Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಂದೆಯನ್ನೇ ಕೊಲೆ ಮಾಡಿಸಲು ಹೊರಟ್ರಾ ಚೈತ್ರಾ ಕುಂದಾಪುರ..?

---Advertisement---

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಹಾಗೂ ಆಕೆಯ ತಂದೆಯ ವಿಚಾರ ಇನ್ನು ಮುಗಿಯುವಂತೆ ಕಾಣಿಸುತ್ತಿಲ್ಲ. ಮದುವೆಗೆ ಕರೆದಿಲ್ಲ. ತಂದೆ ಎಂಬ ಗೌರವ ಇಲ್ಲ. ಮೋಸಗಾತಿ. ಆಕೆಯ ಗಂಡನು ಮೋಸಗಾರ ಎಂದೆಲ್ಲಾ ಆರೋಪ ಮಾಡಿದ್ದಂತ ಬಾಲಕೃಷ್ಣ ನಾಯ್ಕ್ ಇದೀಗ ನನ್ನ ಕೊಲೆ ಮಾಡಲು ಯತ್ನಿಸಿದ್ದಾಳೆ ಎಂದು ಆರೋಪಿಸಿ, ದೂರು ದಾಖಲಿಸಿದ್ದಾರೆ.

ಹಿಂದೆ ಹಲವು ರೀತಿಯ ಆರೋಪಗಳನ್ನು ಮಾಡಿದ್ದ ಚೈತ್ರಾ ತಂದೆ, ಇದೀಗ ಜೀವ ಬೆದರಿಕೆ ಹಾಕಿದ ಆರೋಪ ಮಾಡಿದ್ದಾರೆ. ನನ್ನ ಜೀವ ತೆಗೆಯಲು ಚೈತ್ರಾ ಕುಂದಾಪುರ ಸುಪಾರಿ ನೀಡಿದ್ದಾರೆ. ನನ್ನ ಆಸ್ತಿ ಹಾಗೂ ಭೂಮಿಗಾಗಿ ನನ್ನನ್ನ ಬಲಿ ಪಡೆಯಬಹುದು. ಭೂಗತ ದೊರೆಗಳ ಮೂಲಕ ಜೀವ ತೆಗೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಆಸ್ತಿಗಾಗಿ ಹೇಯ ಕೃತ್ಯವನ್ನು ಮಾಡಬಹುದು ಎಂದು ದೂರು ನೀಡಿದ್ದಾರೆ.

ಇನ್ನು ಚೈತ್ರಾ ಕುಂದಾಪುರ ಇದಕ್ಕೆಲ್ಲ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಈಗಷ್ಟೇ ಮದುವೆಯಾಗಿರುವ ಚೈತ್ರಾ ಕುಂದಾಪುರ ಗಂಡನ ಮನೆಯಲ್ಲಿ ಹಲವು ವಿಡಿಯೋಗಳನ್ನ ಮಾಡುತ್ತಾ ಆರಾಮವಾಗಿದ್ದಾರೆ. ಹೊಸದಾಗಿ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು, ಹೊಸತರದ ವಿಡಿಯೋಗಳನ್ನ ಹಾಕುತ್ತಾ ಇದ್ದಾರೆ. ಅಡುಗೆ ವಿಡಿಯೋಗಳು, ಗಂಡ ಹೆಂಡತಿಯ ಅನ್ಯೋನ್ಯತೆಯ ಬಗ್ಗೆಯೂ ವಿಡಿಯೋಗಳನ್ನ ಹಂಚಿಕೊಳ್ಳುತ್ತಾ ಇರುತ್ತಾರೆ. ಹಲವು ವರ್ಷಗಳಿಂದ ಪ್ರೀತಿಸಿದ್ದ ಶ್ರೀಕಾಂತ್ ಕಶ್ಯಪ್ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ತಂದೆ ಮಾಡುತ್ತಿರುವ ಆರೋಪಗಳಿಗೆ ಚೈತ್ರಾ ಈ ಹಿಂದೆಯೂ ತಿರುಗೇಟು ನೀಡಿದ್ದು, ಕುಡುಕ ತಂದೆ, ಮಕ್ಕಳಿಗೆ ಏನು ಮಾಡಿಲ್ಲ ಎಂಬ ಬೇಸರದ ನುಡಿಯನ್ನ ವ್ಯಕ್ತಪಡಿಸಿದ್ದರು. ಅವರ ತಾಯಿ ಕೂಡ ಗಂಡನ ವಿರುದ್ಧವೇ ಆರೋಪ ಮಾಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment