Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಳ್ಳಕೆರೆ | ತಾಲೂಕಿನ ವಿವಿಧ ಕಾಲೇಜುಗಳ ಒಕ್ಕೂಟದ ಫುಟ್ಬಾಲ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ,ಅಕ್ಟೋಬರ್.18 :  ತಾಲೂಕಿನ ವಿವಿಧ ಕಾಲೇಜುಗಳ ಒಕ್ಕೂಟದ ವಿದ್ಯಾರ್ಥಿನಿಯರ ತಂಡ ಫುಟ್ಬಾಲ್ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಇಂದು ನಡೆಯಲಿರುವ ರಾಜ್ಯಮಟ್ಟದ ಫುಟ್ಬಾಲ್ ಕ್ರೀಡೆ ಆಡಲು ಬಾಗಲಕೋಟೆ ಜಿಲ್ಲೆಗೆ ಮಂಗಳವಾರ ಪ್ರಯಾಣ ಬೆಳೆಸಿತು.

ಈ ವೇಳೆ ಮಾತನಾಡಿದ ತಂಡದ ವ್ಯವಸ್ಥಾಪ  ಟಿ.ಅಬ್ದಲ್ ವಾಹಿದ್  ತಾಲೂಕಿನ ವಿವಿಧ ಕಾಲೇಜುಗಳ ಒಕ್ಕೂಟದ ಬಾಲಕ ಹಾಗೂ ಬಾಲಕಿಯರ ಫುಟ್ಬಾಲ್ ತಂಡದ ವಿದ್ಯಾರ್ಥಿಗಳು ತಾಲೂಕು ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಈಗ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈಗಾಗಲೇ ಸ್ಪರ್ಧಾರ್ಥಿಗಳಿಗೆ ಸೂಕ್ತ ತರಬೇತಿಯನ್ನು ನೀಡಿದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗುವ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ ಉತ್ತಮ ಹೆಸರನ್ನು ತರುವ ಉತ್ಸಾಹದಲ್ಲಿದ್ದಾರೆ. ಅಕ್ಟೋಬರ್ 17 ರಂದು ಚಳ್ಳಕೆರೆ ನಗರದಿಂದ ಬಾಗಲಕೋಟೆಗೆ ಕ್ರೀಡೆಗೆ  ಹೊರಟಿದ್ದೇವೆ. ಸೂಕ್ತ ಭದ್ರತೆ ಹಾಗೂ ಸೂಕ್ತ ವ್ಯವಸ್ಥೆಗಳೊಂದಿಗೆ ವಿದ್ಯಾರ್ಥಿನಿಯರನ್ನು ಜವಾಬ್ದಾರಿತವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಎಸ್. ಆರ್. ಎಸ್. ಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯವಾಗುತ್ತದೆ. ಈಗಾಗಲೇ ನಮ್ಮ ತಂಡ ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಈ ಯಶಸ್ಸಿಗೆ ಪೋಷಕರು ಹಾಗೂ ಶಾಲೆಯ ಶಿಕ್ಷಕರಿಂದ ಮತ್ತು ತರಬೇತುದಾರರ ಎಲ್ಲರ ಮಾರ್ಗದರ್ಶನ ಮತ್ತು ಸಹಕಾರದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಲು ಸಾಧ್ಯವಾಗಿದೆ. ನಮ್ಮ ತಂಡದ ಎಲ್ಲಾ ಸದಸ್ಯರು ಈಗಾಗಲೇ ಫುಟ್ ಬಾಲ್ ಕ್ರೀಡೆಯಲ್ಲಿ ಪೂರ್ವಭ್ಯಾಸ ಮಾಡಿ ತಯಾರಿ ಮಾಡಿಕೊಂಡಿದ್ದು ರಾಜ್ಯಮಟ್ಟದಲ್ಲಿ ಜಯಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಬೆಳಗೆರೆ ಬಿ. ಸೀತಾರಾಮ ಶಾಸ್ತ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸ್ನೇಹ ಮಾತನಾಡಿ ಪಾಠದಷ್ಟೇ ಕ್ರೀಡೆಗಳು ಮಹತ್ವ ನೀಡುತ್ತಿರುವುದು ಸಂತಸದ ವಿಚಾರ ಈ ಕ್ರೀಡೆಗೆ ಸಹಕಾರ ನೀಡಿದಂತಹ ಕಾಲೇಜಿನ ಪ್ರಾಚಾರ್ಯರಿಗೂ ಉಪನ್ಯಾಸಕರಿಗೂ ಎಲ್ಲರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ರಾಜ್ಯಮಟ್ಟದಲ್ಲೂ ಜಯಶೀಲರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುತ್ತೇನೆ ಎಂಬ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಕಾಲೇಜಿನ ಕ್ರೀಡಾಪಟು ವಿದ್ಯಾರ್ಥಿನಿಯರಾದ, ಮಹಾಲಕ್ಷ್ಮಿ , ಸ್ನೇಹ, ಅಮೂಲ್ಯ, ಸಂಗೀತ, ವಾಣಿಶ್ರೀ, ಪಲ್ಲವಿ, ಯಶಸ್ವಿನಿ ಅಕ್ಷಿತಾ ಸುಪ್ರೀತಾ ಸೇರಿದಂತೆ ಕ್ರೀಡಾಪಟುಗಳು ಇದ್ದರು

