯತ್ರಿ ಪ್ರಭಾಕರ್, ಅವರ ಪುತ್ರಿ ರಜಿನಿ, ಹೊಳಲ್ಕೆರೆ ಬಿಇಓ ಶ್ರೀನಿವಾಸ್, ಇಸಿಓ ವಿಜಯ್, ಸಿಆರ್ಪಿಗಳಾದ ರೂಪ, ಮುರಳಿ ಕೃಷ್ಣ, ಚಿತ್ರಹಳ್ಳಿ ಗೇಟ್ ಶಾಲೆಯ ಮುಖ್ಯೋಪಾಧ್ಯಾಯರಾದ ರುದ್ರಪ್ಪ, ಶಿಕ್ಷಕ ಜಯ್ಯಪ್ಪ, ಡಿಡಿಪಿಐ ಕಚೇರಿಯ ಸಬ್ಜೆಕ್ಟ್ ಇನ್ಸ್ಪೆಕ್ಟರ್ ರಂಗನಾಯಕ ಹಾಗೂ ಚಿತ್ರಹಳ್ಳಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಾಜಪ್ಪ, ಉಪಾಧ್ಯಕ್ಷೆ ರೂಪ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಇದೇ ವೇಳೆ ಗ್ರಾಮದ ಮುಖಂಡರಾದ ಜಿ. ಬಿ. ವಿಶ್ವನಾಥಪ್ಪ, ಜಿ. ಎಲ್. ದಯಾನಂದ್, ಎಂ. ಆರ್. ನಾಗರಾಜು, ಎಂ. ಎಸ್. ಮಲ್ಲಿಕಾರ್ಜುನ್, ಎಂ. ಜೆ. ಶಿವಮೂರ್ತಿ, ಜಿ. ಎಂ. ಪ್ರಕಾಶ್, ಜಿ. ಈ. ಮಲ್ಲಿಕಾರ್ಜುನ್, ಜಿ. ಬಿ. ವಸಂತ್, ಜಿ. ಎನ್. ಕಾಂತರಾಜು, ಈ. ಮಲ್ಲಿಕಾರ್ಜುನ್, ಸಿ. ಜಿ. ಹೇಮಂತ್, ಜಿ. ಜೆ. ಶಶಿಕುಮಾರ್, ಟಿ. ಎಲ್. ನಾಗರಾಜು, ಯು. ಬಿ. ನಾಗರಾಜು, ಎಂ. ವೆಂಕಟೇಶ್, ಕೆ. ಆನಂದ್ ಮೂರ್ತಿ, ಕಾಟಲಿಂಗಪ್ಪ, ಚಿತ್ರಲಿಂಗಪ್ಪ, ಭದ್ರಪ್ಪ ಸೇರಿದಂತೆ ಊರಿನ ಅಪಾರ ಸಂಖ್ಯೆಯ ಸಾರ್ವಜನಿಕರು ಹಾಗೂ ಹಿತೈಷಿಗಳು ಭಾಗವಹಿಸಿ ಲವಕುಮಾರ್ ಅವರಿಗೆ ಶುಭ ಹಾರೈಸಿದರು.










