ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಅಡಿಯಲ್ಲಿ ಬದ್ದತೆ ಮೆರೆಯಬೇಕಿದೆ : ಮಾದಾರ ಚೆನ್ನಯ್ಯ ಶ್ರೀ

1 Min Read

 

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 13  : ಒಳ ಮೀಸಲಾತಿ ಹೋರಾಟಕ್ಕೆ ಮೂರು ದಶಕಗಳ ಹೋರಾಟದ ಹಿನ್ನೆಲೆ ಇದೆ ಮಾದಾರ ಚೆನ್ನಯ್ಯ ಗುರೂಜಿ ತಿಳಿಸಿದರು.

ನಗರದ ಮಾದಾರ ಚೆನ್ನಯ್ಯ ಗುರುಪೀಠದದಲ್ಲಿ ಒಳ ಮೀಸಲಾತಿ ವಿಚಾರಕ್ಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಮಾದಿಗ ಸಮಾಜದ ಒಳ ಮೀಸಲಾತಿ ಹೋರಾಟಕ್ಕೆ 3 ದಶಕದ ಹೋರಾಟದ ಹಿನ್ನೆಲೆ ಇದ್ದು, ಜನಾಂದೋಲನ ಹೋರಾಟ, ಆಡಳಿತಾತ್ಮಕ ಸಂಘರ್ಷ, ಕಾನೂನಾತ್ಮಕ ಹೋರಾಟ ಮಾಡಿದ್ದೇವೆ. ಮಾದಾರ ಚೆನ್ನಯ್ಯ ಗುರುಪೀಠ ಎಲ್ಲಾ ಹೋರಾಟದಲ್ಲೂ ಜೊತೆಗೆ ಕಾರ್ಯ ನಿರ್ವಹಿಸಿದೆ.
ನಮ್ಮ ಸಮಾಜದ ಹಲವು ನಾಯಕರು ಹೋರಾಟದಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ನಲ್ಲಿ ಅಂತಿಮ ನಿರ್ಣಯ ಕೈಕೊಳ್ಳಲು ರಾಜ್ಯ ಸರ್ಕಾರಕ್ಕೆ ತೀರ್ಪು ನೀಡಿದೆ. ಒಳ ಮೀಸಲಾತಿ ರಾಜ್ಯ ಸರ್ಕಾರಗಳೇ ಜಾರಿ ಮಾಡಬೇಕು ಎಂದಿದೆ. ಪರಿಶಿಷ್ಟ ವರ್ಗಗಳ ಒಳ ಮೀಸಲಾತಿಯೂ ಕೂಡಾ ಈ ತೀರ್ಪು ಇದೆ ಎಂದರು.

 

ಕೆನೆ ಪದರದ ವಿಷಯ ಸುಪ್ರೀಂ ಕೋರ್ಟಿನಲ್ಲಿ ಅಭಿಪ್ರಾಯ ಅಷ್ಟೇ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಾ ಕೆನೆಪದರ ಎಂಬ ಪದ ಬಳಕೆ ಮಾಡಿದ್ದಾರೆ. ಕೇಂದ್ರ ಸರ್ಕಾರವೇ ಜಾರಿ ಮಾಡಬೇಕು ಎಂದಿದ್ದಾರೆ. ಕೆನೆಪದರ ನಮ್ಮ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರದ ಕ್ಯಾಬಿನೆಟ್ ನಲ್ಲಿ ತೀರ್ಮಾನ ಆಗಿದೆ.ಖರ್ಗೆ ಅವರು ಸುಪ್ರೀಂ ಕೋರ್ಟ್ ತೀರ್ಪು ಇಲ್ಲಿವರೆಗೂ ಸ್ವಾಗತಿಸಿಲ್ಲ. ಯಾವುದೇ ಗೊಂದಲ ಮಾಡದೇ 101 ಸಮುದಾಯಗಳ ಅನುಕೂಲ ಆಗಬೇಕು. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಸುಪ್ರೀಂ ಕೋರ್ಟ್ ತೀರ್ಪಿಗೆ ಬೆಂಬಲ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಅಡಿಯಲ್ಲಿ ಬದ್ದತೆ ಮೆರೆಯಬೇಕಿದೆ. ಸಿಎಂ ಸಿದ್ದರಾಮಯ್ಯ ಅವರು ಸಂಪುಟದ ಸಚಿವರ ಜೊತೆ ಚರ್ಚಿಸಿ ಬೇಗ ಒಳ ಮೀಸಲಾತಿ ಜಾರಿ ಮಾಡಬೇಕು. ಲೋಕ ಸೇವಾ ಆಯೋಗ ಸೇರಿ ಹಲವು ನೇಮಕಾತಿ ತಡೆ ಹಿಡಿಯಬೇಕು ಎಂಬ ಒತ್ತಾಯವಿದೆ. ಸಿಎಂ ಸಿದ್ದರಾಮಯ್ಯ ಅವರನ್ನ ಮುಂದಿನ ದಿನಗಳಲ್ಲಿ ಭೇಟಿ ಮಾಡುತ್ತೇವೆ ಎಂದು ಶ್ರೀಗಳು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *