ಚಿತ್ರದುರ್ಗ | ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಿಶಾನಿ ಜಯಣ್ಣ ಅವರಿಗೆ ಸನ್ಮಾನ

1 Min Read

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 29 : ನಗರದ ಯೋಗೀಶ್ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ ಹಾಗೂ ಎಬಿಸಿ ಅನ್ವರ್ ಪಾಶಾ ಗೆಳೆಯರ ಬಳಗದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಚಿತ್ರದುರ್ಗ ಟೌನ್ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಂ. ನಿಶಾನಿ ಜಯಣ್ಣ ಅವರನ್ನು ಸನ್ಮಾನಿಸಲಾಯಿತು.

ಇತ್ತೀಚೆಗೆ ನಡೆದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಎಂ. ನಿಶಾನಿ ಜಯಣ್ಣ ಅವರು ಸತತ ಮೂರನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಟೌನ್ ಕೋಪರೇಟಿವ್ ಸೊಸೈಟಿಯ ಕಛೇರಿಯಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿಶಾನಿ ಜಯಣ್ಣ ಅವರು ಜಿಲ್ಲೆಯ ಜನರ ಹಾಗೂ ಸಹಕಾರ ಕ್ಷೇತ್ರದ ಬಂಧುಗಳ ಸಹಕಾರದಿಂದ ಎಲ್ಲವೂ ಸಾಧ್ಯವಾಗಿದೆ ಎಂದರು. ಶುಭ ಹಾರೈಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎಬಿಸಿ ಬುಕ್ ಹೌಸ್ ಮಾಲೀಕ ಅನ್ವರ್ ಪಾಶಾ, ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ, ಶಿಕ್ಷಕರಾದ ಎಂ ವಿಶ್ವನಾಥ್, ಪಿ.ವೈ ದೇವರಾಜ್ ಪ್ರಸಾದ್, ಉಪನ್ಯಾಸಕ ಶ್ರೀನಿವಾಸ್, ಸಾಂತ್ವನ ಶಂಕರಪ್ಪ, ಓಂಕಾರ ಪ್ರೆಸ್ ರಮೇಶ್, ಓಬಣ್ಣ, ನಿಶಾನಿ ನೀಲಪ್ಪ, ಯಶವಂತ್, ಇರ್ಫಾನ್, ಭರತ್ ಹಾಗೂ ಚಿತ್ರದುರ್ಗ ಟೌನ್ ಕೋಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks