Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಅಂಬಾ ಭವಾನಿ ದೇವಸ್ಥಾನದಲ್ಲಿ ಜೀಜಾಬಾಯಿ ಜಯಂತಿ ಆಚರಣೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ. 12 : ಕೆಳಗೋಟೆಯಲ್ಲಿರುವ ಅಂಬಾ ಭವಾನಿ ದೇವಸ್ಥಾನದಲ್ಲಿ ಭಾನುವಾರ ಛತ್ರಪತಿ ಶಿವಾಜಿ ಮಹಾರಾಜ್‍ರವರ ತಾಯಿ ಜೀಜಾಬಾಯಿರವರ 427 ನೇ ಜಯಂತಿಯನ್ನು ಆಚರಿಸಲಾಯಿತು.

ಮರಾಠ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಗೋಪಾಲ್‍ರಾವ್ ಜಾಧವ್ ಜೀಜಾಬಾಯಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತ ಜೀಜಾಬಾಯಿ ತನ್ನ ಪುತ್ರ ಶಿವಾಜಿಗೆ ಚಿಕ್ಕಂದಿನಿಂದಲೇ ರಾಮಾಯಣ, ಮಹಾಭಾರತದ ವಿಚಾರಗಳನ್ನು ಪರಿಚಯಿಸಿ ಧೈರ್ಯ, ಆತ್ಮವಿಶ್ವಾಸವನ್ನು ಮೂಡಿಸಿದ್ದರಿಂದ ದೇಶಭಕ್ತಿ ಬೆಳೆಯಿತು.
ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಮೊಘಲರ ಮೇಲೆ ಶಿವಾಜಿ ಯುದ್ದ ನಡೆಸಲು ನೆರವಾಯಿತು ಎಂದು ಸ್ಮರಿಸಿದರು.

ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶ್‍ರಾವ್ ಜಾಧವ್, ಜೀಜಾಮಾತೆ ಮಹಿಳಾ ಮಂಡಳಿ ಅಧ್ಯಕ್ಷೆ ಉಷಭಾಯಿ, ಕಾರ್ಯದರ್ಶಿ ಶಾರದಾಬಾಯಿ, ಮಂಜುನಾಥ್
ಗಾಯಕ್ವಾಡ್, ಲಕ್ಷ್ಮಿರಾವ್‍ಜಾದವ್, ಗಣೇಶ್‍ಕುಮಾರ್ ಜಾಧವ್, ಮೋಹನ್‍ರಾವ ಗಾಟ್ಗೆ, ಹರೀಶ್‍ಜಾದವ್, ಕೃಷ್ಣೋಜಿರಾವ್ ಮೋರೆ, ವಿದ್ಯಾನಂದ ಲಾಡ್, ಚಂದ್ರೋಜಿರಾವ್ ಜಾದವ್, ನಾಗೇಂದ್ರರಾವ್ ಚವ್ಹಾಣ್, ಕಲಾಬಾಯಿ, ಪದ್ಮಬಾಯಿ ಮೋಹಿತೆ, ಶಾರದಾಬಾಯಿ ಜಾದವ್, ವೀಣಜಾದವ್, ಸುಚಿತ್ರಲಾಡ್, ಅಶ್ವಿನಿ ಚವ್ಹಾಣ್, ಸುಜಾತ ಗಾಯಕ್ವಾಡ್, ನಂದಿನಿ ಚವ್ಹಾಣ್ ಇವರುಗಳು ಜಯಂತಿಯಲ್ಲಿ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...