Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಎಸ್‌.ಆರ್‌.ಎಸ್‌. ಕಾಲೇಜಿನಲ್ಲಿ ಸಂಭ್ರಮದ 78ನೇ ಸ್ವಾತಂತ್ರ್ಯ ದಿನಾಚರಣೆ

---Advertisement---

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್‌ 15 : ಇಂದು ಪ್ರತಿಯೊಬ್ಬ ಭಾರತೀಯನ ಸಂತೋಷದ ಸುದಿನ.  ಏಕೆಂದರೆ ನಾವು ಬ್ರಿಟೀಷರ ಗುಲಾಮಗಿರಿಯಿಂದ ಮುಕ್ತವಾಗದೆ ಹೋಗಿದ್ದರೆ ಸ್ವಾತಂತ್ರ್ಯದ ಜೀವನವನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಆರ್‌ ಎಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ರವಿ ಟಿ.ಎಸ್‌. ಹೇಳಿದರು.

ಅವರು ನಗರದ ಎಸ್‌ ಆರ್‌ ಎಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ 78ನೇ ಸ್ವಾತಂತ್ರ್ಯ  ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

ಮಕ್ಕಳೆ ನಿಮ್ಮನ್ನೆಲ್ಲ ನೋಡುತ್ತಿದ್ದರೆ ಒಬ್ಬೊಬ್ಬ  ಸ್ವಾತಂತ್ರ್ಯ ಹೋರಾಟಗಾರರು ಕಣ್ಮುಂದೆ ಬರುತ್ತಾರೆ. ಆ ರೀತಿ ಕಾಣಿಸುತ್ತಿದ್ದೀರಿ. ಇಂದು ಧ್ವಜಾರೋಹಣ ಸಂದರ್ಭದಲ್ಲಿ ತುಂಬಾ ಶಿಸ್ತು, ಬದ್ಧತೆಯಿಂದ ನಡೆಸಿಕೊಟ್ಟ ಪಥಸಂಚಲನವನ್ನು ನೋಡಿದಾಗ,  ಹಿಂದೆ ಬ್ರಿಟೀಷರ ವಿರುದ್ಧವಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಇದೇ ರೀತಿ ವಿವಿಧ ಘೋಷಣೆಗಳೊಂದಿಗೆ ಚಳವಳಿಗಳಲ್ಲಿ ಭಾಗವಹಿಸಿದ್ದು ನೆನಪಿಗೆ ಬರುತ್ತದೆ.  ಭವಿಷ್ಯ  ಇದನ್ನು ಗಮನದಲ್ಲಿಟ್ಟುಕೊಂಡು “ಮಕ್ಕಳು ಈ ದೇಶದ ಸಂಪತ್ತು” ಎಂದು ಗಾಂಧೀಜಿಯವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ತಂಬಾಕು, ಮಾದಕ ವಸ್ತುಗಳು ಹಾಗೂ ಕುಡಿತದಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ತುಂಬಾ ಬೇಸರದ ಸಂಗತಿ.  ಇವಗಳಿಗೆ ಬಲಿಯಾಗದೆ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.  ಈ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮೊಳಗೆ ಸಂಕಲ್ಪ ಮಾಡಿಕೊಳ್ಳೋಣ ಎಂದರು.

ಸ್ವಾತಂತ್ರ್ಯ  – ಸುಭದ್ರ – ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಮನುಷ್ಯ ಮನುಷ್ಯರ ಮಧ್ಯೆ ಪ್ರೀತಿ, ಸಹಬಾಳ್ವೆ, ಸಹಬಾಂಧವ್ಯ  ನೆಲಸಿ ಈ ಭರತ ಭೂಮಿ ಶಾಶ್ವತವಾಗಿ ಪೂಣ್ಯಭೂಮಿಯಾಗಿಯೇ ಉಳಿಯಬೇಕು.  ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿ ಬುದುಕುತ್ತಿರುವ ನಾವುಗಳು ನಿಜಕ್ಕೂ ಭಾಗ್ಯವಂತರು.  ಈ ನಿಟ್ಟಿನಲ್ಲಿ ನಾವೆಲ್ಲರು ನಮ್ಮೊಳಗೆ ಸಂಕಲ್ಪ ಮಾಡಿಕೊಳ್ಳೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿದ್ದ  ಲೇಖಕರು ಹಾಗೂ ಸಂವೇದನಾ ಫೌಂಡೇಶನ್‌ ಸಂಸ್ಥೆಯ ಸಂಸ್ಥಾಪಕರು ಆಗಿರುವ ಪ್ರಕಾಶ್‌ ಮಲ್ವೆ, ಅವರು ಮಾತನಾಡಿ, ವೈಜ್ಞಾನಿಕವಾಗಿ ಮುಂದುವರಿದ ಜಗತ್ತಿನ ಯಾವ ರಾಷ್ತ್ರದಲ್ಲೂ ಭಾರತದೇಶದಂತಹ ವೈಭವಿವಲ್ಲ, ವಿದ್ಯಾರ್ಥಿಗಳೆ ಪ್ರಶ್ನಿಸದೆ ಏನನ್ನು ಒಪ್ಪಿಕೊಳ್ಳಬೇಡಿ.  ಇತಿಹಾಸವನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡುವ ಮೂಲಕ ಈ ದೇಶದ ಶ್ರೀಮಂತಿಕೆಯನ್ನು ತಿಳಿದುಕೊಳ್ಳಬೇಕು.  ಜಗತ್ತಿಗೆ ಜ್ಞಾನವನ್ನು ಕಲಿಸಿದವರು ಭಾರತಿಯರು. ನಮ್ಮ ಭಾ಼ಷೆ ಒಂದು ಭಾಷೆ ಮಾತ್ರವಲ್ಲ, ಅದು ಸಂಸ್ಕಾರವನ್ನು ಕಲಿಸುವ ಸಂಪತ್ತು ಎಂದರು.

ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಪ್ರಾಂಶುಪಾಲರುಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment