Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಜೂನ್ 6 ಮತ್ತು 7ರಂದು ಗುರುವಂದನಾ ಕಾರ್ಯಕ್ರಮ

---Advertisement---

 

ಸುದ್ದಿಒನ್, ಚಿತ್ರದುರ್ಗ, ಜೂನ್‌. 02 : ಶ್ರೀ ನಿರಂಜನಸ್ವಾಮಿ ಗದ್ದಿಗೆ ಟ್ರಸ್ಟ್ ವತಿಯಿಂದ ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ಶಿವಪುರ ಸುಕ್ಷೇತ್ರ ಬಸವಣ್ಣ ದೇವಸ್ಥಾನದ ಆವರಣದಲ್ಲಿರುವ ನಿರಂಜನಸ್ವಾಮಿ ಗದ್ದಿಗೆ ಅವದೂತ ಪೀಠದಲ್ಲಿ ಇದೇ ಜೂನ್ 6 ಮತ್ತು 7ರಂದು ಶ್ರೀ ಅಲಕ್ ನಿರಂಜನ ಸ್ವಾಮಿಯವರ 18ನೇ ವರ್ಷದ ಗುರುವಂದನಾ ಕಾರ್ಯಕ್ರಮ ಹಾಗೂ ಶ್ರೀ ಸತ್ಯಪ್ಪ ಸ್ವಾಮಿಯವರ 11ನೇ ವರ್ಷದ ಹಾಗೂ ಶ್ರೀ ಈಗಲು ಸ್ವಾಮಿಯವರ 9ನೇ ವರ್ಷದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗಾದ್ರಿಲಿಂಗೇಶ್ವರ ಸ್ವಾಮಿ ಪಟ್ಟಾಧ್ಯಕ್ಷರಾದ ಪೂಜಾರಿ ಮುತ್ತಯ್ಯ, ವದ್ದಿಕೆರೆ ಕಾಂತರಾಜ್ ಸ್ವಾಮಿ, ಅಖಂಡ ಬಸವೇಶ್ವರ ಸ್ವಾಮಿ ಇವರು ಕಾರ್ಯಕ್ರಮದ ಸಾನಿಧ್ಯವಹಿಸುವರು. ಶ್ರೀ ನಿರಂಜನಸ್ವಾಮಿ ಅವರ ಶಿಷ್ಯರಾದ ಚಳ್ಳಕೆರೆ ತಾಲ್ಲೂಕು ಚೌಳೂರು ಗ್ರಾಮದ ಈರಣ್ಣ ಸ್ವಾಮಿ ಅವರು ಪೂಜಾ ಕಾರ್ಯ ನೆರವೇರಿಸುವರು.

 

ಜೂನ್ 6ರಂದು ಶನಿವಾರ ಸಂಜೆ 5 ಗಂಟೆಗೆ ಗಂಗಾಪೂಜೆ, ರಾತ್ರಿ ಅಖಂಡ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 12ಕ್ಕೆ ಬಾದಾಮಿಯ ಅರುವೇಂದ್ರ ಸ್ವಾಮಿ ಅವರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ
ಜೂನ್ 7ರಂದು ಭಾನುವಾರ ಬೆಳಿಗ್ಗೆ ಶ್ರೀ ಸ್ವಾಮಿಯ ಭಕ್ತಾಧಿಗಳಿಂದ ಮೆರವಣಿಗೆ ಮೂಲಕ ಶ್ರೀ ಗಾದ್ರಿಪಾಲನಾಯಕ ಸ್ವಾಮಿಗೆ ಪೂಜೆ ಸಲ್ಲಿಸಿ ಗದ್ದಿಗೆಗೆ ಆಗಮನ, ಸದ್ಭಕ್ತರ ಸಾನಿಧ್ಯದಲ್ಲಿ ಶ್ರೀಗಳ ಗದ್ದಿಗೆ ಪೂಜೆ ನಡೆಯಲಿದೆ ಎಂದು ಶ್ರೀ ನಿರಂಜನಸ್ವಾಮಿ ಗದ್ದಿಗೆ ಟ್ರಸ್ಟ್ ಪ್ರಕಟಣೆ ತಿಳಿಸಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now