Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಪ್ರಸನ್ನ ಗಣಪತಿ ಪೂಜಾ ಮಹೋತ್ಸವದಲ್ಲಿ ರಿಚರ್ಡ್ ಲೂಯಿಸ್ ತಂಡದಿಂದ ನಗೆ ಹಬ್ಬ; ಹಾಸ್ಯದ ಹೊಳೆಯಲ್ಲಿ ತೇಲಾಡಿದ ಜನತೆ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಸೆ. 21 : ನಗರದ ಆನೆ ಬಾಗಿಲ ಬಳಿ ಇರುವ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೆ, 14 ರಿಂದ ನಡೆಯುತ್ತಿರುವ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿವತಿಯ 69ನೇ ವರ್ಷದ ಶ್ರೀ ಪ್ರಸನ್ನ ಗಣಪತಿಯ ಪೂಜಾ ಮಹೋತ್ಸವದ ಅಂಗವಾಗಿ ಸೆ.20ರ ಭಾನುವಾರ ಸಂಜೆ ರಿಚರ್ಡ ಲೂಯಿಸ್ ತಂಡದಿಂದ ನಗೆ ಹಬ್ಬ ಕಾರ್ಯಕ್ರಮವನ್ನು ನಡೆಸಲಾಯಿತು. ಕರತಾಡನ, ನಿರಂತರ ನಗು ಮತ್ತು ಚಪ್ಪಾಳೆಗಳ ಮೂಲಕ ನೆರೆದಿದ್ದ ನೂರಾರು ಪ್ರೇಕ್ಷಕರು ಹಾಸ್ಯದ ಹೊಳೆಯಲ್ಲಿ ತೇಲಾಡಿದರು.

ಹಾಸ್ಯ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ವಿಶಿಷ್ಟ ಶೈಲಿಯ ಭಾಷಣ, ನಗೆ ಚಟಾಕಿ ಮತ್ತು ಚುಟುಕುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ದೈನಂದಿನ ಜೀವನದ ಘಟನೆಗಳು, ಗಂಡ-ಹೆಂಡತಿಯರ ನಡುವಿನ ತಮಾಷೆಯ ಪ್ರಸಂಗಗಳು ಹಾಗೂ ಇಂದಿನ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳನ್ನು ಹಾಸ್ಯಭರಿತವಾಗಿ ವಿಮರ್ಶಿಸಿದ್ದು ಎಲ್ಲರ ಗಮನ ಸೆಳೆಯಿತು. ಕಲಾವಿದರ ಟೈಮಿಂಗ್ ಮತ್ತು ಪಂಚ್ ಡೈಲಾಗ್‍ಗಳಿಗೆ ಸಭಾಂಗಣವೇ ನಗೆಗಡಲಲ್ಲಿ ಮುಳುಗಿತ್ತು.

ಈ ಸಂದರ್ಭದಲ್ಲಿ ಮೈಸೂರು ಆನಂದರವರು 1970ರಿಂದ ಹಿಡಿದರು 2026ರವರೆಗಿನ ಚಲನಚಿತ್ರದ ಹಾಡುಗಳು ಯಾವ ರೀತಿಯಲ್ಲಿ ಇದ್ದವು ಎಂಬುದನ್ನು ಸಂಗೀತ ಹಾಗೂ ನೃತ್ಯದ ಮೂಲಕ ಸಭಿಕರ ಮುಂದೆ ಪ್ರದರ್ಶನ ಮಾಡಿದರು ಇದಕ್ಕೆ ನೆರದಿದ್ದ ಸಭೀಕರನ್ನು ನಗೆಗಡಲಿನಲ್ಲಿ ಮುಳುಗಿಸಿತು. ಇದಾದ ನಂತರ ಕ್ರಿಕೇಟ್ ಕಾಮೆಂಟರಿಯನ್ನು ಯಾರ ಯಾರ ಕೈಯಲ್ಲಿ ಹೇಳಿಸಿದರೆ ಅವರು ಯಾವ ರೀತಿ ಹೇಳುತ್ತಾರೆ ಎಂಬುದನ್ನು ಸಹಾ ಪ್ರದರ್ಶನ ಪಡಿಸಿದರು. ಮೈಸೂರಿನ ಭಾಷೆಯಲ್ಲಿ ಹರಿಕಥೆಯನ್ನು ಹೇಳುವಂತ ಕೀರ್ತನಕಾರರ ಭಾಷೆಯಲ್ಲಿ ಜಾನಪದ ನುಡಿಯಲ್ಲಿ ದೇಶದ ಆಂಗ್ಲ ಭಾಷೆಯಲ್ಲಿ ವಿದೇಶಿಗರ ಆಂಗ್ಲ ಭಾಷೆಯಲ್ಲಿ ಸೇರಿದಂತೆ ವಿವಿಧ ರೀತಿಯ ಭಾಷೆಗಳಲ್ಲಿ ಹೇಳುವುದರ ಮೂಲಕ ನೆರದಿದ್ದ ಸಭೀಕರನ್ನು ನಗಿಸಿದರು.

