Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಿರುಪತಿ ಬೆಟ್ಟ ಹತ್ತುವಾಗ ಚಿರತೆ ದಾಳಿಗೆ ಮಗು ಸಾವು : ಸಿಸಿಟಿವಿಯಲ್ಲಿ ಸೆರೆ..

---Advertisement---

 

ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ದೇವರು ಎಂದರೆ ಅದು ತಿರುಪತಿ‌ ತಿಮ್ಮಪ್ಪ. ದೇಶದ ನಾನಾ ಭಾಗಗಳಿಂದ ತಿರುಪತಿ ತಿಮ್ಮಪ್ಪನಿಗೆ ಭಕ್ತರಿದ್ದಾರೆ. ದೇವಸ್ಥಾನಕ್ಕೆ‌ ಕೆಲವರು ಬೆಟ್ಟದ ಮೇಲಕ್ಕೆ ಗಾಡಿಯಲ್ಲಿ ಹೋದರೆ, ಇನ್ನು ಕೆಲ ಭಕ್ತರು ಬೆಟ್ಟ ಹತ್ತಿಕೊಂಡು ಹೋಗುತ್ತಾರೆ. ಆದ್ರೆ ಹೀಗೆ ಬೆಟ್ಟ ಹತ್ತುವಾಗ ಚಿರತೆಯ‌ ಬಗ್ಗೆ ಕೊಂಚ ಗಮನವಿರಲಿ.

ಪಾದಚಾರಿ‌ ಮಾರ್ಗದಲ್ಲಿ ತೆರಳುವಾಗ ಚಿರತೆಯೊಂದು‌ ಬಾಲಕಿಯನ್ನು ಹೊತ್ತುಕೊಂಡು ಹೋಗಿದೆ. ತನ್ಮ ಮನೆಯವರ ಜೊತೆಗೆ ಲಕ್ಷಿತಾ ಎಂಬ ಆರು ವರ್ಷದ ಪುಟ್ಟ ಬಾಲಕಿ ಕೂಡ ಬೆಟ್ಟ ಹತ್ತುತ್ತಿದ್ದಳು. ಆದ್ರೆ ಈ ವೇಳೆ‌ಮಾರ್ಗ ಮಧ್ಯದಲ್ಲಿಯೇ ಬಾಲಕಿ ನಾಪತ್ತೆಯಾಗಿದ್ದಾಳೆ. ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

https://www.youtube.com/live/_aYSZ30whzU?feature=share

ದೂರು ದಾಖಲಿಸಿಕೊಂಡ ಪೊಲೀಸರು ಅಲ್ಲಿನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಸತ್ಯ ಗೊತ್ತಾಗಿದೆ. ಚಿರತೆಯೊಂದು ಮಗುವನ್ನು ಹೊತ್ತುಕೊಂಡ ಹೋದ ದೃಶ್ಯ ಸೆರೆಯಾಗಿದೆ. ಸದ್ಯ ಪೊಲೀಸರು ನಾಪತ್ತೆಯಾದ ಕಾಡಲ್ಲೆಲ್ಲಾ ಹುಡುಕಾಟ ನಡೆಸಿದಾಗ, ಮಗುವಿನ ಮೃತದೇಹ‌ ಸಿಕ್ಕಿದೆ. ಚಿರತೆಯ ದಾಳಿಗೆ ಲಕ್ಷಿತಾಳ ಪ್ರಾಣವೇ ಹೋಗಿದೆ. ತಿರುಪತಿಯಲ್ಲಿಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಾದಯಾತ್ರೆಯ ಮೂಲಕ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದರಿಂದ ಒಳ್ಳೆಯದ್ದಾಗುತ್ತದೆ, ಪುಣ್ಯ ಸಿಗುತ್ತದೆ ಎಂದು ನಂಬಿ, ತಿಮ್ಮಪ್ಪನ ಮೇಲೆ ಭಾರ ಹಾಕಿ ಹೊರಟ ಭಕ್ತರಿಗೆ, ಯಾವತ್ತಿಗೂ ಅರಗಿಸಿಕೊಳ್ಳಲಾಗದ ನೋವು ಸಿಕ್ಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...