ಸುದ್ದಿಒನ್, ಚಿತ್ರದುರ್ಗ, ಜುಲೈ. 26 : 2025-26ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90 ಹಾಗೂ ಬಿ.ಎ, ಬಿ.ಕಾಂ,ಬಿಸಿಎ, ಬಿಎಸ್‍ಡಬ್ಲ್ಯೂ, ಇಂಜಿನಿಯರಿಂಗ್, ಎಂ.ಬಿ.ಬಿ.ಎಸ್ ಇತರೆ ಪದವಿ ಪರೀಕ್ಷೆಯಲ್ಲಿ ಶೇ.75% ಕ್ಕಿಂತ ಹೆಚ್ಚು ಅಂಕಗಳಿಸಿದ ಮತ್ತು ಪಿಹೆಚ್.ಡಿ ಪದವಿ, ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಯಲ್ಲಿ ಆಯ್ಕೆಯಾದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತರನ್ನು ಅಭಿನಂದಿಸಲು ಚಿತ್ರದುರ್ಗ ನಾಯಕ ಸಮಾಜ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಆಗಸ್ಟ್ 15-08-2026 ರೊಳಗೆ ತಮ್ಮ ಸ್ವ-ವಿವರದ ಅರ್ಜಿಯ ಜೊತೆ ಪೂರಕ ದಾಖಲಾತಿಗಳೊಂದಿಗೆ ಅಂಚೆ ಮೂಲಕ ಅಥವಾ ನೇರವಾಗಿ ಬಿ.ಕಾಂತರಾಜ್ ಅಧ್ಯಕ್ಷರು ಚಿತ್ರದುರ್ಗ ನಾಯಕ ಸಮಾಜ ಚಿತ್ರದುರ್ಗ, ವಿಳಾಸ: ತುರುವನೂರು ರಸ್ತೆ ಶ್ರೀ ಅಹೋಬಲ ಟಿವಿಎಸ್ ಪಕ್ಕದ ಆಫೀಸ್ ಚಿತ್ರದುರ್ಗ, ದೂರವಾಣಿ ಸಂಖ್ಯೆ: 8549992611 ಇಲ್ಲಿಗೆ ಸಲ್ಲಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಡಾ. ಗುಡ್ಡದೇಶ್ವರಪ್ಪ 9448232934, ದರ್ಶನ್ ಇಂಗಳದಾಳ್ : 9880137418 ಇವರಿಗೆ ಸಂಪರ್ಕಿಸಿ ಎಂದು ಚಿತ್ರದುರ್ಗ ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದ್ದಾರೆ.











