Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | 150 ಕ್ವಿಂಟಲ್ ಅನ್ನ ಭಾಗ್ಯ ಅಕ್ಕಿವಶ: ಪ್ರಕರಣ ದಾಖಲು

---Advertisement---

ಚಿತ್ರದುರ್ಗ. ಮಾರ್ಚ್.25: ಅನಧಿಕೃತವಾಗಿ ಸಾಗಟ ಮಾಡುತ್ತಿದ್ದ 150 ಕ್ವಿಂಟಲ್ ಅನ್ನಭಾಗ್ಯ ಅಕ್ಕಿಯನ್ನು ಹೊಳಲ್ಕೆರೆ ಮಲಾಡಿಹಳ್ಳಿ ಬಳಿ ಶನಿವಾರ ವಶ ಪಡೆಯಲಾಗಿದೆ.

ಕೆ.ಎ.17 ಎ.ಎ.2952 ಲಾರಿಯಲ್ಲಿ ಶಿವಮೊಗ್ಗ ರಸ್ತೆಯಿಂದ ಅಕ್ರಮವಾಗಿ ಸಾರ್ವಜನಿಕ ಪಡಿತರ ವಿತರಣೆಯಲ್ಲಿ ನೀಡುವ ಅನ್ನಭಾಗ್ಯ ಅಕ್ಕಿ ಸಾಗಣಿಕೆ ಮಾಡಲಾಗುತ್ತದೆ ಎಂಬ ಮಾಹಿತಿ ಆಧರಿಸಿ, ಹೊಳಲ್ಕೆರೆ ಪೊಲೀಸ್ ಉಪನಿರೀಕ್ಷ ಸುರೇಶ್ ಹಾಗೂ ಅವರ ತಂಡ ಲಾರಿ ಮತ್ತು 150 ಕ್ವಿಂಟಲ್ ಅಕ್ಕಿ ವಶಪಡೆದಿದೆ.

ಹೊಳಲ್ಕೆರೆ ತಹಶೀಲ್ದಾರ್ ಫಾತೀಮಾ ಬಿಬಿ ಅವರ ನಿರ್ದೇಶನದ ಅನುಸಾರ ಆಹಾರ ಶಿರಸ್ತೇದಾರ್ ಲಿಂಗರಾಜು ಸ್ಥಳಕ್ಕೆ ಭೇಟಿ ನೀಡಿ ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ ಕಲಂ‌ 3 ಮತ್ತು ಚುನಾವಣೆ ಅಕ್ರಮಗಳ ತಡೆಗಟ್ಟುವ ಕಾಯ್ದೆ ಕಲಂ 7 ಅಡಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ಮುಂದುವರೆದಿದೆ. ಕೆ.ಎ.17 ಎ.ಎ.2952 ಲಾರಿ ಚಾಲಕ ಅಕ್ಕಿಯನ್ನು ಚನ್ನಗಿರಿ ತಾಲ್ಲೂಕಿನಿಂದ ಬೆಂಗಳೂರು ಹಾಗೂ ಮಂಡ್ಯ ನಗರಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ತನಿಖೆಯಲ್ಲಿ ತಿಳಿಸಿದ್ದಾನೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment