Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಹೆಚ್.ಕೆ. ಪಾಟೀಲ್ ಖಡಕ್ ಎಚ್ಚರಿಕೆ

---Advertisement---

ಗದಗ.ಸೆಪ್ಟೆಂಬರ್. 21: ಗದಗ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸದಿದ್ದರೆ ರೈತರ ಹಿತಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹಿರಿಯ ಶಾಸಕ ಹೆಚ್.ಕೆ. ಪಾಟೀಲ್ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ತಾಲೂಕಿನ ಮುಳಗುಂದ ಪಟ್ಟಣದಲ್ಲಿ ರೈತ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಧರಣಿನಿರತ ರೈತರ ಅಹವಾಲುಗಳನ್ನು ಆಲಿಸಿ ಸಂಪೂರ್ಣ ಬೆಂಬಲ ಸೂಚಿಸಿದರು.

ಬಳಿಕ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹೆಚ್.ಕೆ. ಪಾಟೀಲ್, ಬರಗಾಲದಿಂದಾಗಿ ಬೆಳೆ ಕಳೆದುಕೊಂಡು ಬದುಕಿನ ಆಧಾರವನ್ನೇ ಕಳೆದುಕೊಳ್ಳುವ ಆತಂಕದಲ್ಲಿರುವ ಅನ್ನದಾತರ ನೋವು ಕರುಳು ಕಿವುಚುವಂತಿದೆ. ರೈತರ ಕಣ್ಣೀರಿನ ಹಿಂದೆ ಇರುವ ನೋವು ಕೇವಲ ಅವರೊಬ್ಬರದ್ದಲ್ಲ, ಅದು ಇಡೀ ಗದಗ ತಾಲೂಕಿನ ನೋವು. ರೈತರ ಈ ನ್ಯಾಯಯುತ ಹೋರಾಟಕ್ಕೆ ನನ್ನ ಪೂರ್ಣ ಬೆಂಬಲವಿದೆ” ಎಂದರು.

ತಾಲೂಕನ್ನು ತಕ್ಷಣ ಬರಪೀಡಿತವೆಂದು ಘೋಷಿಸಿ ಸಂಕಷ್ಟದಲ್ಲಿರುವ ರೈತರಿಗೆ ಅಗತ್ಯ ನೆರವು ಮತ್ತು ಪರಿಹಾರ ಒದಗಿಸುವಂತೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದ ಅವರು, ಒಂದು ವೇಳೆ ರೈತರ ಈ ನ್ಯಾಯಯುತ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ, ಕೇವಲ ಧ್ವನಿ ಎತ್ತುವುದಷ್ಟೇ ಅಲ್ಲ, ರೈತರ ಪರವಾಗಿ ನನ್ನ ಶಾಸಕ ಸ್ಥಾನವನ್ನೇ ತ್ಯಜಿಸಲು ಸಿದ್ಧನಿದ್ದೇನೆ. ರೈತರ ಸಂಕಷ್ಟ ಮತ್ತು ನೋವಿನ ಮುಂದೆ ನನಗೆ ಅಧಿಕಾರ ದೊಡ್ಡದಲ್ಲ; ಅನ್ನದಾತರ ಹಿತವೇ ನನ್ನ ಮೊದಲ ಆದ್ಯತೆ,” ಎಂದು ಸ್ಪಷ್ಟಪಡಿಸಿದರು.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