ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 11 : ಕಲೆ, ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಕೃತಿ ನಮ್ನ ನಾಡಿನ ಐತಿಹಾಸಿಕ ರೂಪಕಗಳಾಗಿವೆ. ಇದನ್ನು ಪೋಷಣೆ ಮಾಡುವ ಕಲಾವಿದರನ್ನು ಸಮಾಜ ಗುರುತಿಸಬೇಕು ಎಂದು ಜಿಲ್ಲಾ ಉಸ್ತುವರಿ ಸಚಿವ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದ ನಗರಸಭಾ ಕಲ್ಯಾಣ ಮಂಟಪದಲ್ಲಿ ಇಂದು ರೈನ್ ಟ್ರಸ್ಟ್, ಅವ್ವ ಕಲಾ ಮೌಲ್ಯ ಮತ್ತು ಸಾಂಸ್ಕೃತಿಕ ಸಂಘ, ಮುಂಗಾರು ಮೇಲೋಡಿ ಮ್ಯೂಸಿಕ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ’ ಸಾಂಸ್ಕೃತಿಕ ಗಾನ ಸಂಗಮ_2026′ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿ
ನಾಡಿನ ಕಲಾ ವೈಭವವನ್ನು ಪೋಷಣೆ ಮಾಡುವ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಅಗತ್ಯ ಇದೆ
ಕಲೆ,ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಕೃತಿ ನಮ್ನ ನಾಡಿನ ಐತಿಹಾಸಿಕ ರೂಪಕಗಳಾಗಿವೆ. ಇದನ್ನು ಪೋಷಣೆ ಮಾಡುವ ಕಲಾವಿದರನ್ನು ಸಮಾಜ ಗುರುತಿಸಬೇಕು. ಒತ್ತಡದ ಬದುಕಿಗೆ ಕಲೆ ಮತ್ತು ಸಂಗೀತ ನೀಡುವ ನೆಮ್ಮದಿ ತಿಳಿಯಬೇಕು. ನಮ್ಮ ಜಿಲ್ಲೆಗೆ ಕಲೆ,ಸಾಹಿತ್ಯ ಮತ್ತು ಸಾಂಸ್ಕೃತಿಕ ಸಾಧನೆಯಲ್ಲಿ ಮಹತ್ವ ಸ್ಥಾನ ಇದೆ. ಯುವ ಸಮುದಾಯಕ್ಕೆ ಕಲೆ ಶ್ರೀಮಂತಿಕೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಜಾಗೃತಿ ಆಗಬೇಕು ಎಂದು ಹೇಳಿದರು.
ರೈನ್ ಟ್ರಸ್ಟ್ ಅಧ್ಯಕ್ಷ ಕಸವನಹಳ್ಳಿ ರಮೇಶ ಮಾತನಾಡಿ, ಪ್ರಸ್ತುತ ಒತ್ತಡ ಜೀವನದಲ್ಲಿ ನೆಮ್ಮದಿ ಇಲ್ಲ. ಸರ್ವ ರೋಗಕ್ಕೂ ಸಙಗೀತವೇ ಮದ್ದು ಎನ್ನುವ ದಾರಿ ಕಾಣಬೇಕಿದೆ. ಮೊಬೈಲ್ ಗೆ ಮಾರು ಹೋಗಿರುವ ಜನರಲ್ಲಿ ಕ್ರಿಯಾಶೀಲತೆ ಉಂಟಾಗಿದೆ. ತಮ್ಮಲ್ಲಿನ ಕಲೆಯನ್ನು ಮತ್ತು ಅಭಿಪ್ರಾಯಗಳಿಗೆ ವೇದಿಕೆಯಂತೆ ಬಳಸಿಕೊಂಡು ಸಮಾಜಮುಖಿಯಾಗಿ ಬೆಳೆಯುತ್ತಾರೆ. ಆದರೆ, ಸಮಾಜಕ್ಕೆ ಬೇಕೆನಿಸುವ ನಟನೆಯಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ,ಬರಹಗಾರ ಮತ್ತು ಕಲಾವಿದನಿಗೆ ಗಡಿ,ಜಾತಿ,ವರ್ಗ ಎನ್ನುವ ಸೀಮಿತತೆ ಇರುವುದಿಲ್ಲ.ವಿಶಾಲವಾದ ನೆಲೆಯಲ್ಲಿ ಬದುಕನ್ನು ಪ್ರೀತಿಸುವ ಭಾವನೆಯಲ್ಲಿ ಸಮಾಜವನ್ನು ನೋಡುವ ಸಂಬಂಧ ಬೆಸೆಯುತ್ತಾನೆ. ಸಂಗೀತವನ್ನು ಪ್ರತಿಯೊಬ್ಬರೂ ಬಯಸುವ ರೀತಿಯಲ್ಲಿ ಶಾರೀರಿಕ ಗುಣ ಇದೆ. ಲೋಕದ ಜನ ಜೀವನವನ್ನು ಬರಹ ರೂಪದಲ್ಲಿ ಮತ್ತು ರಂಗ ಕಲೆಯ ಅಭಿನಯ ರೂಪದಲ್ಲಿ ಶಾಶ್ವತವಾಗಿ ದಾಖಲು ಮಾಡುವ ವಿಧಾನವಾಗಿವೆ ಎಂದು ಹೇಳಿದರು.
ಗಾಯಕ ಎಂ. ಮಂಜುನಾಥ ಕಲ್ಲಹಟ್ಟಿ ಮಾತನಾಡಿ, ಬಯಲು ಸೀಮೆಯಲ್ಲಿ ಕಲಾವಿದರಿಗೆ ಕೊರತೆ ಇಲ್ಲ. ಅವಕಾಶಗಳು ಸಿಗಬೇಕು. ತುರ್ತಾಗಿ ಆಯೋಜಿಸಿದ್ದರೂ ಐವತ್ತಕ್ಕೂ ಹೆಚ್ಚು ಕಲಾವಿದರು ಭಾಗವಹಿ ಕಲೆ ಪ್ರದರ್ಶನ ಮಾಡಿದ್ದಾರೆ ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ರೈತ ಮುಖಂಡ ಕೆ.ಪಿ. ಭೂತಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ್, ಬೆಳೆಗೆರೆ ಸುರೇಶ್, ಇನ್ನರ್ ವಿಲ್ ಕ್ಲಬ್ ಅಧ್ಯಕ್ಷೆ ಅಪರ್ಣಾ ದೇವೇಂದ್ರಪ್ಪ, ಬ್ಯಾನರ್ಜಿ, ಭೀಮಣ್ಣ ಇದ್ದರು.