ರಿಚರ್ಡ ಲೂಯಿಸ್‍ರವರು ನಮ್ಮ ಮಾತೃ ಭಾಷೆಯ ಅಭೀಮಾನ ಯಾವ ರೀತಿಯಲ್ಲಿ ಇರಬೇಕು ಮನೆಯಲ್ಲಿ ನಮ್ಮ ಮಾತೃಭಾಷೆಯನ್ನು ಮಾತನಾಡಬೇಕು ಹೊರಗಡೆಯಲ್ಲಿ ಬೇರೆ ಭಾಷೆಯನ್ನು ಮಾತನಾಡಿದರು ನಡೆಯುತ್ತದೆ, ಈ ಹಿನ್ನಲೆಯಲ್ಲಿ ಮೊದಲು ನಮ್ಮ ಮಾತೃಭಾಷೆಗೆ ಮಾನ್ಯತೆಯನ್ನು ನೀಡುವುದರ ಮೂಲಕ ನಮ್ಮ ಭಾಷೆಯನ್ನು ಬೆಳಸಬೇಕಿದೆ ಎಂದು ತಿಳಿಸಿ, ತಾವು ತೆಲುಗು ಭಾಷೆಯನ್ನು ಕಲಿತ ಬಗ್ಗೆ ಸಭೀಕರಿಗೆ ಹಾಸ್ಯದ ರೀತಿಯಲ್ಲಿ ವರ್ಣಿಸಿದರು. ಕಿಲೋಸ್ಕರ್ ಸತ್ಯರವರು ತಮ್ಮ ಜನ ಮೆಚ್ಚಿದ ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡನ್ನು ಮುಸ್ಲಿಂರ ಭಾಷೆಯಲ್ಲಿ ಹಾಡುವುದರ ಮೂಲಕ ಜನ ಮನ್ನಣೆಯನ್ನು ಗಳಿಸಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಕರ್ನಾಟಕ ಆರ್ಯವೈಶ್ಯ ಸಮುದಾಯದ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ಕೆ.ವಿ. ರಾಂ ಪ್ರಸಾದ್‍ರವರು ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ನಗು ಎಂಬುದು ಸಂಜೀವಿನಿ ಯಾಗಿದೆ. ಇಂತಹ ನಗೆ ಹಬ್ಬಗಳು ಮನುಷ್ಯನ ಮಾನಸಿಕ ಒತ್ತಡವನ್ನು ದೂರ ಮಾಡಿ, ನೆಮ್ಮದಿ ನೀಡುತ್ತವೆ” ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಕೊನೆಯಲ್ಲಿ ಹಾಸ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಕಲಾವಿದರೊಬ್ಬರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬ ಪ್ರೇಕ್ಷಕರೂ ಮುಖದಲ್ಲಿ ಮಂದಹಾಸ ಹೊತ್ತು ನೆಮ್ಮದಿಯಿಂದ ಮನೆಗೆ ಮರಳಿದರು.
ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಜೆ.ಗೋಪಾಲರಾವ್ ಜಾಧª ಅಧ್ಯಕ್ಷರಾದ ಎಲ್.ಎನ್.ರಾಜಕುಮಾರ್, ಉಪಾಧ್ಯಕ್ಷರಾದ ಎ.ಎಸ್.ನಾರಾಯಣರಾವ್, ಕೆ.ವಿ.ಆನಂದ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ನಾಗರಾಜ್ ಬೇದ್ರೇ, ಖಂಜಾಚಿ ಸಿ.ಶ್ಯಾಂ ಪ್ರಸಾದ್ ಸ್ಥಪತಿ, ಸಹ ಕಾರ್ಯದರ್ಶಿ ಡಿ.ಆರ್.ಮಂಜುನಾಥ್, ಸಹ ಕಾರ್ಯದರ್ಶಿ ಎನ್.ವಿ.ರಮೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಜೆ.ಎನ್.ಶಂಭು, ನಿರ್ದೇಶಕರುಗಳಾದ ಜಿ.ಟಿ.ಗೋಪಾಲಕೃಷ್ಣ ಜಾಧವ್, ಗಜೇಂದ್ರ, ಸಿದ್ದಲಿಂಗೇಶ್ ಜಿ.ಕೆ. ಟಿ.ಯಶವಂತಕುಮಾರ್, ಕಾರ್ತಿಕ್ ಕಠಾರೆ, ವಿದ್ಯಾನಂದ ಲಾಡ್, ಕೃಷ್ಣಜಿರಾವ್ ಮೋರೆ, ಉತ್ಸವ ಸಮಿತಿ ಸದಸ್ಯರಾದ ಎ.ಟಿ.ರಮೇಶ್ ಹಾಗೂ ನಾಗವೀವೇಕ್ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಚಿತ್ರದುರ್ಗ: ಗಣಪತಿ ಮಹೋತ್ಸವದಲ್ಲಿಮಳೆಗಾಗಿ ವಿಶೇಷ ಪೂಜೆ; ಮಾಳಪ್ಪನಹಟ್ಟಿಯ ‘ಭಜರಂಗಿ ಬಾಯ್ಸ್’ ಯುವಕರ ಮಾದರಿ ಕಾರ್ಯ

