Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಮಾರಕಾಸ್ತ್ರದಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ : ಐವರ ಬಂಧನ

---Advertisement---

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 06 : ಸಾರ್ವಜನಿಕವಾಗಿ ರಸ್ತೆಯಲ್ಲಿ ಯುವಕರ ಗುಂಪೊಂದು ಮಾರಕಾಸ್ತ್ರ (ಲಾಂಗ್) ಬಳಸಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡು ನಾಗರಿಕರನ್ನು ಬೆಚ್ಚಿ ಬೀಳಿಸಿರುವ ಘಟನೆ ಬುಧವಾರ (ಫೆಬ್ರವರಿ.04) ನಡೆದಿದೆ.

ನಗರದ ಬಿಡಿ ರಸ್ತೆಯಲ್ಲಿರುವ ಭೋವಿ ಕಾಲೋನಿಯಲ್ಲಿ ದಿ: 04.02.2026 ರಂದು ರಾತ್ರಿ ಎನ್.ರಾಮು ಮತ್ತು ಸ್ನೇಹಿತರು ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಐವರು ಆರೋಪಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು
1] ಎನ್.ರಾಮು, ಚನ್ನಕ್ಕಿಹೊಂಡ,
2] ಬಿ.ಜಿ ಮನು, ಕನಕ ಸರ್ಕಲ್,
3] ವೇಂಕಟೇಶ್, ಆಶ್ರಯಬಡಾವಣೆ,
4] ಗೋವಿಂದರಾಜ್, ಚನ್ನಕ್ಕಿಹೊಂಡ, ಮತ್ತು
5] ಮನ್ಸೂರ್, ಚನ್ನಕ್ಕಿಹೊಂಡ, ಎಂದು ಗುರುತಿಸಲಾಗಿದೆ.

ನಗರದ ಯೂನಿಯಾನ್ ಪಾರ್ಕ್ ಎದುರಿನಲ್ಲಿರುವ ಬಾಲಾಜಿ ಸ್ಟೋರ್ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಗೆ ಭಯವುಂಟಾಗುವ ರೀತಿಯಲ್ಲಿ ಅಂದಾಜು ಒಂದು ಅಡಿಗಿಂತ ಹೆಚ್ಚು ಉದ್ದವಾಗಿರುವ ಮಾರಕಾಸ್ತ್ರವಾದ ಮಚ್ಚು/ಲಾಂಗ್‌ನಂತಹ ಆಯುಧವನ್ನು ಹಿಡಿದುಕೊಂಡು ರಾಮು ಎನ್ನುವವರು ಕೇಕ್ ಕಟ್ ಮಾಡಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದರು. ಇಷ್ಟೇ ಅಲ್ಲದೇ ಈ ದೃಶ್ಯವನ್ನು @ramcharan_46 ಎಂಬ ಹೆಸರಿನ ಇನ್ಸ್ ಸ್ಟಾಗ್ರಾಂ ಖಾತೆಯ ಮೂಲಕ ಹಾಕಿಕೊಂಡು ಸಾಮಾಜಿಕ ತಾಲತಾಣದಲ್ಲಿ ಹರಿಯಬಿಟ್ಟಿರುತ್ತಾರೆ. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಡಾ.ಶಿವಕುಮಾರ್ ಆರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ದಿನಕರ್ ಪಿ.ಕೆ, ಡಿ.ವೈ.ಎಸ್.ಪಿ ಚಿತ್ರದುರ್ಗ ಉಪವಿಭಾಗ, ಇವರ ಮಾರ್ಗದರ್ಶನದಲ್ಲಿ, ಪ್ರಕಾಶ ಗೌಡ ಪಾಟೀಲ, ಪಿ.ಐ, ಕೋಟೆ ಠಾಣೆ ಮತ್ತು ಸಿಬ್ಬಂದಿಯವರ ತಂಡ ರಚಿಸಿದ್ದು, ಸದರಿ ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡು ಆರೋಪಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದಿರುತ್ತಾರೆ.

ಕೋಟೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಆರೋಪಿಗಳನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿರುವ ಬಗ್ಗೆ ಚಿತ್ರದುರ್ಗ ಜಿಲ್ಲೆಯ ರಂಜಿತ್ ಕುಮಾರ್ ಬಂಡಾರು, ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now