ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 24 : ತಾಲ್ಲೂಕಿನ ಬಚ್ಚಬೋರನಹಟ್ಟಿಯ ಶ್ರೀ ಹೋ.ಚಿ.ಬೋರಯ್ಯ ಸ್ಮಾರಕ ವಸತಿ ಪ್ರೌಢಶಾಲೆಯು 2025-26ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 94.59 ರಷ್ಟು ಫಲಿತಾಂಶ ಲಭಿಸಿದೆ.
ಶಾಲೆಯ ಒಟ್ಟು ಫಲಿತಾಂಶದಲ್ಲಿ ನಾಲ್ವರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ. ಬಿ.ಜೆ.ಮನೋಜ್ ಕುಮಾರ್ 553 ಅಂಕಗಳನ್ನು (ಶೇ. 88.48) ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದರೆ, ಕೆ.ಬಿ. ಚಂದನ 536 ಅಂಕಗಳೊಂದಿಗೆ (ಶೇ. 85.76) ದ್ವಿತೀಯ ಸ್ಥಾನ ಗಳಿಸಿದ್ದಾರೆ. ಎಸ್.ಸಂಧ್ಯಾ 535 ಅಂಕಗಳನ್ನು (ಶೇ. 85.6) ಪಡೆದು ತೃತೀಯ ಸ್ಥಾನ ಹಾಗೂ ಜೆ.ಎನ್. ಸಂಗೀತಾ 525 ಅಂಕಗಳೊಂದಿಗೆ (ಶೇ. 84) ನಾಲ್ಕನೇ ಸ್ಥಾನ ಪಡೆದಿದ್ದಾರೆ. ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಕಾರ್ಯದರ್ಶಿ ಕೆ.ಸಣ್ಣಪಾಲಯ್ಯ, ಮುಖ್ಯ ಶಿಕ್ಷಕ ಸಿ.ಜಯಣ್ಣ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
