ಭ್ರಷ್ಟಾಚಾರ ಮಟ್ಟಹಾಕಲು ರಾಜ್ಯದ ಪ್ರತಿ ಜಿಲ್ಲೆ, ತಾಲೂಕು ಮಟ್ಟದಲ್ಲೂ ಘಟಕ: ಕುಣಿಗಲ್ ರಮೇಶ್ ಘೋಷಣೆ

ಹೊಳಲ್ಕೆರೆ ಕ್ಷೇತ್ರದಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪ: ಡಿಸಿಗೆ ವಿವರ ಕೋರಿ ಮನವಿ : ಮಾಜಿ ಸಚಿವ ಎಚ್. ಆಂಜನೇಯ

ದಾವಣಗೆರೆ: ಮತದಾರರ ಪಟ್ಟಿ ಪರಿಷ್ಕರಣೆ ಚುರುಕು; 7,086 ಮತದಾರರಿಗೆ ನೋಟಿಸ್, ಶೇ.50ರಷ್ಟು ವಿಚಾರಣೆ ಪೂರ್ಣ

ಟೈಕ್ವಾಂಡೋ ಸ್ಪರ್ಧೆಯಲ್ಲಿ ವಿದ್ಯಾ ವಿಕಾಸ ಅಕಾಡೆಮಿ ವಿದ್ಯಾರ್ಥಿನಿಯರ ಮಿಂಚು : ಚಿನ್ನ ಗೆದ್ದು ರಾಜ್ಯ ಮಟ್ಟಕ್ಕೆ ಹಾಸಿನಿ ಗರಪಟ್ಟಿ ಎ, ಸಾನ್ವಿ ಆಯ್ಕೆ

ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಹೆಚ್.ಕೆ. ಪಾಟೀಲ್ ಖಡಕ್ ಎಚ್ಚರಿಕೆ