ಈ ಸಂದರ್ಭದಲ್ಲಿ ಕ್ರೀಡಾಪಟುಗಳು ಹಾಗೂ ಶಾಲೆಗಳ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ಚು ನೀರು ಕುಡಿಯುವುದು ಅಪಾಯಕಾರಿಯೇ ?

ಸುದ್ದಿಒನ್ : ಬೇಸಿಗೆಯಲ್ಲಿ ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಅದಕ್ಕಾಗಿಯೇ ವೈದ್ಯರು ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಲು ಹೇಳುತ್ತಾರೆ. ಹೆಚ್ಚು ನೀರು ಇರುವ ಹಣ್ಣುಗಳು ಮತ್ತು ಆಹಾರಗಳನ್ನು

ಈ ರಾಶಿಯವರು ಆಹಾರ ಪದಾರ್ಥ ಮನೆಯಲ್ಲೇ ತಯಾರಿಸಿ ಮಾರಾಟ ಮಾಡಿ ಉತ್ತಮ ಹಣ ಗಳಿಕೆ ಮಾಡುವಿರಿ

ಈ ರಾಶಿಯವರು ಆಹಾರ ಪದಾರ್ಥ ಮನೆಯಲ್ಲೇ ತಯಾರಿಸಿ ಮಾರಾಟ ಮಾಡಿ ಉತ್ತಮ ಹಣ ಗಳಿಕೆ ಮಾಡುವಿರಿ, ಬುಧವಾರ ರಾಶಿ ಭವಿಷ್ಯ -ಮೇ-1,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

ಅಂದು ಟೀಂ ಇಂಡಿಯಾದ ಉಪನಾಯಕನಾಗಿದ್ದ ಕೆ ಎಲ್ ರಾಹುಲ್ ಈ ಬಾರಿ ತಂಡದಿಂದಾನೇ ಔಟ್..!

ಟ20 ವೇಳೆ ಶ್ವಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿದ್ದಿ, ಕನ್ನಡಿಗ ಕೆ ಎಲ್ ರಾಹುಲ್ ಗೆ ಸ್ಥಾನವನ್ನೇ ನೀಡಿಲ್ಲ. ತಂಡಿದಿಂದ ಹೊರಗೆ ಉಳಿದಿದ್ದಾರೆ. ಈ ಬಾರಿಯ ಐಪಿಎಲ್ ಮ್ಯಾಚ್ ನೆಲ್ಲಾ ಯಾರೆಲ್ಲಾ ಉತ್ತಮ ಪ್ರದರ್ಶ‌

error: Content is protected !!