ಚಿತ್ರದುರ್ಗ. ಅ.07: ಚಿತ್ರದುರ್ಗ ಸಿಟಿ ಇನ್ಸ್‍ಟ್ಯೂಟ್ ಆಡಳಿತ ಮಂಡಳಿಯ ಮುಂದಿನ ಐದು (5) ವರ್ಷಗಳ ಅವಧಿಗೆ ಸಾಮಾನ್ಯ ಚುನಾವಣೆಯನ್ನು ನಿಗಧಿಪಡಿಸಬೇಕಾಗಿದ್ದು, ಈ ಚುನಾವಣೆ ಸಂಬಂಧ 2024ರ ಆಗಸ್ಟ್ 31ರ ಅಂತ್ಯಕ್ಕೆ ಇದ್ದಂತೆ ಅರ್ಹ ಹಾಗೂ ಅನರ್ಹ ಸಾಮಾನ್ಯ ಸದಸ್ಯರ ಕರಡುಪಟ್ಟಿ, ಅರ್ಹ ಅಜೀವ ಹಾಗೂ ಅನರ್ಹ ಅಜೀವ ಸದಸ್ಯರ ಕರಡುಪಟ್ಟಿ ಹಾಗೂ ಮತದಾರರ ಪಟ್ಟಿಯನ್ನು ಸಿದ್ದಪಡಿಸುವಾಗ ಪರಿಗಣಿಸದೇ ಇರುವವರ ಪಟ್ಟಿಗಳ ಕರಡು ಮತದಾರರ ಪಟ್ಟಿಗಳನ್ನು ನೋಡಲ್ ಅಧಿಕಾರಿಗಳು ಹಾಗೂ ಚಿತ್ರದುರ್ಗ ಸಹಕಾರ ಸಂಘಗಳ ಉಪನಿಬಂಧಕರು ಸಲ್ಲಿಸಿದ್ದು, ಈ ಕರಡು ಮತದಾರರ ಪಟ್ಟಿಯನ್ನು ಚಿತ್ರದುರ್ಗ ಸಿಟಿ ಇನ್ಸ್‍ಟ್ಯೂಟ್ ಸೂಚನಾ ಫಲಕದಲ್ಲಿ ಅ.07ರಂದು ಪ್ರಕಟಿಸಲಾಗಿದೆ.
ಕರಡು ಮತದಾರರ ಪಟ್ಟಿಗಳಿಗೆ ಆಕ್ಷೇಪಣೆಗಳು ಇದ್ದಲ್ಲಿ, ಆಕ್ಷೇಪಣೆಗಳನ್ನು ಸಮರ್ಥನೀಯ ದಾಖಲೆಗಳೊಂದಿಗೆ ಸಿಟಿ ಇನ್ಸ್ ಟ್ಯೂಟ್ ವ್ಯವಸ್ಥಾಪಕರಿಗೆ ಅಥವಾ ಆಡಳಿತಾಧಿಕಾರಿಗಳಿಗೆ ಲಿಖಿತವಾಗಿ ಇದೇ ಅ.21ರ ಸಂಜೆ 5.30 ರೊಳಗೆ ಸಲ್ಲಿಸುವಂತೆ ಚಿತ್ರದುರ್ಗ ಸಿಟಿ ಇನ್ಸ್‍ಟ್ಯೂಟ್ ಆಡಳಿತಾಧಿಕಾರಿಗಳು ಸೂಚಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










